BS Yediyurappa: ಯಡಿಯೂರಪ್ಪ ಬರ್ತ್ಡೆ ಹಿನ್ನೆಲೆ ರಿಯಾಯಿತಿ ದರದಲ್ಲಿ 80 ರೈತರಿಗೆ ಟ್ರ್ಯಾಕ್ಟರ್ ವಿತರಿಸಲು ಮುಂದಾದ ಆಪ್ತ
ಬಿ.ಎಸ್.ಯಡಿಯೂರಪ್ಪನವರ 80ನೇ ಹುಟ್ಟುಹಬ್ಬ ಹಿನ್ನೆಲೆ 80 ರೈತರಿಗೆ ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ವಿತರಿಸಲು ಯಡಿಯೂರಪ್ಪ ಆಪ್ತ, ಕೆಆರ್ಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಮುಂದಾಗಿದ್ದಾರೆ.
ಚಾಮರಾಜನಗರ: ಕರ್ನಾಟಕದ ರಾಜಕಾರಣದಲ್ಲಿ ‘ರಾಜಾಹುಲಿ’ ಎಂದೇ ಜನಪ್ರಿಯವಾಗಿರುವ, ಶಿಕಾರಿಪುರ ಎಂದಾಕ್ಷಣ ನೆನಪಾಗುವ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ (BS Yediyurappa) ಅವರು ಇದೇ ಫೆಬ್ರವರಿ 27ರಂದು 80ರ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ ಎಲ್ಲಾ ಜಾತಿ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರ ಜನ್ಮದಿನ ಅಂಗವಾಗಿ ಟ್ರ್ಯಾಕ್ಟರ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ವಿತರಣೆ
ಬಿ.ಎಸ್.ಯಡಿಯೂರಪ್ಪನವರ 80ನೇ ಹುಟ್ಟುಹಬ್ಬ ಹಿನ್ನೆಲೆ 80 ರೈತರಿಗೆ ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ವಿತರಿಸಲು ಯಡಿಯೂರಪ್ಪ ಆಪ್ತ, ಕೆಆರ್ಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಮುಂದಾಗಿದ್ದಾರೆ. ಸದ್ಯ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಕೊಡಲು ಮುಂದಾಗಿದ್ದು, ಸದ್ಯ ಯಾವುದೇ ಮುಂಗಡ ಹಣ ಕಟ್ಟದೆ ಟ್ರ್ಯಾಕ್ಟರ್ ವಿತರಿಸಲಾಗುತ್ತಿದೆ. ಮೊದಲು ಬಂದ 80 ರೈತರಿಗೆ ಆದ್ಯತೆ ಮೇರೆಗೆ ಟ್ರ್ಯಾಕ್ಟರ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಕೂಡ ಅಧ್ಯಕ್ಷ ಎಂ.ರುದ್ರೇಶ್ ಅವರು ಯಡಿಯೂರಪ್ಪ ಜನ್ಮದಿನದ ಅಂಗವಾಗಿ ರೈತರಿಗೆ ಟ್ರ್ಯಾಕ್ಟರ್ ವಿತರಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡದಂತೆ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಮನವಿ
ಕೊರೊನಾ ಹಿನ್ನೆಲೆ ಸರಳವಾಗಿ ಬರ್ತ್‌ಡೇ ಆಚರಿಸಿಕೊಂಡ ರಾಜಾಹುಲಿ
ಈ ಹಿಂದೆ ಕೊರೊನಾ ಹಿನ್ನೆಲೆ ವಿಶೇಷ ರೀತಿಯಲ್ಲಿ ಬರ್ತ್‌ಡೇ ಆಚರಿಸಿಕೊಳ್ತಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡುವ ಮೂಲಕ ಜನರಿಗೆ ತಿಳಿಸಿದ್ದರು. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಹೇಳಿದ್ದರು. ನೀವು ಇರುವ ಕಡೆಯೇ ಹುಟ್ಟುಹಬ್ಬದ ಶುಭಾಶಯ ತಿಳಿಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಈ ಬಾರಿಯ ಬರ್ತ್‌ಡೇ ತುಂಬಾ ಸಡಗರದಿಂದ ಕೂಡಿರುತ್ತೆ ಎನ್ನುತ್ತಿದ್ದಾರೆ. ಬಿಎಸ್‌ವೈ ಅಭಿಮಾನಿಗಳು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಹೆಸರಿಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ: ಡಿಕೆ ಶಿವಕುಮಾರ್
ಬಿಎಸ್‌ವೈ ಆರಂಭಿಕ ದಿನಗಳು
ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದ ಸಿದ್ದಲಿಂಗಯ್ಯ ಹಾಗೂ ಶ್ರೀಮತಿ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27ರಂದು ಜನಿಸಿದ ಸುಪುತ್ರ ಬಿ.ಎಸ್. ಯಡಿಯೂರಪ್ಪ, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿ, 1965ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಈ ಕೆಲಸವೇ ಅವರ ವೈವಾಹಿಕ ಜೀವನ ಪ್ರಾರಂಭವಾಗುವ ಸೇತುವೆಯಾಯಿತು. 1967ರಲ್ಲಿ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ಬಿಎಸ್‌ವೈ ವಿವಾಹವಾದರು. 1972 ರಲ್ಲಿ ಇದೇ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Sat, 11 February 23