ಅವನೊಬ್ಬ ಎಂಎಲ್​ಎ ಕ್ಯಾಂಡಿಡೇಟ್ ಅನ್ನೊಕೆ ನಾಚಿಕೆ ಆಗುತ್ತೆ: ಗಣೇಶ್​ ಪ್ರಸಾದ್ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ‌ ಮುಖಂಡ

ಅವನ ಆಕಾರ ವಿಕಾರ ನೋಡಿದ್ರೆ ಎಂಎಲ್​​ಎ ಕ್ಯಾಂಡಿಡೆಟ್ ಮುಖಾನಾ ಅದು ಎಂದು ಮಾಜಿ ಸಚಿವ ದಿ.ಮಹದೇಔವಪ್ರಸಾದ್ ಪುತ್ರ ಗಣೇಶ್​ ಪ್ರಸಾದ್ ವಿರುದ್ಧ ಬಿಜೆಪಿ‌ ಮುಖಂಡ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್.ಸುರೇಶ್ ನಾಲಿಗೆ ಹರಿಬಿಟ್ಟಿದ್ದಾರೆ.

ಅವನೊಬ್ಬ ಎಂಎಲ್​ಎ ಕ್ಯಾಂಡಿಡೇಟ್ ಅನ್ನೊಕೆ ನಾಚಿಕೆ ಆಗುತ್ತೆ: ಗಣೇಶ್​ ಪ್ರಸಾದ್ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ‌ ಮುಖಂಡ
ಬಿಜೆಪಿ‌ ಮುಖಂಡ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್.ಸುರೇಶ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 29, 2023 | 3:03 PM

ಚಾಮರಾಜನಗರ: ಅವನೊಬ್ಬ ಎಂಎಲ್​ಎ (MLA) ಕ್ಯಾಂಡಿಡೆಟ್ ಅನ್ನೊಕೆ ನಾಚಿಕೆ ಆಗುತ್ತೆ. ಅವನ ಆಕಾರ ವಿಕಾರ ನೋಡಿದ್ರೆ ಎಂಎಲ್​​ಎ ಕ್ಯಾಂಡಿಡೇಟ್ ಮುಖಾನಾ ಅದು ಎಂದು ಮಾಜಿ ಸಚಿವ ದಿ. ಮಹದೇವಪ್ರಸಾದ್ ಪುತ್ರ ಗಣೇಶ್​ ಪ್ರಸಾದ್ (Ganesh Prasad) ವಿರುದ್ಧ ಬಿಜೆಪಿ‌ ಮುಖಂಡ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಲ್.ಸುರೇಶ್ ನಾಲಿಗೆ ಹರಿಬಿಟ್ಟಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಗಣೇಶ್ ಪ್ರಸಾದ್ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಶಾಸಕ ನಿರಂಜನಕುಮಾರ್​ರನ್ನು ಮೆಚ್ಚಿಸಲು ಎಲ್. ಸುರೇಶ್ ನಾಲಿಗೆ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಮಾತೆತ್ತಿದರೆ ನಮ್ಮ ಅಪ್ಪ-ಅವ್ವ ಅದ್ಭುತವಾಗಿ ಕೆಲಸ ಮಾಡಿದಾರೆ ಅಂತಾರೆ ಎಂದು ಹರಿಹಾಯ್ದರು.

ರಾಜಕೀಯದಲ್ಲಿ ಇನ್ನು ಅಂಬೆಗಾಲು ಇಡುತ್ತಿರುವ ವ್ಯಕ್ತಿ ಅವನು. ಇಷ್ಟು ದಿವಸ ಸಿದ್ದರಾಮಯ್ಯ ಹೆಸರು ಹೇಳಿ ಕುರುಬರನ್ನ ಹಾಳು ಮಾಡಿದ್ರು. ಈಗ ಖರ್ಗೆ ಹೆಸರು ಹೇಳಿ ಹರಿಜನರ ಓಲೈಕೆಗೆ ಮುಂದಾಗಿದ್ದಾರೆ ಎಂದು ಹೇಳಿದರು. ಸದ್ಯ ಅವಹೇಳನಕಾರಿ ಹೇಳಿಕೆಗೆ ಗಣೇಶ್ ಪ್ರಸಾದ್ ಬೆಂಬಲಿಗರು ಕಿಡಿಕಾರಿದ್ದು, ಎಲ್. ಸುರೇಶ್ ವಿರುದ್ಧ ಬೃಹತ್ ಹೋರಾಟ ನಡೆಸಲು ಗುಂಡ್ಲುಪೇಟೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.

ಇದನ್ನೂ ಓದಿ: ಇವರ ಮನೆ ಹಾಳಾಗ ಎಲ್ಲದಕ್ಕೂ ಜಿಎಸ್​ಟಿ ವಿಧಿಸಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಆರೋಪದ ಬಗ್ಗೆ ಯಾರೂ ಉತ್ತರಿಸಲ್ಲ: ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದ್ದೆ. ಆರೋಪಗಳ ಬಗ್ಗೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದ್ದೆ. ಆದರೆ ಈವರೆಗೂ ಬೊಮ್ಮಾಯಿ ಅವರು ಉತ್ತರಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವ ಕೆ.ಸುಧಾಕರ್ ಮೂಲಕ ಮುಖ್ಯಮಂತ್ರಿ ಹೇಳಿಕೆ ಕೊಡಿಸುತ್ತಿದ್ದಾರೆ. ಕೆ.ಸುಧಾಕರ್​ ಸುಳ್ಳಿನ ಸಾಮ್ರಾಟ. ಸುಳ್ಳಿನ ಸಾಮ್ರಾಟನಿಂದ ಬೊಮ್ಮಾಯಿ ಹೇಳಿಕೆ ಕೊಡಿಸುತ್ತಿದ್ದಾರೆ. ಸಚಿವ ಸುಧಾಕರ್ ನಮ್ಮಲ್ಲೇ ಇದ್ದ ಗಿರಾಕಿ ಎಂದರು.

ಆಕ್ಸಿಜನ್​ ದುರಂತ ವೇಳೆ ಚಾಮರಾಜನಗರಕ್ಕೆ ಸುಧಾಕರ್ ಬಂದಿದ್ದ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತರೂ ಮೂವರು ಸತ್ತಿದ್ದಾರೆ ಎಂದಿದ್ದ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಲಿಲ್ಲ. ಡಿ.ಕೆ.ಶಿವಕುಮಾರ್ ಮನೆ‌ಮನೆಗೆ ಹೋಗಿ ಪರಿಹಾರ ಕೊಟ್ಟು ಬಂದರು. ಸುಪ್ರೀಂಕೋರ್ಟ್​ ಆದೇಶಿಸಿದ ನಂತರ ಕೆಲವರಿಗೆ ಪರಿಹಾರ ಕೊಟ್ಟರು ಎಂದರು.

ಇದನ್ನೂ ಓದಿ: ಜೆಡಿಎಸ್​ನ ಮತ್ತೊಂದು ವಿಕೆಟ್ ಪತನ ಬಹುತೇಕ ನಿಶ್ಚಿತ, ಹಾಲಿ ಶಾಸಕ ಕಾಂಗ್ರೆಸ್​ ಸೇರ್ಪಡೆ ಸುಳಿವು ಕೊಟ್ಟ ಧ್ರುವನಾರಾಯಣ

ಬಿಜೆಪಿ ಸುಳ್ಳಿನ ಪಾರ್ಟಿ, ಸುಳ್ಳನ್ನು ತಯಾರು ಮಾಡುವ ಪಾರ್ಟಿ: ಸಿದ್ದರಾಮಯ್ಯ

ಬಿಜೆಪಿ ಸುಳ್ಳಿನ ಪಾರ್ಟಿ, ಸುಳ್ಳನ್ನು ತಯಾರು ಮಾಡುವ ಪಾರ್ಟಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ಮೋದಿ ಬಗ್ಗೆ ನನಗೆ ಗೌರವವಿದೆ, ಆದರೆ ಅವರು ಸುಳ್ಳು ಹೇಳಿದರು. ಎಲ್ಲರ ಬ್ಯಾಂಕ್​ ಖಾತೆಗೂ 15 ಲಕ್ಷ ಕೊಡುತ್ತೇನೆ ಅಂತ ಹೇಳಿದ್ದರು. ಉದ್ಯೋಗ ಕೊಡಿ ಅಂದರೆ ಪಕೋಡ ಮಾರಿ ಎಂದು ಹೇಳಿದರು. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಅಂದರು, ಆದರೆ ಗೊಬ್ಬರದ ಬೆಲೆ ಮೂರು ಪಟ್ಟು ಹೆಚ್ಚಾಯ್ತು. ಅಚ್ಚೇ ದಿನ್ ಬರುತ್ತೆ ಅಂದರು, ಎಲ್ಲಿದೆ? ಅಚ್ಚೆ ದಿನ್ ಪುಡಾರಿಗಳು ಮತ್ತು ಮಂತ್ರಿಗಳಿಗೆ ಬಂತು, ಬಡವರಿಗೆ ಬರಲಿಲ್ಲ. ಮೋದಿಯವರನ್ನು ವಾರಕ್ಕೊಂದು ದಿನ ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಚಾಮರಾಜನಗರಕ್ಕೂ ಬಂದರೂ ಬರಬಹುದು. ಈ ವೇಳೆ ಅಚ್ಚೆ ದಿನ್ ಎಲ್ಲಿ ಅಂತ ಕೇಳಿ ಎಂದರು.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ