ಸ್ಥಳೀಯರು, ಶಾಸಕರ ವಿರೋಧದ ನಡುವೆ ಮಲೈಮಹದೇಶ್ವರ ವನ್ಯಜೀವಿಧಾಮ ಹುಲಿರಕ್ಷಿತಾರಣ್ಯವಾಗಿ ಪರಿವರ್ತನೆ

ಮಲೈಮಹದೇಶ್ವರ ವನ್ಯಜೀವಿಧಾಮವನ್ನ ಹುಲಿರಕ್ಷಿತಾರಣ್ಯ ಮಾಡೋಕೆ ಕೇವಲ ಒಂದು‌ ಮೆಟ್ಟಿಲಷ್ಟೇ ಬಾಕಿ‌ ಇದೆ. ಆದರೆ ಹುಲಿ ಸಂರಕ್ಷಿತಾರಣ್ಯಕ್ಕೆ ಸ್ಥಳಿಯರು‌ ಜನಪ್ರತಿನಿಧಿಗಳು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹನೂರು ಶಾಸಕ ಒಂದು ಹೆಜ್ಜೆ ಮುಂದೆ ಹೋಗಿ ಹುಲಿಗಳನ್ನೆ ಮಲೈಮಹದೇಶ್ವರ ಅರಣ್ಯದಿಂದ ಶಿಫ್ಟ್ ಮಾಡಿ ಅಂತ ವರಸೆ ತೆಗೆದಿದ್ದಾರೆ.

ಸ್ಥಳೀಯರು, ಶಾಸಕರ ವಿರೋಧದ ನಡುವೆ ಮಲೈಮಹದೇಶ್ವರ ವನ್ಯಜೀವಿಧಾಮ ಹುಲಿರಕ್ಷಿತಾರಣ್ಯವಾಗಿ ಪರಿವರ್ತನೆ
ಚಾಮರಾಜನಗರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 19, 2022 | 1:54 PM

ಚಾಮರಾಜನಗರ: ಜಿಲ್ಲೆಯನ್ನು ಹುಲಿಗಳ ನಾಡು ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳನ್ನ ಪೋಷಿಸುತ್ತಿರುವ ಅರಣ್ಯ ಚಾಮರಾಜನಗರ ಜಿಲ್ಲೆಯ ಅರಣ್ಯಗಳು. ಈಗಾಗಲೇ ಜಿಲ್ಲೆಯಲ್ಲಿ ಬಂಡೀಪುರ ಹಾಗೂ ಬಿಳಿಗಿರಿ ರಂಗನಬೆಟ್ಟ ಹುಲಿಸಂರಕ್ಷಿತಾರಣ್ಯಗಳಿವೆ. ಇತ್ತೀಚಿನ ವರ್ಷಗಳಲ್ಲಿ ಮಲೈ ಮಹದೇಶ್ವರ ವನ್ಯಧಾಮದಲ್ಲಿಯು (Male Mahadeshwara wildlife sanctuary) ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ 25 ರಿಂದ 30 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಈ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಅರಣ್ಯವನ್ನು ಹುಲಿಸಂರಕ್ಷಿತ ಪ್ರದೇಶ (Tiger Reserve Area) ಮಾಡುವ ಪ್ರಸ್ತಾವನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.

ಈ ವಿಚಾರವಾಗಿ ಮುಖ್ಯಮಂತ್ರಿಗಳ ಟೇಬಲ್​ನಲ್ಲಿ ಈಗಾಗಲೇ ಪ್ರಸ್ತಾವನೆ ಕೂಡ ಹೋಗಿದೆ. ಇದೀಗ ಸಿಎಂ ಒಂದು ಸಹಿ ಹಾಕಿದರೆ ಸಾಕು ಇದು ಜಿಲ್ಲೆಯ ಮೂರನೇ ಹುಲಿಸಂರಕ್ಷಿತಾರಣ್ಯ ಮಲೈಮಹದೇಶ್ವರ ವನ್ಯಜೀವಿಧಾಮ ಎಂದು ಘೋಷಣೆಯಾಗುತ್ತದೆ. ಆದರೆ ಈ ವನ್ಯದಾಮವನ್ನು ಹುಲಿಸಂರಕ್ಷಿತಾರಣ್ಯ ಘೋಷಣೆಮಾಡಲು ಸಾಕಷ್ಟು ವಿರೋಧವನ್ನು ಸ್ಥಳಿಯರು ಹಾಗೂ ಜನಪ್ರತಿನಿಧಿಗಳು ತೋರುತ್ತಿದ್ದಾರೆ.

ಹನೂರು ಶಾಸಕ ನರೇಂದ್ರ ಅವರು ಮಾತನಾಡಿ, ಇಡೀ ಅರಣ್ಯದಲ್ಲಿ 10-12 ಹುಲಿಗಳಿದ್ದಾವೆ, ಈ ಹುಲಿಗಳನ್ನ ಬೇರೆ ಅರಣ್ಯಕ್ಕೆ ಶಿಫ್ಟ್ ಮಾಡಿ. ಇಲ್ಲದಿದ್ದರೆ, ಇಲ್ಲಿನ 15 ಸಾವಿರ ಜನರಿಗೆ ಕಷ್ಟವಾಗುತ್ತದೆ ಎನ್ನುತ್ತಿದ್ದಾರೆ. ಈಗಾಗಲೇ ಬಂಡೀಪುರ ಅರಣ್ಯದ ಸುತ್ತಮುತ್ತ ಸಾಯಂಕಾಲದಿಂದ ಬೆಳಿಗ್ಗೆಯವರೆಗೆ ಜನಸಂಚಾರವನ್ನು ನಿಷೇದ ಮಾಡಲಾಗಿದೆ. ಇವಾಗ ಮಲೈಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತಾರಣ್ಯವಾಗಿ ಮಾಡಿದರೆ ರಾತ್ರಿ ಹೊತ್ತು ಆರೋಗ್ಯ ಸಮಸ್ಯೆ ಎದುರಾದರೆ ಓಡಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ.

ಇಷ್ಟೊಂದು ವಿರೋಧಕ್ಕೆ ಪ್ರಮುಖ ಕಾರಣ ಅಂದರೆ ಹುಲಿ ಸಂರಕ್ಷಿತಾರಣ್ಯವಾದರೆ ಕಠಿಣ ಕಾನೂನು ಜಾರಿಯಾಗುತ್ತದೆ. ಇದರಿಂದ ಬುಡಕಟ್ಟು ಜನರು, ಕಾಡಿನಲ್ಲಿರುವ ಬೇಡಗಂಪಣ್ಣ ಜನಾಂಗದವರಿಗೆ ಮೂಲಭೂತ ಸೌಕರ್ಯಗಳು ಸೀಗುವುದಿಲ್ಲ. ಜೊತೆಗೆ ಮಲೈಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೂ ತೊಂದರೆಯಾಗುತ್ತದೆ ಎನ್ನುವುದು ಪ್ರಮುಖ ಕಾರಣವಾಗಿದೆ. ಆದರೆ ಈ ಬಗ್ಗೆ ವನ್ಯಜೀವಿ ತಜ್ಞರು ಹುಲಿ ಸಂರಕ್ಷಿತಾರಣ್ಯ ಎಂದು ಘೋಷಣೆಯಾದರೆ ಅರಣ್ಯ ಹಾಗೂ ವನ್ಯಜೀವಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಉಳಿದ ಅರಣ್ಯಗಳ ಉಳಿವಿಗೂ ಸಹಕಾರಿಯಾಗಲಿದೆ. ಈ‌ ಕಾರಣದಿಂದ ಆದಷ್ಟು ಬೇಗ ಇದನ್ನು ಹುಲಿ ಸಂರಕ್ಷಿತಾರಣ್ಯ ಮಾಡಲಿ ಎನ್ನುತ್ತಿದ್ದಾರೆ.

ಇದನ್ನೂ ಓದಿ:ತಮ್ಮೂರಲ್ಲಿ ಬಸ್ ನಿಲ್ಲಿಸದ ಕಾರಣ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಚಾಮರಾಜನಗರ-ಮೈಸೂರು ಹೆದ್ದಾರಿ ಬಂದ್ ಮಾಡಿದರು!

ಒಟ್ಟಾರೆಯಾಗಿ ಹುಲಿ ಸಂರಕ್ಷಿತಾರಣ್ಯ ಘೋಷಣೆ ಮಾಡಬಾರದು. ಇದರ ಬದಲು ಹುಲಿಗಳನ್ನೆ ಸ್ಥಳಾಂತರ ಮಾಡಿ ಎಂದು ಶಾಸಕರು ಹೇಳುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಯಾವ ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.

ವರದಿ-ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:58 pm, Sat, 19 November 22