ಚಾಮರಾಜನಗರ: ಬಂಡೀಪುರಕ್ಕೆ ತೆರಳಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ

ಬೆಂಗಳೂರಿನ ಜೆ. ನಿಶಾಂತ್, ಅವರ ಪತ್ನಿ ಚಂದನಾ ಮತ್ತು 10 ವರ್ಷದ ಮಗು ಬಂಡೀಪುರದ ಬಳಿ ನಾಪತ್ತೆಯಾಗಿದ್ದಾರೆ. ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ನಿಶಾಂತ್ ಬಿಬಿಎಂಪಿ ನೌಕರ ಎಂದು ನಕಲಿ ಐಡಿಯಿಂದ ರೂಮ್ ಬುಕ್ ಮಾಡಿದ್ದರು. ಪೊಲೀಸರು ತಮಿಳುನಾಡು, ಕೇರಳ ಮತ್ತು ಮೈಸೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಬಂಡೀಪುರಕ್ಕೆ ತೆರಳಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ
ಜೆ.ನಿಶಾಂತ್, ಚಂದನಾ
Edited By: ವಿವೇಕ ಬಿರಾದಾರ

Updated on: Mar 04, 2025 | 10:39 AM

ಚಾಮರಾಜನಗರ, ಮಾರ್ಚ್​ 04: ಗುಂಡ್ಲುಪೇಟೆ (Gundlupete) ತಾಲೂಕಿನ ಬಂಡೀಪುರಕ್ಕೆ (Bandipur) ತೆರಳಿದಿದ್ದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದೆ. ಬಂಡೀಪುರ ಬಳಿಯ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ಕುಟುಂಬ ಭಾನುವಾರ (ಮಾ.02) ರಾತ್ರಿ ವಾಸ್ತವ್ಯ ಹೂಡಿತ್ತು. ಸೋಮವಾರ (ಮಾ.03) ಮಧ್ಯಾಹ್ನದಿಂದ ಕುಟುಂಬ ನಾಪತ್ತೆಯಾಗಿದೆ. ಬೆಂಗಳೂರು ಮೂಲದ ಜೆ.ನಿಶಾಂತ್ (40), ಪತ್ನಿ ಚಂದನಾ ಮತ್ತು 10 ವರ್ಷದ ಗಂಡು ಮಗು ನಾಪತ್ತೆಯಾಗಿದ್ದಾರೆ. ಜೆ.ನಿಶಾಂತ್ ಬ್ಯಾಗ್​ ಕಂಟ್ರಿ ಕ್ಲಬ್ ರೆಸಾರ್ಟ್​​ನಲ್ಲೇ ಇವೆ.

ರೆಸಾರ್ಟ್​ನಲ್ಲಿ ಲಗೇಜ್ ಬಿಟ್ಟು ಮೂವರು ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಕಾರಿನಲ್ಲಿ ಬಂಡೀಪುರ ಮಂಗಲ ರಸ್ತೆಯವರೆಗೆ ಹೋದವರು, ಅಲ್ಲಿಂದ ನಾಪತ್ತೆಯಾಗಿದ್ದಾರೆ. ಇನ್ನು, ಕುಟುಂಬ ನಾಪತ್ತೆಯಾದ ವಿಚಾರ ತಿಳಿದು ಚಾಮರಾಜನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಕುಟುಂಬ ನಾಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್

ನಿಶಾಂತ್ ಬಿಬಿಎಂಪಿ ನೌಕರ ಎಂದು ಹೇಳಿಕೊಂಡು ನಕಲಿ ಐಡಿ​ ನೀಡಿ ರೂಮ್ ಬುಕ್ ಮಾಡಿದ್ದನು. ನಾಪತ್ತೆಯಾಗಿರುವ ನಿಶಾಂತ್ ಮೈತುಂಬಾ ಸಾಲ ಮಾಡಿಕೊಂಡಿದ್ದನು. ನಿಶಾಂತ್ ಸದ್ಯ ಯಾವುದೇ ಕೆಲಸ ಕಾರ್ಯ ಮಾಡುತ್ತಿರಲಿಲ್ಲ. ನಿಶಾಂತ್ ಸಾಲಕ್ಕೆ ಹೆದರಿ ಕುಟುಂಬದ ಜತೆ ಬಂಡೀಪುರಕ್ಕೆ ತೆರಳಿದ್ದನು. ಸಾಲಗಾರರು ಅಪಹರಿಸಿರುವ ಶಂಕೆಯಿಂದ ಪೊಲೀಸರಿಂದ ತಲಾಶ್ ನಡೆಸಿದ್ದಾರೆ. ತಮಿಳುನಾಡು, ಕೇರಳ ಹಾಗೂ ಮೈಸೂರು ಸೇರಿದಂತೆ ಹಲವೆಡೆ ಹುಡುಕಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Tue, 4 March 25

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Loading...
Unable to load recommendations.
Follow Us