ಚಾಮರಾಜನಗರ, ಅ.08: ದಾವಣಗೆರೆ(Davanagere) ಜಿಲ್ಲೆಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಈ ಜಕ್ಕಳ್ಳಿ ಎಂಬ ಯುವಕ, ಹೊಸತೊಂದು ಕ್ರಾಂತಿಗೆ ಮುಂದಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ (Fetusicide) ಹಾಗೂ ಪತ್ತೆ ಹಚ್ಚುವುದನ್ನ ತಪ್ಪಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಡಿಜಿಟಲ್ ಕೋಡ್ ನೀಡಬೇಕೆಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದ ಯಾತ್ರೆಯನ್ನ ಕೈಗೊಂಡಿದ್ದಾರೆ.
ಹೌದು, ನೆರೆಯ ರಾಜ್ಯ ಕೇರಳಕ್ಕೆ ಹೊಲಿಕೆ ಮಾಡಿಕೊಂಡು ನಮ್ಮ ರಾಜ್ಯದ ಗಂಡು-ಹೆಣ್ಣು ಸಮಪಾತವನ್ನು ಕಲೆ ಹಾಕಿದರೆ, ನೂರು ಜನಕ್ಕೆ ಶೇಕಡ 92 ರಷ್ಟು ಮಾತ್ರ ಹೆಣ್ಣುಗಳ ಸಂಖ್ಯೆಯಿದೆ. ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚುವುದು ತಾಯಿಯ ಹೊಟ್ಟೆಯಲ್ಲೇ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಿವೆ. ಹಾಗಾಗಿ ಗರ್ಭಧಾರಣೆ ಮಾಡಿದ ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಒಂದು ಡಿಜಿಟಲ್ ಕೋಡ್ ನೀಡಿದ್ರೆ, ಹೆಣ್ಣು ಭ್ರೂಣ ಹತ್ಯೆ ತಡೆಯಬಹುದಾಗಿದೆ.
ಇದನ್ನೂ ಓದಿ:ಮಂಡ್ಯ: ಜೀವಂತವಿದೆ ಭ್ರೂಣ ಹತ್ಯೆ; ಭ್ರೂಣ ಲಿಂಗ ಪತ್ತೆ, ಹತ್ಯೆಗೆ ಬಂದಿದ್ದ ದಂಪತಿ ಪೊಲೀಸರ ವಶ
ಈ ಹಿನ್ನಲೆ ಪ್ರಧಾನಿ ಮೋದಿಯವರ ಡಿಜಿಟಲ್ ಕೋಡ್ ವಿಚಾರವನ್ನು ಪ್ರಸ್ಥಾಪಿಸಲು ಹಾಗೂ ದೇಶಾದ್ಯಂತ ಈ ಕಾನೂನು ತಂದರೆ, ಹೆಣ್ಣು ಭ್ರೂಣ ಹತ್ಯೆಗೆ ಬ್ರೇಕ್ ಹಾಕಬಹುದಾಗಿದೆ. ಹಾಗಾಗಿ ಕನ್ಯಾಕುಮಾರಿಯಿಂದ ದೆಹಲಿಯವರೆಗೂ ಜಕ್ಕಳ್ಳಿಯವರು ಪಾದಯಾತ್ರೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಸೆಳೆಯಲು ಮುಂದಾಗಿದ್ದಾರೆ.
ಅದೇನೆ ಹೇಳಿ ಇನ್ನು ಕೂಡ ಸ್ಕ್ಯಾನಿಂಗ್ ನಡೆಸುವ ವೇಳೆ ಲಿಂಗ ಪತ್ತೆ ಹಚ್ಚುವುದು ಒಂದು ವೇಳೆ ಹೆಣ್ಣಾಗಿದ್ರೆ, ಅದನ್ನು ಅಭಾಷನ್ ಮಾಡಿಸುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದೆ. ಇದೆಲ್ಲದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬ್ರೇಕ್ ಹಾಕಲೇ ಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Sun, 8 October 23