ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್​: ಉರುಳು ಹಾಕಿದ್ದ ಆರೋಪಿ ಅರೆಸ್ಟ್

ಚಾಮರಾಜನಗರದ ಗುಂಡಾಲ್ ಜಲಾಶಯದಲ್ಲಿ ಕೊರಳಿಗೆ ಉರುಳು ಸಿಲುಕಿ ಗಂಡು ಹುಲಿ ಸಾವನ್ನಪ್ಪಿದ ಪ್ರಕರಣದ ತನಿಖೆ ಚುರುಕುಗೊಂಡಿತ್ತು. ಇದೀಗ ಉರುಳನ್ನ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಅರೆಸ್ಟ್​ ಆಗಿದ್ದಾರೆ. ಬೈಕ್ ಕ್ಲಚ್ ವೈರ್ ಬಳಸಿ ಹಾಕಿದ್ದ ಉರುಳಿಗೆ ಸಿಕ್ಕಿ ಗುಂಡಾಲ್ ಜಲಾಶಯದ ಬಳಿ ಹುಲಿ ಪ್ರಾಣ ಬಿಟ್ಟಿತ್ತು.

ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್​: ಉರುಳು ಹಾಕಿದ್ದ ಆರೋಪಿ ಅರೆಸ್ಟ್
ಆರೋಪಿಯನ್ನ ಬಂಧಿಸಿದ ಅರಣ್ಯಾಧಿಕಾರಿಗಳು
Image Credit source: tv9 kannada
Edited By:

Updated on: Feb 20, 2026 | 4:06 PM

ಚಾಮರಾಜನಗರ, ಫೆಬ್ರವರಿ 20: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ್ಲಿ ಇತ್ತೀಚೆಗೆ ನಡೆದಿದ್ದ ಉರುಳಿಗೆ ಸಿಲುಕಿ ಹುಲಿ ಸಾವು ಪ್ರಕರಣಕ್ಕೆ (Tiger death case) ಸಂಬಂಧಿಸಿದಂತೆ ಇದೀಗ ಉರುಳು ಹಾಕಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ (arrest). ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ ಬೇಟೆಗಾರ. ಆರೋಪಿ ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ. ಕೊಳ್ಳೇಗಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹ

ಫೆಬ್ರವರಿ 15ರಂದು ಬೃಹದಾಕಾರದ ಗಂಡು ಹುಲಿಯ ಮೃತದೇಹವೊಂದು ಗುಂಡಾಲ್ ಜಲಾಶಯದಲ್ಲಿ ತೇಲುತ್ತಿತ್ತು. ಸ್ಥಳಕ್ಕೆ ಭೇಟಿ ಕೊಟ್ಟ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆಯಲ್ಲಿ ಕತ್ತಿಗೆ ಉರುಳು ಸಿಲುಕಿ ಪರದಾಡಿ ಬಳಿಕ ನೀರು ಕುಡಿಯಲು ಬಂದಾಗ ನೀರಿನಲ್ಲಿ ಹುಲಿ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ತಿಳಿದುಬಂದಿತ್ತು.

ಇದನ್ನೂ ಓದಿ: ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ಇನ್ನು ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನ ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಹಾಗಾಗಿ ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್​ ಕ್ಲಚ್ ಕೇಬಲ್​ನ ಮೂಲಕ ಉರಳನ್ನ ಸಿದ್ಧಪಡಿಸಿ ಬೇಲಿ ಬಳಿ ಹಾಕಿರುತ್ತಾರೆ.

ಆರೋಪಿ ಜೊತೆ ಹಲವರು ಕೃತ್ಯವೆಸಗಿರುವ ಶಂಕೆ 

ಮೃತ ಹುಲಿ 6 ವರ್ಷದ ಗಂಡು ಹುಲಿ ಆಗಿದ್ದು, ಬರೋಬ್ಬರಿ 150 ಕೆಜಿಯಷ್ಟು ತೂಕವಿತ್ತು. ಇನ್ನು ಪೊಲೀಸರು ಉರುಳು ಹಾಕಿದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿದ್ದರು. ಅದರಂತೆ ಇದೀಗ ಓರ್ವ ಬೇಟೆಗಾರನ ಬಂಧನವಾಗಿದೆ. ಬೈಕ್ ಕ್ಲಚ್ ವೈರ್ ಬಳಸಿ ವನ್ಯಜೀವಿ ಬೇಟೆಗೆ ಆರೋಪಿ ಕುಮಾರ್ ಉರುಳು ಹಾಕಿದ್ದ.

ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ

ಆಹಾರ ಅರಸಿ ಬಂದಿದ್ದ ಹುಲಿ, ಉರುಳಿಗೆ ಸಿಲುಕಿ ನರಳಾಡಿ ಕೊನೆಗೆ ಗುಂಡಾಲ್ ಜಲಾಶಯದಲ್ಲಿ ಪ್ರಾಣ ಬಿಟ್ಟಿತ್ತು. ಕುಮಾರ್ ಜೊತೆ ಇನ್ನಿತರರು ಸೇರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us