ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರಗೆ ಮುಂದುವರೆದ ಚಿಕಿತ್ಸೆ: ರಿಪೋರ್ಟ್ ನಾರ್ಮಲ್ ಇದ್ದರೂ ಡಿಸ್ಚಾರ್ಜ್ ಇಲ್ಲ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 16, 2023 | 6:42 PM

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರಗೆ ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಇಂದು ಸಹ ಚಿಕಿತ್ಸೆ ಮುಂದುವರೆದಿದ್ದು, ಎಂಆರ್​ಐ ರಿಪೋರ್ಟ್ ನಾರ್ಮಲ್​​ ಆಗಿದೆ. ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರಗೆ ಮುಂದುವರೆದ ಚಿಕಿತ್ಸೆ: ರಿಪೋರ್ಟ್ ನಾರ್ಮಲ್ ಇದ್ದರೂ ಡಿಸ್ಚಾರ್ಜ್ ಇಲ್ಲ
ಚೈತ್ರಾ ಕುಂದಾಪುರ
Follow us on

ಬೆಂಗಳೂರು, ಸೆಪ್ಟೆಂಬರ್​ 16: ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ (Chaitra Kundapura) ಮತ್ತು ಗ್ಯಾಂಗ್ ಸಂಬಂಧ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹೆಜ್ಜೆ ಹಜ್ಜೆಗೂ ಈ ಚೈತ್ರಾ ಆ್ಯಂಡ್​ ಗ್ಯಾಂಗ್ ಡ್ರಾಮಾ ಮಾಡಿರುವ ಸಂಗತಿಗಳು ಹೊರಗೆ ಬರುತ್ತಿವೆ. ಸಿಸಿಬಿ ಕೈಯಲ್ಲಿ ಲಾಕ್ ಆದ್ಮೇಲೂ ಚೈತ್ರಾ ನಾಟಕ ಮುಂದುವರೆಸಿದ್ದು, ನಿನ್ನೆ ಏನೆನೋ ಮಾಡಿ ಆಸ್ಪತ್ರೆ ಸೇರಿದ್ದರು. ಇಂದು ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಚೈತ್ರಾಗೆ ಚಿಕಿತ್ಸೆ ಮುಂದುವರೆದಿದ್ದು, ಎಂಆರ್​ಐ ರಿಪೋರ್ಟ್ ನಾರ್ಮಲ್​​ ಆಗಿದೆ. ಎಲ್ಲವೂ ನಾರ್ಮಲ್​ ಎಂದು ವರದಿ ಬಂದರೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಬೆಳಗ್ಗೆ ವೈದ್ಯರು ಹೇಳಿದ್ದರು.

ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಾಗಿದೆ

ಟ್ರಾಮಾ ಕೇರ್ ಸೆಂಟರ್​ ವೈದ್ಯಕೀಯ ಅಧೀಕ್ಷಕ ಡಾ.ಬಾಲಾಜಿ ಪೈ ಹೇಳಿಕೆ ನೀಡಿದ್ದು, ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಾಗಿದೆ. ಅವರು ಇನ್ನೂ ನಿತ್ರಾಣವಸ್ಥೆಯಲ್ಲೇ ಇರುವುದರಿಂದ  ಚಿಕಿತ್ಸೆ ಮುಂದುವರಿದಿದೆ. ಚೇತರಿಕೆ ಕಂಡ ಮೇಲೆ ನಾಳೆ ಅಥವಾ ನಾಡಿದ್ದು ವಾರ್ಡ್​ಗೆ ಸ್ಥಳಾಂತರಿಸುತ್ತೇವೆ. ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್​ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಗ್ಯಾಂಗ್​ನಿಂದ ವಂಚನೆ: ಅಭಿನವ ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಿಕೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿದಿದೆ ಎಂದು ಸಿಸಿಬಿ ಅಧಿಕಾರಿಗಳಿಗೆ ನೋಡಲ್ ಆಫೀಸರ್ ಅಸೀಮಾ ಬಾನು ಮಾಹಿತಿ ನೀಡಿದ್ದಾರೆ.

ನನಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಪ್ರಕರಣವಿದು: ಮಾಜಿ ಸಚಿವ ಸುನೀಲ್

ಪ್ರಕರಣದಲ್ಲಿ ಡೀಲ್ ಮಾತುಕತೆಯಲ್ಲಿ ಬಿಜೆಪಿ ಮಾಜಿ ಸಚಿವ ಸುನೀಲ್ ಕುಮಾರ್ ಹೆಸರು ಪ್ರಸ್ತಾಪವಾಗಿದ್ದು, ಈ ಕುರಿತಾಗಿ ಉಡುಪಿ ನಗರದಲ್ಲಿ ಪ್ರತಿಕ್ರಿಯಿಸಿದ್ದು, ನಾನು ಯಾರ ಜೊತೆಗೆ ಫೋನ್‌ನಲ್ಲೂ ಮಾತಾಡಿಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲೂ ಭೇಟಿಯಾಗಿಲ್ಲ. ನನಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಪ್ರಕರಣವಿದು. ಪ್ರಕರಣ ಸಂಬಂಧ ಯಾವುದೇ ರೀತಿಯ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾ ಕುಂದಾಪುರಳನ್ನು ಸ್ಟಾರ್ ಪ್ರಚಾರಕಿಯಾಗಿ ಬಳಿಸಿತ್ತು: ಪ್ರಿಯಾಂಕ್ ಖರ್ಗೆ

ಯಾರು ಯಾರು ಫೋನ್ ಸಂಪರ್ಕ ಮಾಡಿದ್ದಾರೋ ಅವರನ್ನು ಮಟ್ಟಹಾಕಬೇಕು. ರಾಜಕಾರಣಿಯ ಹೆಸರು ಹೇಳಿ, ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ತಪ್ಪು. ಇದು ಯಾವುದೇ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇದು ಇಲ್ಲಿಗೆ ಅಂತ್ಯವಾಗಬೇಕು, ಇಂಥ ಕ್ರಮವನ್ನು ಪೊಲೀಸರು ಕೈಗೊಳ್ಳಲಿ. ಸಿಸಿಬಿ ಅಧಿಕಾರಿಗಳು ಬಂಧಿಸಿರುವವರ ಮುಖ ಪರಿಚಯವೇ ನನಗೆ ಇಲ್ಲ ಎಂದರು.

ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು 4 ಬಾರಿ ಗೆದ್ದು ಬರಲು ಆಗುತ್ತಿರಲಿಲ್ಲ. ಬಿಜೆಪಿ, ರಾಜಕಾರಣಿ ಹೆಸರು ಹೇಳಿ ಅಪಮಾನ ಮಾಡುವರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೇಸ್‌ನ್ನು ಪೊಲೀಸ್ ಇಲಾಖೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:38 pm, Sat, 16 September 23