AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: 2 ಹುಲಿಗಳ ಮೃತದೇಹ ಪತ್ತೆ ಪ್ರಕರಣ; ವಿಷವಿಕ್ಕಿ ಕೊಂದ್ರ ಅಕ್ಕ-ಪಕ್ಕದ ಜಮೀನಿನ ಮಾಲೀಕರು?

ಕೊತ್ತಲವಾಡಿ ಹೊರ ವಲಯದಲ್ಲಿ ಅನುಮಾನಸ್ಪದವಾಗಿ ಸಿಕ್ಕ ಎರಡು ಹುಲಿಗಳ ಕಳೇಬರ ಪ್ರಕರಣಕ್ಕೆ ಸಂಬಂದಪಟ್ಟಂತೆ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಣಗಣಿಸಿದ್ದು, ಈಗಾಗಲೇ ಸಾವಿನ ಸಿಕ್ರೇಟ್ ತಿಳಿಯುವ ಸಲುವಾಗಿ ಹೈದರಬಾದ್​ನ ಎಫ್​ಎಸ್​ಎಲ್ ಕಚೇರಿಗೆ ಕಳೇಬರದ ಉಗುರು ಹಾಗೂ ಚರ್ಮದ ಸ್ಯಾಂಪಲ್ ಕಳುಹಿಸಿ ಕೊಡಲಾಗಿದೆ. 

ಚಾಮರಾಜನಗರ: 2 ಹುಲಿಗಳ ಮೃತದೇಹ ಪತ್ತೆ ಪ್ರಕರಣ; ವಿಷವಿಕ್ಕಿ ಕೊಂದ್ರ ಅಕ್ಕ-ಪಕ್ಕದ ಜಮೀನಿನ ಮಾಲೀಕರು?
ಹುಲಿ
ಸೂರಜ್ ಪ್ರಸಾದ್ ಎಸ್.ಎನ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Dec 09, 2023 | 8:08 PM

Share

ಚಾಮರಾಜನಗರ, ಡಿ.09: ರಾಜ್ಯದಲ್ಲೇ ಅತಿ ಹೆಚ್ಚು ಹುಲಿ(Tiger)ಗಳನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಗಡಿ ನಾಡು ಚಾಮರಾಜನಗರ(Chamarajanagar) ಜಿಲ್ಲೆಯು, ಈಗ ಅದೇ ಹುಲಿಗಳ ಸಾವಿನ ಸುದ್ದಿಯಿಂದ ಅಪಖ್ಯಾತಿ ಪಡೆಯುತ್ತಿದೆ. ಎರಡು ಹುಲಿಗಳ ಅನುಮಾನಸ್ಪದ ಸಾವಿನ ಸುದ್ದಿಯಿಂದ ರಾಜ್ಯದ ವನ್ಯ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ(ಡಿ.08) ಸ್ಪಾಟ್ ವಿಸಿಟ್ ಮಾಡಿದ ಸಿನಿಯರ್ ಫಾರೆಸ್ಟ್ ಆಫೀಸರ್ಸ್ ‌ಈಗ ಪ್ರಕರಣವನ್ನ ಗಂಭೀರವಾಗಿ ತೆಗೆದು ಕೊಂಡಿದ್ದಾರೆ. ಹುಲಿಗಳ ಕಳೇಬರದ ಉಗುರು ಹಾಗೂ ಚರ್ಮದ ಸ್ಯಾಂಪಲ್ ಕಲೆಕ್ಟ್ ಮಾಡಿರುವ ಪಶು ವೈದ್ಯರು, ಹೈದರಬಾದ್​ನ ಎಫ್​ಎಸ್​ಎಲ್​ಗೆ ಕಳುಹಿಸಿದ್ದು, ರಿಪೋರ್ಟ್ ಗಾಗಿ ಕಾದು ಕುಳಿತಿದ್ದಾರೆ.

ವಿಷವಿಕ್ಕಿ ಕೊಂದ್ರ ಅಕ್ಕ-ಪಕ್ಕದ ಜಮೀನಿನವರು..?

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಈ ಕೊತ್ತಲವಾಡಿ ಗ್ರಾಮದ ಹೊರ ವಲಯದಲ್ಲಿ ಆಗಾಗ ವ್ಯಾಘ್ರಗಳು ಕಾಣಿಸಿಕೊಂಡು ಭಯ ಹುಟ್ಟಿಸಿದ್ದವು, ಮೇಯಲು ಹೋದ ದನು-ಕರುಗಳ ಮೇಲೆ ವ್ಯಾಘ್ರ ದಾಳಿ ಮಾಡಿ ಕೊಂದು ತಿಂದಿತ್ತೆಂಬ ಮಾಹಿತಿ ಸಹ ಆಗಾಗ ಕೇಳಿ ಬರುತ್ತಿತ್ತು. ಹುಲಿಗಳ ಹಾವಳಿಯಿಂದ ಬೇಸತ್ತ ಜನರು, ಕೊಳೆತ ಮಾಂಸದ ಮೇಲೆ ವಿಷ ಹಾಕಿ, ಇದನ್ನು ಭಕ್ಷಿಸಿದ ಹುಲಿಗಳು ಸಾವನ್ನಪ್ಪಿವೆ ಎಂಬ ರೂಮರ್​ಗಳು ಸಹ ಈಗ ಜಿಲ್ಲೆಯಲ್ಲಿ ಓಡಾಡುತ್ತಿದೆ. ಅದೇನೆ ಹೇಳಿ ಎಫ್ಎಲ್ಎಲ್​ಸಿ ವರದಿ ಬಂದ ಬಳಿಕವಷ್ಟೇ ಸತ್ಯಾ ಸತ್ಯತೆ ಆಚೆ ಬರಬೇಕಿದೆ.

ಇದನ್ನೂ ಓದಿ:Mangaluru News: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 15 ವರ್ಷದ ಹೆಣ್ಣು ಹುಲಿ ಸಾವು

ಒಟ್ಟಾರೆ ಎರೆಡೆರೆಡು ವ್ಯಾಘ್ರಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆಯಿಂದ ತಲೆ ಕೆಡೆಸಿಕೊಂಡಿರುವ ಅರಣ್ಯಾ ಇಲಾಖಾ ಸಿಬ್ಬಂದಿ ಹಾಗೂ ತೆರಕಣಾಂಬಿ ಪೊಲೀಸರು ಸಾವಿನ ಅಸಲಿ ಕಾರಣವೇನು ಎಂಬುದನ್ನ ತಿಳಿಯಲು ಹಿಂದೆ ಬಿದ್ದಿದ್ದು, ಆದಷ್ಟು ಬೇಗ ವ್ಯಾಘ್ರ ಹಂತಕರ ಹಿಂದೆ ಬಿದ್ದಿದ್ದು ಆದಷ್ಟು ಬೇಗ ಹಂತಕರ ಕೈಗೆ ಕೋಳ ತೊಡಿಸುವ ಭರವಸೆಯನ್ನ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More