ಜೇನು ಅಂದ್ರೆ ಸಹಜವಾಗಿಯೇ ಅದು ಸಿಹಿಯಾಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಜೇನು ಸಿಹಿ ಅಷ್ಟೇ ಅಲ್ಲ; ಕಹಿಯಾಗಿಯೂ ಇರುತ್ತೆ ಅಂತಾರೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿ ಬಿಳಿಗಿರಿರಂಗನ ಬೆಟ್ಟದ ಗಿರಿಜನರು. ಹೌದು ಬಿಳಿಗಿರಿ ರಂಗನಾಥಸ್ವಾಮಿ ದಟ್ಟ ಅರಣ್ಯದೊಳಗಿರುವ ಬೇವು, ನೇರಳೆ, ಬೀಟೆ, ತಾರೆ ಹೂವಿನ ಮಕರಂದ ಹೀರಿ ಜೇನುನೊಣಗಳು ಉತ್ಪಾದನೆ ಮಾಡುವ ಜೇನುತುಪ್ಪ ಕಹಿಯಾಗಿರುತ್ತದೆ (BR Hills Bitter Honey).