AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಚಿರತೆ ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರಿಗೆ ಗಾಯ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿನ ಜಮೀನಿಗೆ ನುಗ್ಗಿದ್ದ ಚಿರತೆಯನ್ನು ಓಡಿಸಲು ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ತೆರಳಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ಚಿರತೆ ಓಡಿಸಲು ಗುಂಡು ಹಾರಿಸಿದ್ದಾರೆ. ಈ ಗುಂಡು ತಗುಲಿ ನಾಲ್ವರು ಗಾಯಗೊಂಡಿದ್ದಾರೆ.

ಚಾಮರಾಜನಗರ: ಚಿರತೆ ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರಿಗೆ ಗಾಯ
ಚಿರತೆ, ಗಾಯಗೊಂಡವರು
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Sep 20, 2024 | 11:34 AM

Share

ಚಾಮರಾಜನಗರ, ಸೆಪ್ಟೆಂಬರ್​ 20: ಗಡಿನಾಡು ಚಾಮರಾಜನಗರದಲ್ಲಿ (Chamarajanagar) ಮಾನವ – ಕಾಡುಪ್ರಾಣಿ ಸಂಘರ್ಷ ಮಿತಿ ಮೀರಿದೆ. ಚಿರತೆ (Leopard) ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರು ಗಾಯಗೊಂಡಿರುವ ಘಟನೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತರ ಜಮೀನಿನಲ್ಲಿ ಅಡಗಿದ್ದ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹೋಗಿದ್ದವರು. ಅರಣ್ಯ ಸಿಬ್ಬಂದಿ ಜೊತೆಗೆ ಗ್ರಾಮಸ್ಥರು ಕೂಡ ತೆರಳಿದ್ದರು. ಈ ವೇಳೆ ಚಿರತೆ ಅರಣ್ಯ ಸಿಬ್ಬಂದಿ ಮೇಲೆ ಮಾಡಲು ಯತ್ನಿಸಿದೆ. ಅರಣ್ಯ ಸಿಬ್ಬಂದಿ ಕೂಡಲೆ ಚಿರತೆ ಓಡಿಸಲು ಗುಂಡು ಹಾರಿಸಿದ್ದಾರೆ. ಈ ಗುಂಡು ತಗುಲಿ ಮದ್ದೂರಿನ ರವಿ, ಶಿವು, ರಂಗಸ್ವಾಮಿ, ಮೂರ್ತಿ ಎಂಬುವರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಗಾಯವಾಗಿದ್ದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗೆ ದೊಣ್ಣೆಯಿಂದಲೂ ಹೊಡೆದಾಗ ಚಿರತೆ ಸತ್ತಿರುವ ಶಂಕೆ ವ್ಯಕ್ತವಾಗಿದೆ.

ವಿಆರ್​ಎಲ್ ಬಸ್ ಹರಿದು 125 ಕುರಿಗಳ ಸಾವು

ರಾಯಚೂರು: ವಿಆರ್​ಎಲ್ ಬಸ್ ಹರಿದು 125 ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್​ನಲ್ಲಿ ನಡೆದಿದೆ. ವಿಆರ್​ಎಲ್ ಬಸ್ ಹೈದರಾಬಾದ್​ನಿಂದ ಬೆಳಗಾವಿಗೆ ಹೊರಟಿತ್ತು. ತೆಲಂಗಾಣದ ಮಕ್ತಲ್ ಬಳಿಯ ಓಬಳಾಪುರಂ ಗ್ರಾಮದ ಮಲ್ಲೇಶ್, ಸೀನಪ್ಪ ಮತ್ತು ಬಾಲರಾಜು ಎಂಬುವರಿಗೆ ಸೇರಿದ 150 ಕ್ಕೂ ಹೆಚ್ಚು ಕುರಿಗಳು ತೆಲಂಗಾಣದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದವು. ಈ ವೇಳೆ ಚಾಲಕನ‌ ನಿಯಂತ್ರಣ ತಪ್ಪಿ ವಿಆರ್​ಎಲ್ ಬಸ್ ಕುರಿಗಳ ಮೇಲೆ ಹರಿದಿದೆ. ಘಟನೆಯಲ್ಲಿ 125 ಕುರಿಗಳು ಮೃತಪಟ್ಟಿವೆ, 18 ಕುರಿಗಳ ಸ್ಥಿತಿ ಗಂಭೀರವಾಗಿದೆ.

ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕುರಿಗಾಹಿಗರು ಪಾರಾಗಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:20 am, Fri, 20 September 24