ಮೂಢನಂಬಿಕೆ: ಮಾಂತ್ರಿಕನ ಮಾತು ಕೇಳಿ ಮನೆಯಲ್ಲಿ ಬಾವಿ ತೋಡಿದ್ರು, ಸಾವಿರಾರು ರೂಪಾಯಿ ಕಳ್ಕೊಂಡು ಊರು ಬಿಟ್ರು

ಅವ್ರಿಬ್ರು ಬಡ ದಂಪತಿ ಬಡತನ ಇದ್ರೂ ಹೇಗೋ ಜೀವನ ನಡೀತಿತ್ತು. ಆದ್ರೆ, ಅವನೊಬ್ಬ ಮಾಂತ್ರಿಕ ಅವರ ತಲೆ ಕೆಡಿಸಿದ್ದ. ಮನೆಯಲ್ಲಿ ನಿಧಿ ಅಡಗಿದೆ ಅಂತೇಳಿದ್ದ ಅವನ ಮಾತು ನಂಬಿದವರು, ಮನೆಯನ್ನೇ ಬಿಡುವಂತಾಗಿದೆ.

ಮೂಢನಂಬಿಕೆ: ಮಾಂತ್ರಿಕನ ಮಾತು ಕೇಳಿ ಮನೆಯಲ್ಲಿ ಬಾವಿ ತೋಡಿದ್ರು, ಸಾವಿರಾರು ರೂಪಾಯಿ ಕಳ್ಕೊಂಡು ಊರು ಬಿಟ್ರು
ಮನೆಯಲ್ಲಿ ಬಾವಿ ತೋಡಿ ಪೂಜೆ ಮಾಡಿರುವ ದಂಪತಿ

ಚಾಮರಾಜನಗರ: ಮೂಢ ನಂಬಿಕೆ ಅನ್ನೋದು ತಲೆಗೆ ಹತ್ತಿಬಿಟ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ. ಅಂದಹಾಗೇ, ಚಾಮರಾಜನಗರದ ಅಮ್ಮನಪುರ ಗ್ರಾಮದ ಸೋಮಣ್ಣ ಅನ್ನೋರ ಈ ಮನೆಯಲ್ಲಿ ಕೆಲ ದಿನಗಳ ಹಿಂದೆ ಹಾವುಗಳು ಕಾಣಿಸಿಕೊಂಡಿದ್ವು ಇದರಿಂದ, ಹೆದರಿದ ಮನೆವರು ಕೇರಳ ಮೂಲದ ಮಾಂತ್ರಿಕನ ಬಳಿ ಜ್ಯೋತಿಷ್ಯ ಕೇಳಿದ್ದಾರೆ. ಆದ್ರೆ, ಆ ಆಸಾಮಿ, ನಿಮ್ಮ ಮನೆಯಲ್ಲಿ ನಿಧಿಯಿದೆ. ಸರ್ಪಗಳು ನಿಧಿ ಕಾಯುತ್ತಿದೆ ಅಂತ ಪುಂಗಿ ಬಿಟ್ಟಿದ್ದಾನೆ. ಈ ಮಾತನ್ನೇ ನಂಬಿ ವಾರಗಟ್ಟಲೇ ದಂಪತಿ ಪೂಜೆ ಮಾಡಿದ್ದಾರೆ. 10 ದಿನ ಕಾಲ ಅಕ್ಕಪಕ್ಕದವ್ರಿಗೂ ಗೊತ್ತಾಗಂತೆ ಮನೆಯಲ್ಲಿ ಗುಂಡಿ ತೆಗೆದಿದ್ದಾರೆ. ಆದ್ರೆ, 20 ಅಡಿ ಆಳ ತೆಗೆದ್ರೂ, ಮಣ್ಣು ಬಿಟ್ರೆ ಇನ್ನೇನೂ ಸಿಕ್ಕಿಲ್ಲ.

ಇನ್ನು, ಹತ್ತು ದಿನವಾದ್ರೂ ಸೋಮಣ್ಣ ಮನೆಯಿಂದ ಹೊರಬಾರದೆ ಇದದ್ದು, ಸ್ಥಳೀಯರಿಗೆ ಆತಂಕ ಹುಟ್ಟಿಸಿತ್ತು. ನಂತರ, ಪೊಲೀಸರಿಗೆ ವಿಷ್ಯ ಮುಟ್ಟಿಸಿದ್ರು. ಖಾಕಿ ಟೀಂ ಸ್ಥಳಕ್ಕೆ ಬಂದಾಗಲೇ, ನಿಧಿ ವಿಚಾರ ಬಯಲಾಗಿದೆ. ಫೋರ್ ಬೈ ಫೋರ್ ಅಳತೆಯ ಬಾವಿ ತೋಡಿ, ಅಡುಗೆ ಮನೆಗೆ ಮಣ್ಣು ಸುರಿದಿದ್ರು. ಮನೆಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಮಣ್ಣು ಆವರಿಸಿತ್ತು. ಯಾವಾಗ ತಾನು ಮೋಸ ಹೋಗಿದ್ದೀನಿ ಅನ್ನೋದು ಗೊತ್ತಾಯ್ತು, ಸೋಮಣ್ಣ ಊರನ್ನೇ ಬಿಟ್ಟಿದ್ದಾನೆ.. ಇನ್ನು, ಮಂತ್ರವಾದಿಯನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಏನೇ ಹೇಳಿ, ಬಡತನ ಇದ್ರೂ ನೆಮ್ಮದಿಯಾಗಿ ಬದುಕು ದೂಡ್ತಿದ್ರು.. ಆದ್ರೆ, ಮಂತ್ರವಾದಿಯ ಮಾತು ಕೇಳಿ, ಮನೆಯನ್ನೇ ಅಗೆದು ಹಾಕಿದ್ದಾರೆ.. ಮಾಡಿರೋ ಕೆಲಸದಿಂದ ಜನರಿಗೆ ಮುಖ ತೋರಿಸಲಾಗಿದೆ ಊರನ್ನೇ ಬಿಟ್ಟಿದ್ದಾರೆ.

ಇದನ್ನೂ ಓದಿ: ಕೂತ ಜಾಗದಲ್ಲೇ ಲಕ್ಷ ಲಕ್ಷ ಗಳಿಸೋ ಆಮಿಷ, ಟವರ್ ಟ್ರೇಡಿಂಗ್’ ಆ್ಯಪ್ ಮೂಲಕ ಜನರಿಗೆ ಮೋಸ

Read Full Article

Click on your DTH Provider to Add TV9 Kannada