ಪ್ರಧಾನಿ ಮೋದಿ ಬಂದೋದ ಬಳಿಕ ಬದಲಾಯ್ತು ಬಂಡೀಪುರದ ಚಿತ್ರಣ, ಪ್ರವಾಸಿಗರ ಹೆಚ್ಚಳ, ಆದಾಯ ದ್ವಿಗುಣ
ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಬಂದು ಹೋದ ಬಳಿಕ ಸಫಾರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಚಾಮರಾಜನಗರ, ಜನವರಿ 03: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ಬಂದು ಹೋದ ಬಳಿಕ ಸಫಾರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಆನೆ ಮತ್ತು ಚಿರತೆ ಬಂಡೀಪುರ ಉದ್ಯಾನವದಲ್ಲಿವೆ. ಬಂಡೀಪುರ ಉದ್ಯಾನವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಆದಾಯ ಕೂಡ ಅಧಿಕವಾಗಿ ಹರಿದು ಬರುತ್ತಿದೆ.
ಪ್ರತಿ ವರ್ಷ ಸಫಾರಿಯಿಂದ 8 ಕೋಟಿಯಷ್ಟು ಆದಾಯ ಬರುತ್ತಿತ್ತು. ಆದರೆ ಈಗಾಗಲೇ 12 ಕೋಟಿಯಷ್ಟು ಸಫಾರಿಯಿಂದಲೇ ಹಣ ಹರಿದು ಬಂದಿದೆ. ಹೀಗಾಗಿ ಈ ಬಾರಿ 15 ಕೋಟಿ ರೂಪಾಯಿಯಷ್ಟು ಆದಾಯ ಹರಿದು ಬರುವ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ. ಕ್ರಿಸ್ ಮಸ್ ಹಬ್ಬದ ಒಂದೇ ದಿನ ಕೇವಲ ಗ್ರೀನ್ ಫೀ ಹಾಗೂ ಪಾರ್ಕಿಂಗ್ ಲಾಟ್ನಿಂದ 75 ಸಾವಿರ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ಬಂಡೀಪುರ, ನಾಗರಹೊಳೆ ಸಫಾರಿ ಹೋಗೋರಿಗೆ ವಿಮಾ ಸೌಲಭ್ಯ: ಬರೋಬ್ಬರಿ 1 ಕೋಟಿ ರೂ. ಇನ್ಶೂರೆನ್ಸ್
ಇದರಿಂದ ರಾಜ್ಯದಲ್ಲಿನ ಸಫಾರಿ ಕೇಂದ್ರಗಳಿಗೆ ಬರುವ ಆದಾಯಕ್ಕಿಂತ ಬಂಡೀಪುರ ಉದ್ಯಾನವನಕ್ಕೆ ಬರುವ ಆದಾಯ ಅಧಿಕವಾಗಿದೆ. ಈ ಮೂಲಕ ಬಂಡೀಪುರ ಉದ್ಯಾನವನ ಮೊದಲ ಸ್ಥಾನಕ್ಕೆ ಏರಿದೆ. ನಾಗರಹೊಳೆ ಬಿ.ಆರ್.ಟಿ ಟೈಗರ್ ಸಫಾರಿ ಕೇಂದ್ರ, ಮಲೆ ಮಹದೇಶ್ವರ ವನ್ಯಧಾಮ ಸಫಾರಿ ಕೇಂದ್ರಗಳಿಗಿಂತ ಬಂಡೀಪುರದ ಸಫಾರಿ ಕೇಂದ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ.
ಬಂಡೀಪುರ ಉದ್ಯಾನವನಕ್ಕೆ ಪ್ರಧಾನಿ ಮೋದಿ ಭೇಟಿ
“ಪ್ರಾಜೆಕ್ಟ್ ಟೈಗರ್” (Project Tiger) ಘೋಷಿಸಿ 50 ವರ್ಷವಾದ ಹಿನ್ನೆಲೆಯಲ್ಲಿ 2023ರ ಏಪ್ರಿಲ್ 9 ರಂದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಸಫಾರಿ ನಡೆಸಿದ್ದರು. ಎರಡು ಗಂಟೆಗಳ ಕಾಲ ಸುಮಾರು 20 ಕಿ.ಮೀ. ಸಫಾರಿ ನಡೆಸಿದ್ದಾರೆ. 50 ವರ್ಷ ಈ ವೇಳೆ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ