ಚಾಮರಾಜನಗರದಲ್ಲಿ ಕಾಂಗ್ರೆಸ್ ಶಾಸಕನ ವಿರುದ್ಧ ತಿರುಗಿ ಬಿದ್ದ ದಲಿತ ಮುಖಂಡರು
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳಲ್ಲಿ ಬಿನ್ನಮತ ಸಾಮಾನ್ಯ. ಆದರೆ ಚಾಮರಾಜನಗರ ಕ್ಷೇತ್ರದಲ್ಲಿ ದಲಿತ ಸಮುದಾಯದ ಮುಖಂಡರು, ಹಾಲಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳಲ್ಲಿ ಬಿನ್ನಮತ ಸಾಮಾನ್ಯ. ಆದರೆ ಈ ಕ್ಷೇತ್ರದಲ್ಲಿ ಒಂದು ಸಮುದಾಯದ ಮುಖಂಡರು, ಹಾಲಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಹೌದು ಮುಂದಿನ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಡಿ ಅಂತ ಸಮುದಾಯದ ಮುಖಂಡರೇ ತಿರುಗಿಬಿದ್ದಿದ್ದಾರೆ. ಚಾಮರಾಜನಗರ ಕಾಂಗ್ರೆಸ್ನಲ್ಲಿ ಎಲ್ಲವು ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಮೂರು ಬಾರಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ವಿರುದ್ಧ, ಇದೀಗ ಚಾಮರಾಜನಗರ ತಾಲೂಕಿನ ಕಾಂಗ್ರೆಸ್ನ ದಲಿತ ಮುಖಂಡರೆಲ್ಲ ತಿರುಗಿಬಿದ್ದಿದ್ದಾರೆ. ಹೌದು, ಪುಟ್ಟರಂಗಶೆಟ್ಟಿ ಚಾಮರಾಜನಗರ ಕ್ಷೇತ್ರದಿಂದ ಕಳೆದ ಮೂರು ಬಾರಿ ನಿರಂತರವಾಗಿ ಗೆಲವು ಸಾಧಿಸಿ ಪ್ರಬಲ ನಾಯಕ ಅಂತ ಗುರುತಿಸಿಕೊಂಡಿದ್ದಾರೆ. ಅದಷ್ಟೆ ಅಲ್ಲದೆ ರಾಜ್ಯದ ಏಕೈಕ ಉಪ್ಪಾರ ಜನಾಂಗದ ಶಾಸಕರು ಕೂಡ. ಈ ಕಾರಣದಿಂದಲೆ ಕಳೆದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಈಗ ಕಾಂಗ್ರೆಸ್ನ ದಲಿತ ಸಮುದಾಯದ ಮುಖಂಡರೆಲ್ಲ ಶಾಸಕರ ಕಾರ್ಯವೈಕರಿ ಬಗ್ಗೆ ಮುನುನಿಸಿಕೊಂಡಿದ್ದಾರೆ.
ಹೌದು, ಚಾಮರಾಜನಗರ ಕ್ಷೇತ್ರದಲ್ಲಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಲು ದಲಿತ ಸಮುದಾಯ ಅವರ ಹಿಂದೆ ನಿಂತಿರವುದು ಕೂಡ ಅವರ ಪ್ರಮುಖ ಕಾರಣವಾಗಿದೆ. ಆದರೆ ಶಾಸಕರು ಮಾತ್ರ ದಲಿತರನ್ನ ಕಡೆಗಣಿಸುತ್ತಿದ್ದಾರೆ. ದಲಿತರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ, ಕೇವಲ ಅವರ ಉಪ್ಪಾರ ಸಮುದಾಯದವರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ ಅನ್ನೋ ಆರೋಪವ ದಲಿತ ಮುಖಂಡರು ಮಾಡುತ್ತಿದ್ದಾರೆ. ಈ ಕಾರಣಕ್ಕೆ ದಲಿತ ಸಮುದಾಯದವರೆಲ್ಲ ಇದೀಗ ಶಾಸಕರ ವಿರುದ್ಧ ಸಭೆ ನಡೆಸಿ ತೊಡೆ ತಟ್ಟಿದ್ದಾರೆ.
ಇನ್ನು ಇದಷ್ಟೆ ಅಲ್ಲದೆ ಪಕ್ಷದ ವರಿಷ್ಠರಿಗು ಕೂಡ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದಾರೆ. ಪುಟ್ಟರಂಗಶೆಟ್ಟಿ ಚಾಮರಾಜನಗರ ಕ್ಷೇತ್ರದವರಲ್ಲ, ಅವರಿಗೆ ಟಿಕೆಟ್ ಕೊಡಬಾರದು, ಕೊಟ್ಟರೆ ಮುಂದಿನ ಬಾರಿ ಸೋಲುತ್ತಾರೆ ಎಂದು ಖಡಕ್ ಸೂಚನೆ ಸಹ ಕೊಟ್ಟಿದ್ದಾರೆ. ಆದರೆ ಪುಟ್ಟರಂಗಶೆಟ್ಟಿ ಮಾತ್ರ ಇವರ ಆರೋಪಕ್ಕೆ ಸೊಪ್ಪು ಹಾಕುತ್ತಿಲ್ಲ. ದಲಿತರು ಯಾರು ಅಸಮಾಧಾನ ಇಲ್ಲ. ಒಂದಿಬ್ವರಿಗೆ ಮಾತ್ರ ಅಸಮಾಧಾನ ಇದೆ. ಅದು ಗುತ್ತಿಗೆ ಕೊಟ್ಟಿಲ್ಲ ಅಂತ. ಈ ಸರ್ಕಾರದಲ್ಲಿ ಹಣವೆ ಬಿಡುಗಡೆಯಾಗುತ್ತಿಲ್ಲ. ನಾನು ಎಲ್ಲಿಂದ ಗುತ್ತಿಗೆ ಕೊಡಲಿ ಅಂತ ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಾರೆ, ಶಾಸಕರ ವಿರುದ್ಧ ನೂರಾರು ದಲಿತ ಮುಖಂಡರು ಸಭೆ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಶಾಸಕರು ಮಾತ್ರ ಒಂದಿಬ್ಬರಿಗೆ ಮಾತ್ರ ಅಸಮಾಧಾನ ಇದೆ ಅಂತ ಹೇಳುತ್ತಿದ್ದಾರೆ. ಸದ್ಯ ಕಾಂಗ್ರೆಸ್ಗೆ ಶುರುವಾಗಿರುವ ಅಸಮಾಧಾನ ಹೊಗೆ ಹೇಗೆ ಶಮಮವಾಗುತ್ತೆ ಅಂತ ಕಾದುನೋಡಬೇಕಿದೆ.
ದಿಲೀಪ್ ಚೌಡಹಳ್ಳಿ ಟಿರ್ವ9 ಚಾಮರಾಜನಗರ