ಚಾಮರಾಜನಗರ, ಸೆಪ್ಟೆಂಬರ್ 2: ನಾಟಿ ಮದ್ದು (naati medicine) ಔಷಧ ಪಡೆದು ಯುವಕಯೊರ್ವ ತನ್ನ ಎರಡು ಕಿಡ್ನಿಗಳನ್ನು ಕಳೆದುಕೊಂಡಂತಹ ಘಟನೆ ಗಡಿ ನಾಡು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅನೂಪ್ ಕಿಡ್ನಿ ಕಳೆದುಕೊಂಡ ಯುವಕ. ಜಾಂಡಿಸ್ ಬಂದ ಕಾರಣ ಯುವಕ ಅನೂಪ್ ನಾಟಿ ಮದ್ದು ಚಿಕಿತ್ಸೆ ಪಡೆದಿದ್ದ. ನಾಟಿ ಮದ್ದು ಚಿಕಿತ್ಸೆ ಪಡೆದ ಬಳಿಕ ಇದ್ದಕ್ಕಿದ್ದಂತೆ ವಾಂತಿ ಶುರುವಾಗಿತ್ತು. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ವೈದ್ಯರ ತಪಾಸಣೆ ವೇಳೆ ಎರಡು ಕಿಡ್ನಿ ವೈಫಲ್ಯವಾಗಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರದಲ್ಲಿ ಯುವಕ ಅನೂಪ್ ಪಾನಿಪೂರಿ ಅಂಗಡಿಯನ್ನ ಹಾಕಿ ಜೀವನ ಸಾಗಿಸುತ್ತಿದ್ದು, ಜಿಲ್ಲೆಯಲ್ಲಿ ಇವರ ಭಜರಂಗಿ ಚಾಟ್ಸ್ ಸಿಕ್ಕಾಪಟ್ಟೆ ಫೇಮಸ್. ಇತ್ತ ಕಿಡ್ನಿ ವೈಫಲ್ಯದಿಂದ ಜೀವನ ಸಾಗಿಸಲು ನರಕ ಅನುಭವಿಸುವಂತ್ತಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಚಾಮರಾಜನಗರ ಜನತೆಗೆ ಎದುರಾಗಲಿದೆ KSRTC ಬಸ್ ಸಮಸ್ಯೆ, ಕಾರಣವೇನು?
ಸದ್ಯ ಡಯಾಲಿಸಿಸ್ ಮಾಡಿಸಿಕೊಳ್ಳಲು ಹಣವಿಲ್ಲದೆ ಯುವಕ ಪರದಾಡುತ್ತಿದ್ದಾರೆ. ತಾಯಿ ತನ್ನ ಕಿಡ್ನಿ ದಾನ ಮಾಡಲು ಸಿದ್ದವಿದ್ದರು ಕೂಡ ಕಿಡ್ನಿ ಟ್ರಾನ್ಸ್ ಪ್ಲಟೇಷನ್ ಮಾಡಿಸಲು ಆಗದೆ ಕುಟುಂಬ ಒದ್ದಾಡುತ್ತಿದ್ದು, ಚಿಕಿತ್ಸೆಗೆ ಹಣ ಸಹಾಯ ಮಾಡುವಂತೆ ಸಂತ್ರಸ್ಥ ಯುವಕ ಮನವಿ ಮಾಡಿದ್ದಾರೆ.
ವಿಜಯಪುರ: ಕೆಮ್ಮು, ದಮ್ಮು, ಅಸ್ತಮಾ ಸೇರಿದಂತೆ ಇತರೇ ಕಾಯಿಲೆಗಳಿಂದ ಬಳಲುತ್ತಿದ್ದರೂ ಸಾಕಷ್ಟು ಸಮಯದವರೆಗೆ ಗುಣವಾಗದಿರುವವರಿಗೆ ಈ ಮೃಗಶಿರಾ ಮಳೆಯ ನಕ್ಷತ್ರ ಉತ್ತಮ ಸಮಯವಾಗಿರುತ್ತದೆ. ಈ ಸಮಯದಲ್ಲಿ ಆಯುರ್ವೇದ ಔಷಧಿಯೊಂದಿಗೆ ಜೀವಂತ ಮೀನಿನ ಮರಿಗಳನ್ನು ನುಂಗಿಸುವ ಮೂಲಕ ಆಯುರ್ವೇದಿಕ ಚಿಕಿತ್ಸೆಯೊಂದನ್ನು ಕೊಡಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಚಿಕಿತ್ಸೆಗೆ 1500ಕ್ಕೂ ಅಧಿಕ ರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದಾರೆ.
ಇಂತಹದ್ದೊಂದು ಚಿಕಿತ್ಸೆ ಸಿಗುವುದು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿ ಇರುವ ಡಾ. ಭಾವಿಕಟ್ಟಿ ಕ್ಲಿನಿಕ್ನಲ್ಲಿ. ಅದು ಕೂಡ ವರ್ಷಕ್ಕೊಮ್ಮೆ ಬರುವ ಮೃಗಶಿರಾ ಮಳೆಯ ನಕ್ಷತ್ರದ ದಿನದಂದು ಮಾತ್ರ ಎಂಬುದು ವಿಶೇಷ. ಜೂನ್ ತಿಂಗಳಿನಲ್ಲಿ ಬರುವ ಮೃಗಶಿರ ಮಳೆ ರೈತರ ಬಿತ್ತನೆಗೆ ಅನುಕೂಲ ಮಾಡುವುದು, ಎಲ್ಲೆಡೆ ಹಸಿರು ಚಿಗುರುವತೆ ಮಾಡುವ ಮೂಲಕ ಪ್ರಕೃತಿಗೆ ಮಾತ್ರವಲ್ಲದೇ ಮನುಷ್ಯರಿಗೂ ಕೂಡ ವರದಾನ ಎಂದರೆ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: ನಾರ್ಮಲ್ ಡೆಲವರಿ ಆದ್ರೆ ಮಾತ್ರ ಅಡ್ಮಿಟ್ ಮಾಡಿಕೊಳ್ತೀವಿ ಅಂತಾರೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯರು! ಹೀಗೇಕೆ?
ಯಾಕಂದರೆ ಬೇಸಿಗೆ ಬಿಸಿಲಿನಿಂದ ಬಳಲಿದ್ದವರಿಗೆ ತಂಪು ಎರೆಯುವ ಮೊದಲ ಮಳೆಯಾಗಿರುವ ಈ ಮೃಗಶಿರಾ ಬಂದು ಕೂಡುತ್ತಿದ್ದಂತೆ ಇಲ್ಲಿ ಮೀನುಮರಿ ನುಂಗಿಸುವ ಆಯುರ್ವೇದಿಕ ಚಿಕಿತ್ಸೆ ಶುರುವಾಗುತ್ತದೆ.
ಕಳೆದ 70 ವರ್ಷಗಳಿಂದಲೂ ಡಾ. ಭಾವಿಕಟ್ಟಿಯವರ ಆಸ್ಪತ್ರೆಯಲ್ಲಿ ಇಂತಹದ್ದೊಂದು ಚಿಕಿತ್ಸೆಯನ್ನು ಉಚಿತವಾಗಿ ಕೊಡಲಾಗುತ್ತದೆ. ಕಳೆದ 70 ವರ್ಷಗಳ ಹಿಂದೆ ಡಾ. ಎಂ ಎಸ್ ಭಾವಿಕಟ್ಟಿ ಎಂಬುವವರು ಶುರು ಮಾಡಿರುವ ಈ ಆಯುರ್ವೇದಿಕ ಚಿಕಿತ್ಸೆ ತಲೆತಲಾಂತರದಿಂದ ಮುಂದುವರೆದಿದ್ದು, ಇದೀಗ ಅವರ ಮೊಮ್ಮಗ ಎಂಬಿಬಿಎಸ್ ವೈದ್ಯರಾಗಿರುವ ಡಾ. ಸಂಗಮೇಶ ಪಾಟೀಲ್ ಅವರು ಮುಂದುವರೆಸಿಕೊಂಡು ಬಂದಿದ್ದಾರೆ.
ಅನಾದಿಕಾಲದಿಂದ ಬಂದಿರುವ ಈ ವಿದ್ಯೆಯನ್ನು ವರ್ಷಕ್ಕೊಮ್ಮೆ ಮೃಗಶಿರಾ ನಕ್ಷತ್ರದಿಂದ ಹಾಗೂ ಮಾರನೇ ದಿನ ಉಚಿತವಾಗಿ ಕೊಡುವ ಮೂಲಕ ಅಸ್ತಮಾ ರೋಗಿಗಳ ಪಾಲಿಗೆ ದೇವರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Sat, 2 September 23