ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕೇರಳದ ಆಸ್ಪತ್ರೆ ತ್ಯಾಜ್ಯದ ಹಾವಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು; ರಾಮಲಿಂಗರೆಡ್ಡಿ ಕ್ರಮಕ್ಕೆ ಆದೇಶ

ಗುಂಡ್ಲುಪೇಟೆ ಗಡಿಯ ಬಂಡೀಪುರ ಹೆದ್ದಾರಿಯಲ್ಲಿ ಕೇರಳದ ಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಇದರ ಅಲ್ಲಿನ ಜನರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಕ್ರಮಕ್ಕೆ ಆಗ್ರಹ ಮಾಡಲಾಗಿದೆ. ಈ ಬಗ್ಗೆ ಚೆಕ್ ಪೋಸ್ಟ್ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಸೂಕ್ತ ಕ್ರಮಕ್ಕೆ ಆದೇಶವನ್ನು ಕೂಡ ನೀಡಿದ್ದಾರೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕೇರಳದ ಆಸ್ಪತ್ರೆ ತ್ಯಾಜ್ಯದ ಹಾವಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು; ರಾಮಲಿಂಗರೆಡ್ಡಿ ಕ್ರಮಕ್ಕೆ ಆದೇಶ
ಗುಂಡ್ಲುಪೇಟೆ ವಿಷಕಾರಿ ಮೆಡಿಕಲ್ ತ್ಯಾಜ್ಯ
Edited By:

Updated on: Nov 07, 2026 | 3:46 PM

ಗುಂಡ್ಲುಪೇಟೆ, ನ.7: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗಡಿ ಭಾಗದಲ್ಲಿ ಕೇರಳ ರಾಜ್ಯದ ಆಸ್ಪತ್ರೆಗಳಿಂದ ತರಲಾಗುವ ವಿಷಕಾರಿ ಮೆಡಿಕಲ್ ಹಾಗೂ ನಿರುಪಯುಕ್ತ ತ್ಯಾಜ್ಯಗಳನ್ನು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ವಿಲೇವಾರಿ ಮಾಡುತ್ತಿರುವ ಭೀಕರ ಕೃತ್ಯ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಗುಂಡ್ಲುಪೇಟೆಯ ಮೂಲಕ ದಿನಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ತರಕಾರಿ ಮತ್ತಿತರ ಸರಕು ಸಾಗಣೆ ಮಾಡಿ ಕೇರಳದಿಂದ ವಾಪಸ್ ಬರುವ ಲಾರಿ ಹಾಗೂ ಈಚರ್ ವಾಹನಗಳು, ಬಂಡೀಪುರ ಅರಣ್ಯ ವ್ಯಾಪ್ತಿಯ ಕೇರಳ-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ-766ರ ಬೋಳು ಗುಡ್ಡದ ಸಮೀಪ ಅಪಾಯಕಾರಿ ಮೆಡಿಕಲ್ ತ್ಯಾಜ್ಯವನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಪರಾರಿಯಾಗುತ್ತಿವೆ.

“ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿಷಕಾರಿ ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಆವರಿಸಿದ್ದು, ಅಕ್ಕಪಕ್ಕದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ” ಎಂದು ಹೋರಾಟಗಾರ ಮುನೀರ್ ಪಾಷ ಆತಂಕ ವ್ಯಕ್ತಪಡಿಸಿದ್ದಾರೆ. “ಮೂಲೆಹೊಳೆ ಮತ್ತು ಮದ್ದೂರು ಭಾಗದಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಎರಡೆರಡು ಚೆಕ್ ಪೋಸ್ಟ್‌ಗಳಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದ ತ್ಯಾಜ್ಯ ರಾಜ್ಯಕ್ಕೆ ಹೇಗೆ ಬರುತ್ತಿದೆ? ಹಿಂದೆ ಸಾರ್ವಜನಿಕರೇ ಲಾರಿಯೊಂದನ್ನು ಹಿಡಿದುಕೊಟ್ಟಿದ್ದರೂ ಈ ದಂಧೆ ನಿಂತಿಲ್ಲ. ಅಧಿಕಾರಿಗಳು ತಪಾಸಣೆ ನಡೆಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ” ಎಂದು ಹೋರಾಟಗಾರ ಅಶೋಕ್ ಕಟುವಾಗಿ ಟೀಕಿಸಿದ್ದಾರೆ.

Loading...

ಇನ್ನು ಪ್ರಕರಣದ ಕುರಿತು ಬಂಡೀಪುರ ಅರಣ್ಯ ಪ್ರದೇಶದಲ್ಲಿ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ರಾಮಲಿಂಗರೆಡ್ಡಿ, ಹಲವು ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಕೇರಳದಿಂದ ಮೆಡಿಕಲ್ ತ್ಯಾಜ್ಯ ತಂದು ಬಂಡೀಪುರ ಕಾಡಿನಲ್ಲಿ ಎಸೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.” ಎಂದು ಹೇಳಿದ್ದಾರೆ. “ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಅರಣ್ಯ ಸಿಬ್ಬಂದಿ ಕಾಡಿಗೆ ಕರ್ತವ್ಯಕ್ಕೆ ತೆರಳಲು ಹೆದರುವ ಅಗತ್ಯವಿಲ್ಲ. ಜಿಲಿಟಿನ್ ಕಡ್ಡಿ ಬಳಸಿ ಬ್ಲಾಸ್ಟ್ ಮಾಡಲಾಗಿದ್ದ ಛಿದ್ರಗೊಂಡ ಕಳ್ಳಬೇಟೆ ತಡೆ ಕ್ಯಾಂಪ್‌ನ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.” ಎಂದರು.

ಇದನ್ನೂ ಓದಿ: ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ರಾದ್ಧಾಂತ: ರಿಜ್ವಾನ್ ಅರ್ಷದ್, ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಕೇಂದ್ರ, ತೈಲ ಕಂಪನಿಗಳು

“ಸಿಎಂ ಸೂಚನೆಯಂತೆ ನವೆಂಬರ್ 1ರ ಒಳಗೆ ಅಕ್ರಮ ಬಂದೂಕುಗಳನ್ನು ಹಸ್ತಾಂತರಿಸಲು ಗಡುವು ನೀಡಲಾಗಿತ್ತು. ಈ ಬಗ್ಗೆ ಡಿಜಿಪಿ ಸಲೀಂ ಅವರಿಗೂ ಸೂಚಿಸಲಾಗಿದೆ. ಎಷ್ಟು ಶಸ್ತ್ರಾಸ್ತ್ರಗಳು ಸೆರೆಂಡರ್ ಆಗಿವೆ ಎಂಬ ಮಾಹಿತಿ ಪಡೆದು ತಿಳಿಸುವೆ. ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ. ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ವಿಚಾರದಲ್ಲಿ ಸ್ಥಳೀಯ ಜನಸಾಮಾನ್ಯರ ಜೊತೆ ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಜಮೀನುಗಳನ್ನು ಖರೀದಿ ಮಾಡಬಹುದು, ಆದರೆ ಯಾವುದೇ ಕಾರಣಕ್ಕೂ ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.” ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us