AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ರಾದ್ಧಾಂತ: ರಿಜ್ವಾನ್ ಅರ್ಷದ್, ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಕೇಂದ್ರ, ತೈಲ ಕಂಪನಿಗಳು

ರಾಜ್ಯದಲ್ಲಿ ಪೆಟ್ರೋಲ್‌ಗೆ ಶೇ 30ಕ್ಕೂ ಹೆಚ್ಚು ಎಥೆನಾಲ್ ಬೆರೆಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆಂದು ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಇದಕ್ಕೆ ಕೇಂದ್ರ ತೈಲ ಸಚಿವಾಲಯ ಹಾಗೂ ತೈಲ ಕಂಪನಿಗಳು ಸ್ಪಷ್ಟನೆ ನೀಡಿ, ಪರೀಕ್ಷಾ ವರದಿಗಳು ಸರಿಯಲ್ಲ ಎಂದಿವೆ. ರಾಹುಲ್ ಗಾಂಧಿ ಕೂಡ 'E20 ಒಂದು 420' ಎಂದು ಟೀಕಿಸಿದ್ದು, ಈ ವಿಚಾರ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿ, ವಾಹನ ಮಾಲೀಕರಿಗೆ ಗೊಂದಲ ಮೂಡಿಸಿದೆ.

ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ರಾದ್ಧಾಂತ: ರಿಜ್ವಾನ್ ಅರ್ಷದ್, ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಕೇಂದ್ರ, ತೈಲ ಕಂಪನಿಗಳು
ಕರ್ನಾಟಕ ಪೆಟ್ರೋಲ್ ವಿವಾದImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Nov 07, 2026 | 3:02 PM

Share

ಬೆಂಗಳೂರು, ನೆ.7: ರಾಜ್ಯದಲ್ಲಿ ಪೆಟ್ರೋಲ್ ಕಂಪನಿಗಳು (OMCs) ಅಕ್ರಮವಾಗಿ ಶೇ 30ಕ್ಕೂ ಹೆಚ್ಚು ಎಥೆನಾಲ್ ಬೆರೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಖಾತೆ ಸಚಿವ ರಿಜ್ವಾನ್ ಅರ್ಷದ್ ಆರೋಪ ಮಾಡಿದ್ದಾರೆ. ತನಿಖಾ ವರದಿ ಇದೀಗ ದೇಶಾದ್ಯಂತ ಭಾರಿ ರಾಜಕೀಯ ಹಾಗೂ ತಾಂತ್ರಿಕ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್​​​ ನಾಯಕ ರಾಹುಲ್​​​​​​ ಗಾಂಧಿ ಕೂಡ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಈ ಆರೋಪವನ್ನು ಸಾಕ್ಷಿ ಸಮೇತ ಕೇಂದ್ರ ತೈಲ ಸಚಿವಾಲಯ ಮತ್ತು ತೈಲ ಕಂಪನಿಗಳು ಸ್ವಷ್ಟನೆಯನ್ನು ನೀಡಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಪೆಟ್ರೋಲ್‌ನಲ್ಲಿ ಗರಿಷ್ಠ ಶೇ 20ರಷ್ಟು (E20) ಎಥೆನಾಲ್ ಬೆರೆಸಲು ಮಾತ್ರ ಅವಕಾಶವಿದೆ. ಆದರೆ ತೈಲ ಕಂಪನಿಗಳು ಅಕ್ರಮವಾಗಿ ಶೇ 31.2ರವರೆಗೆ ಎಥೆನಾಲ್ ಬೆರೆಸಿ ಗ್ರಾಹಕರು ಮತ್ತು ವಾಹನ ಮಾಲೀಕರಿಗೆ ದ್ರೋಹ ಎಸಗುತ್ತಿವೆ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಕೇಂದ್ರ ತೈಲ ಸಚಿವಾಲಯ ಮತ್ತು ತೈಲ ಕಂಪನಿಗಳ ಸ್ಪಷ್ಟನೆ

ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪ ಹಾಗೂ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ IOCL, BPCL, HPCL ನಿರಾಕರಿಸಿವೆ. ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷಾ ಮಾದರಿಯು BIS (IS 17021) ನಿಯಮಾವಳಿಗಳಿಗೆ ಹಾಗೂ ‘ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್‌ಲೈನ್ಸ್ 2024’ (MDG) ಗೆ ಅನುಗುಣವಾಗಿಲ್ಲ. ತೈಲ ಕಂಪನಿಗಳ ಪ್ರತಿನಿಧಿಗಳಿಲ್ಲದೆ ಸ್ಯಾಂಪಲ್ ಸಂಗ್ರಹಿಸಲಾಗಿದೆ.

ದೇಶಾದ್ಯಂತ ನಡೆಸಲಾದ 893 ಸ್ಯಾಂಪಲ್‌ಗಳಲ್ಲಿ ಹಾಗೂ ಕರ್ನಾಟಕದಲ್ಲಿ ಪರೀಕ್ಷಿಸಿದ 56 ಮಾದರಿಗಳಲ್ಲೂ ಎಥೆನಾಲ್ ಪ್ರಮಾಣ ಶೇ 19ರಿಂದ 20ರಷ್ಟೇ (ನಿಯಮಿತ ವ್ಯಾಪ್ತಿಯಲ್ಲೇ) ಇದೆ. ಎಥೆನಾಲ್ ಮಿಶ್ರಣವು ಡಿಪೋ ಮಟ್ಟದಲ್ಲಿ ಕಂಪ್ಯೂಟರೀಕೃತ ಹಾಗೂ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಇದರಲ್ಲಿ ಮನುಷ್ಯರು ಕೈಯಾರೆ ಎಥೆನಾಲ್ ಹೆಚ್ಚು-ಕಡಿಮೆ ಬೆರೆಸಲು ಸಾಧ್ಯವಿಲ್ಲ.

ಎಥೆನಾಲ್ ಪೆಟ್ರೋಲ್‌ಗಿಂತ ದುಬಾರಿಯಾಗಿದ್ದು, ತೈಲ ಕಂಪನಿಗಳು ಉಚಿತವಾಗಿ ಅಥವಾ ಅತಿಯಾಗಿ ಎಥೆನಾಲ್ ಬೆರೆಸಿದರೆ ಕಂಪನಿಗಳಿಗೇ ನಷ್ಟವಾಗುತ್ತದೆ ಹೊರತು ಲಾಭವಲ್ಲ ಎಂದು ಸಮರ್ಥಿಸಿಕೊಂಡಿವೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಕರ್ನಾಟಕ ಸರ್ಕಾರದ ಜೊತೆ ಜಂಟಿ ಹಾಗೂ ಪಾರದರ್ಶಕ ತನಿಖೆಗೆ ಸಿದ್ಧವಿರುವುದಾಗಿ ತಿಳಿಸಿದೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​​:

ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದೇನು?

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್, ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳ ಪರೀಕ್ಷಾ ವರದಿಯನ್ನು ಬಹಿರಂಗಪಡಿಸಿದರು. ಇಲಾಖೆಯಿಂದ ರಾಜ್ಯದ 7 ಜಿಲ್ಲೆಗಳಿಂದ (ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು) ಸಂಗ್ರಹಿಸಿದ 63 ಪೆಟ್ರೋಲ್ ಮಾದರಿಗಳಲ್ಲಿ, ಲಭ್ಯವಾದ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಶೇ 20ಕ್ಕಿಂತ ಅಧಿಕ ಎಥೆನಾಲ್ ಇರುವುದು ಪತ್ತೆಯಾಗಿದೆ. ಐಒಸಿಎಲ್ ಮಾದರಿಯಲ್ಲಿ ಶೇ 31.2 ಹಾಗೂ ಹೆಚ್‌ಪಿಸಿಎಲ್ ಮಾದರಿಯಲ್ಲಿ ಶೇ 30.5 ಎಥೆನಾಲ್ ಇರುವುದು ಪತ್ತೆಯಾಗಿದೆ. 4 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ 25ಕ್ಕಿಂತ ಹೆಚ್ಚಿದೆ. ನಿಯಮಮೀರಿ ಎಥೆನಾಲ್ ಬೆರೆಸುವುದರಿಂದ ವಾಹನಗಳ ಎಂಜಿನ್ ಹಾಳಾಗುವುದಲ್ಲದೆ, ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ. ವಾಹನ ತಯಾರಿಕಾ ಕಂಪನಿಗಳು E20 ಗಿಂತ ಹೆಚ್ಚಿನ ಇಂಧನಕ್ಕೆ ವಾರಂಟಿ ನೀಡುವುದಿಲ್ಲ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್​​ಗಳಲ್ಲಿ ಮಿತಿ ಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ದಾಖಲೆ ಬಹಿರಂಗಪಡಿಸಿದ ಸಚಿವ

ರಾಹುಲ್​​ ಗಾಂಧಿ ಆರೋಪ ಏನು?

ಈ ವಿಚಾರವಾಗಿ ಎಕ್ಸ್​​​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಎಥೆನಾಲ್ ನೀತಿಯನ್ನು ಟೀಕಿಸಿದ್ದಾರೆ. “E20 ಎನ್ನುವುದು 420 ಆಗಿ ಬದಲಾಗಿದೆ. ಜನರ ಕಾರು-ಬೈಕ್‌ಗಳಿಂದ ಪೆಟ್ರೋಲ್ ಕದಿಯಲಾಗುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಐಒಸಿಎಲ್, ಹೆಚ್‌ಪಿಸಿಎಲ್, ಬಿಪಿಸಿಎಲ್, ನಯಾರಾ ಹಾಗೂ ಷೆಲ್ ನಿಯಮ ಉಲ್ಲಂಘಿಸಿವೆ. ಅತಿಯಾದ ಎಥೆನಾಲ್‌ನಿಂದ ವಾಹನಗಳ ಮೈಲೇಜ್ ಶೇ 10ರಷ್ಟು ಕುಸಿದು, ಸಾರ್ವಜನಿಕರಿಗೆ ಬರೋಬ್ಬರಿ 1.01 ಲಕ್ಷ ರೂ. ಕೋಟಿ ಹಾನಿಯಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sat, 7 November 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ