ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು!

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ಮುಳ್ಳುಹಂದಿ ಬೇಟೆಯಾಡಲು ಹೋದ ಚಿರತೆಯೊಂದು ಪ್ರಾಣ ಕಳೆದುಕೊಂಡಿದೆ. ತನ್ನ ರಕ್ಷಣೆಗಾಗಿ ಮುಳ್ಳುಹಂದಿ ಮಾಡಿದ ಪ್ರತಿ ದಾಳಿಯಿಂದ ಅದರ ಮುಳ್ಳುಗಳು ಚಿರತೆಯ ಎದೆಗೆ ಬಲವಾಗಿ ತಗುಲಿವೆ. ಹೃದಯಕ್ಕೆ ಮುಳ್ಳು ತಗುಲಿದ ಕಾರಣ ತೀವ್ರ ಆಂತರಿಕ ರಕ್ತಸ್ರಾವವಾಗಿ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ.

ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು!
ಸಾಂದರ್ಭಿಕ ಚಿತ್ರ
Edited By:

Updated on: Mar 02, 2026 | 7:53 AM

ಚಾಮರಾಜನಗರ, ಮಾ.2: ಕಾಡಿನ ಕ್ರೂರ ಬೇಟೆಗಾರ ಚಿರತೆಯೊಂದು ತನ್ನ ಆಹಾರಕ್ಕಾಗಿ ನಡೆಸಿದ ಪ್ರಯತ್ನವೇ ಅದಕ್ಕೆ ಮುಳುವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ನಡೆದಿದೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಕಾದಾಟ ಉಂಟಾಗುವುದು ಸಹಜ, ಹುಲಿ, ಸಿಂಹ, ಚಿರತೆಗಳು ಹಾಗೂ ಆನೆಗಳ ಮೇಲೆ ಅಷ್ಟೊಂದು ಸುಲಭದಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಚಿಕ್ಕ ಮುಳ್ಳುಹಂದಿಯೊಂದು ಚಿರತೆಯನ್ನು ಸೋಲಿಸಿ, ಕೊಂದಿದೆ. ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯು, ಹಂದಿಯ ತೀಕ್ಷ್ಣವಾದ ಮುಳ್ಳಿನೇಟಿಗೆ ಸಿಲುಕಿ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ರಂಗನಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಹಸಿವಿನಿಂದಿದ್ದ ಚಿರತೆಯೊಂದು ಮುಳ್ಳುಹಂದಿಯನ್ನು ಕಂಡ ಕೂಡಲೇ ಅದರ ಮೇಲೆರಗಿದೆ. ಆದರೆ, ತನ್ನ ರಕ್ಷಣೆಗಾಗಿ ಮುಳ್ಳುಹಂದಿ ‘ರಿವರ್ಸ್ ಅಟ್ಯಾಕ್’ ಮಾಡಿದಾಗ, ಅದರ ಮೈಮೇಲಿದ್ದ ಉದ್ದನೆಯ ಮತ್ತು ಚೂಪಾದ ಮುಳ್ಳುಗಳು ಚಿರತೆಯ ಎದೆಯ ಭಾಗಕ್ಕೆ ಬಲವಾಗಿ ತಾಕಿವೆ.

ಇದನ್ನೂ ಓದಿ: ಬೆಂಗಳೂರಿನ ಗಾಳಿಯಮಟ್ಟ ಕಳಪೆ, ಉಸಿರಾಟದ ತೊಂದರೆ ಕಾಡುವುದು

ಇಂದು ಬೆಳಿಗ್ಗೆ ಫಾರೆಸ್ಟ್ ವಾಚರ್ಸ್ ಬೀಟ್ ಹೋಗಿದ್ದಾಗ ಚಿರತೆಯ ಶವ ಪತ್ತೆಯಾಗಿದೆ. ಪಶುವೈದ್ಯರು ಸ್ಥಳದಲ್ಲೇ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಂದಿದೆ. ಮುಳ್ಳುಹಂದಿಯ ಮುಳ್ಳು ಚಿರತೆಯ ಎದೆಯ ಮೂಲಕ ನೇರವಾಗಿ ಹೃದಯಕ್ಕೆ (Heart) ತಗುಲಿದೆ. ಇದರಿಂದಾಗಿ ತೀವ್ರವಾದ ಆಂತರಿಕ ರಕ್ತಸ್ರಾವ (Internal Bleeding) ಉಂಟಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us