AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aircraft Crash: ಚಾಮರಾಜನಗರದಲ್ಲಿ ಲಘು ವಿಮಾನ ಪತನ

Aircraft crashed at chamarajanagar: ಚಾಮರಾಜನಗದ ಬಳಿ ಲಘು ವಿಮಾನ ಪತನಗೊಂಡಿರುವ ಘಟನೆ ನಡೆದಿದೆ.

TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Jun 02, 2023 | 11:58 AM

Share

ಚಾಮರಾಜನಗರ: ಲಘು ವಿಮಾನವೊಂದು ಪತನಗೊಂಡಿರುವ(Aircraft crash) ಘಟನೆ ಇಂದು(ಜೂನ್ 1) ಚಾಮರಾಜನಗರ(chamarajanagar) ತಾಲೂಕಿನ ಭೋಗಪುರ ಬಳಿ ನಡೆದಿದೆ. ವಿಮಾನದಲ್ಲಿದ್ದ ಇಬ್ಬರು ಪ್ಯಾರಾಚೂಟ್ ಮೂಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.  ಬೆಂಗಳೂರಿನ ಹೆಚ್​ಎಎಲ್​ ಏರ್​ಪೋರ್ಟ್​ನಿಂದ ತೆರಳಿದ್ದ ವಿಮಾನ, ಭೋಗಪುರ ಬಳಿ ಪತಗೊಂಡಿದೆ. ಇನ್ನು ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ ಭಾಗಗಗಳು ಎಲ್ಲೊಂದರಲ್ಲಿ ಬಿದ್ದಿವೆ. ಇನ್ನು  ಕೆಲ ಭಾಗಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿವೆ.

ಎಚ್ ಎ ಎಲ್ ನಿಂದ ಬಂದಿದ್ದ ತರಬೇತಿ ಪೈಲಟ್​ಗಳಾದ ಉತ್ತರ ಭಾರತ ಮೂಲದ ತೇಜಪಾಲ್ (43) ಹಾಗು ಭೂಮಿಕಾ (30) ಸಣ್ಣಪುಟ್ಟ ಗಾಯಗಳಾಗಿವೆ. ಪೈಲಟ್ ತರಬೇತಿಗಾಗಿ ಬೆಂಗಳೂರಿನ ಎಚ್ ಎಎಲ್​ನಿಂದ ಚಾಮರಾಜನಗರಕ್ಕೆ ಬಂದಿದ್ದರು. ಬಳಿಕ ಇಲ್ಲಿಂದ ವಾಪಸ್ ಆಗುತ್ತಿದ್ದಾಗ ಕಿರು ವಿಮಾನ ನೆಲಕ್ಕೆ ಅಪ್ಪಳಿಸಿದೆ. ಸದ್ಯ ಪೈಲಟ್ ಗಳಿಗೆ ಹೆಚ್ಚಿನ ಚಿಕಿತ್ಸೆಗಅಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ಯುದ್ದ ವಿಮಾನದ ಮೂಲಕ ಕಳುಹಿಸಲು ಎಚ್. ಎ.ಎಲ್. ಸಿಬ್ಬಂದಿ ಹಾಗೂ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಅದೃಷ್ಟವಶಾತ್ ಭಾರೂ ಅಪಾಯ ತಪ್ಪಿದೆ.

ಚಾಮರಾಜನಗರದಲ್ಲಿ ಲಘು ವಿಮಾನ ಪತನಗೊಂಡಿರುವ ವಿಡಿಯೋ

Published On - 12:43 pm, Thu, 1 June 23