ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಮಿತಿ ಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ದಾಖಲೆ ಬಹಿರಂಗಪಡಿಸಿದ ಸಚಿವ
ತೈಲ ಕಂಪನಿಗಳು ಅಕ್ರಮವಾಗಿ ಪೆಟ್ರೋಲ್‌ನಲ್ಲಿ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿವೆ. ಇದರಿಂದ ವಾಹನಗಳ ಇಂಜಿನ್ಗೆ ಹಾನಿ, ಮೈಲೇಜ್ ಇಳಿಕೆ ಹಾಗೂ ಗ್ರಾಹಕರಿಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಎಥೆನಾಲ್ ನೀತಿ ಮರುಪರಿಶೀಲಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

ಬೆಂಗಳೂರು, ನವೆಂಬರ್ 06: ‘ಪೆಟ್ರೋಲ್ ಕಂಪನಿಗಳು ಅಕ್ರಮವಾಗಿ ಶೇ 30ರಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬೆರೆಸುತ್ತಿವೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಎಥೆನಾಲ್ ನೀತಿ ಅನ್ವಯ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಮಾತ್ರ ಎಥೆನಾಲ್ ಬೆರೆಸಬೇಕು. ಆದರೆ ತೈಲ ಕಂಪನಿಗಳು ಅಕ್ರಮವಾಗಿ ಶೇ 31ರವರೆಗೆ ಎಥೆನಾಲ್ ಬೆರೆಸುವ ಮೂಲಕ ವಾಹನ ಮಾಲೀಕರಿಗೆ ಹಾಗೂ ಜನರಿಗೆ ಮೋಸ ಮಾಡುತ್ತಿವೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಖಾತೆ ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ವಿವಿಧ ತೈಲ ಕಂಪನಿಗಳ ಮಾದರಿ ಪರೀಕ್ಷೆ: ಆತಂಕಕಾರಿ ವಿಷಯ ಬಹಿರಂಗ
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಅಕ್ರಮದ ಬಗ್ಗೆ ದಾಖಲೆಗಳನ್ನು ಬಹಿರಂಗಪಡಿಸಿದರು. ‘ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ರಾಜ್ಯದ ವಿವಿಧ ಕಡೆಗಳಿಂದ ಸಂಗ್ರಹಿಸಿದ ವಿವಿಧ ತೈಲ ಕಂಪನಿಗಳ 63 ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಆತಂಕಕಾರಿ ವಿಷಯ ಬಹಿರಂಗವಾಗಿದ್ದು, ಇದುವರೆಗೆ ಲಭ್ಯವಾಗಿರುವ 14 ಮಾದರಿಗಳ ಪರೀಕ್ಷಾ ವರದಿಯಲ್ಲಿ 11 ಮಾದರಿಗಳಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ. ಅವುಗಳಲ್ಲಿ ಎರಡು ಮಾದರಿಗಳಲ್ಲಿ ಶೇ 31.2 ಹಾಗೂ ಶೇ 30.5 ಎಥೆನಾಲ್ ಮಿಶ್ರಣ ಪತ್ತೆಯಾಗಿದೆ. ನಾಲ್ಕು ಮಾದರಿಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಶೇ 25 ಕ್ಕೂ ಹೆಚ್ಚಿರುವುದು ಕಂಡು ಬಂದಿದೆ’ ಎಂದು ಅವರು ತಿಳಿಸಿದರು.
ಸಿಎಂ ಡಿಕೆ ಶಿವಕುಮಾರ್ ಟ್ವೀಟ್
Protecting consumers from exploitation and ensuring accountability are our foremost responsibilities. The Department of Legal Metrology, led by Minister Shri @ArshadRizwan has conducted extensive inspections across Karnataka under Mission Nikhara. Independent laboratory tests have revealed alarming levels of ethanol blending in petrol samples from major oil companies, with some recording levels as high as 31.2%, well beyond the prescribed E20 limit.
While the Union Government speaks of the benefits of ethanol blending and energy security, it cannot turn a blind eye to the violation of E20 norms and blend more ethanol thereby imposing financial burden on ordinary citizens. Reduced mileage, potential vehicle damage and rising maintenance costs are concerns that deserve serious attention. It is unacceptable that consumers should bear the cost while oil companies continue to report substantial profits.
We demand that the Union Government:
1. Publicly disclose the actual ethanol content in petrol supplied across the country. 2. Initiate strict legal action against oil companies found exceeding the prescribed blending limits and make petrol pump level audit reports public. 3. Establish an E20 Damage Compensation Fund with a simple, time-bound mechanism to compensate affected vehicle owners. 4. Make disclosure of ethanol blending levels mandatory at every petrol station and ensure consumers have the choice of fuel suitable for their vehicles.
The Government of Karnataka will continue its inspections and stand firmly with consumers to ensure transparency, accountability and the right to quality fuel at every petrol station.
— DK Shivakumar (@DKShivakumar) November 6, 2026
‘ಈಗಾಗಲೇ ದೇಶಾದ್ಯಂತ ಜನರು E20 ಪೆಟ್ರೋಲ್ನಿಂದಾಗಿ ತಮ್ಮ ವಾಹನಗಳ ಇಂಜಿನ್ ಪದೇ ಪದೇ ರಿಪೇರಿಗೆ ಬರುತ್ತಿದ್ದು, ಮೈಲೇಜ್ನಲ್ಲಿ ತೀವ್ರಗತಿಯ ಇಳಿಕೆಯಾಗುತ್ತಿದೆ ಎಂದು ದೂರುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ಜನರು ತಮ್ಮ ವಾಹನಗಳ ರಿಪೇರಿ ಹಾಗೂ ಮೈಲೇಜ್ ಇಳಿಕೆಯಿಂದಾಗಿ ಸುಮಾರು ಒಂದು ಲಕ್ಷ ಕೋಟಿ ರೂ. ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾದ ಶೇ 20ಕ್ಕೂ ಹೆಚ್ಚಿನ ಎಥೆನಾಲ್ ಪೂರೈಸುವುದರಿಂದ ಅವರು ಮತ್ತಷ್ಟು ತೊಂದರೆಗೆ ಒಳಗಾಗುವುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದಾರೆ.
ಹರದೀಪ್ ಸಿಂಗ್ ಪುರಿ ಸ್ಪಷ್ಟನೆ ನೀಡುವಂತೆ ರಿಜ್ವಾನ್ ಅರ್ಷದ್ ಆಗ್ರಹ
‘ಇದಕ್ಕೆಲ್ಲಾ ಹೊಣೆ ಯಾರು? ಶೇ 20ಕ್ಕಿಂತ ಹೆಚ್ಚಿನ ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬಳಸಲು ತೈಲ ಕಂಪನಿಗಳಿಗೆ ಅಧಿಕಾರ ಕೊಟ್ಟವರು ಯಾರು? ಈ ಕುರಿತಂತೆ ಕೇಂದ್ರ ಸರಕಾರ ಅದರಲ್ಲೂ ಪ್ರಮುಖವಾಗಿ ಕೇಂದ್ರ ಪೆಟ್ರೋಲಿಯಂ ಮಂತ್ರಿ ಹರದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಬೇಕು’ ಎಂದು ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.
‘ಇನ್ನು ಜನರಿಗಾಗುತ್ತಿರುವ ಆರ್ಥಿಕ ಹೊರೆ ಹಾಗೂ ಹಾಗೂ ವಾಹನಗಳ ಮೇಲಾಗುತ್ತಿರುವ ದುಷ್ಪಾರಿಣಾಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಥೆನಾಲ್ ಬ್ಲೆಂಡಿಂಗ್ ನೀತಿ ಕುರಿತು ಮರು ಪರಿಶೀಲನೆ ಮಾಡಬೇಕು. ಪ್ರಮುಖವಾಗಿ ಎಲ್ಲಾ ಪೆಟ್ರೋಲ್ ಪಂಪನಲ್ಲೂ ಎಷ್ಟು ಪ್ರಮಾಣದ ಎಥೆನಾಲ್ ಬೆರೆಸಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಗ್ರಾಹಕರಿಗೆ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆರಿಸಿಕೊಳ್ಳುವ ಆಯ್ಕೆ ಒದಗಿಸಿಕೊಡಬೇಕು’ ಎಂದು ಸಚಿವರು ಒತ್ತಾಯಿಸಿದ್ದಾರೆ.
ಇ20 ಹೆಸರಿನಲ್ಲಿ ಎಥೆನಾಲ್ ಜಾಸ್ತಿ; ಗ್ರಾಹಕರ ಜೇಬಿಗೆ ಕತ್ತರಿ ಖಾತ್ರಿ: ಸಿಎಂ ಡಿಕೆ ಶಿವಕುಮಾರ್
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ‘ಇ20 ಎಥೆನಾಲ್ ಸುಳ್ಳು. ಇ20 ಹೆಸರಿನಲ್ಲಿ ಎಥೆನಾಲ್ ಜಾಸ್ತಿ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಖಾತ್ರಿ ಹಾಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು, ವಾಹನಗಳಿಗೆ ಹಾನಿಯಾಗುವ ಸಾಧ್ಯತೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುವ ಆತಂಕಗಳಿವೆ. ತೈಲ ಕಂಪನಿಗಳು ಭಾರೀ ಲಾಭ ಗಳಿಸುತ್ತಿರುವಾಗ ಅದರ ವೆಚ್ಚವನ್ನು ಗ್ರಾಹಕರೇ ಭರಿಸುವಂತಾಗುವುದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
‘ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರ್ಕಾರ ತನ್ನ ತಪಾಸಣಾ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿಯೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟದ ಇಂಧನ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ದೃಢವಾಗಿ ನಿಲ್ಲಲಿದೆ’ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




