AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ಬೆಟಗೇರಿ ನಗರಸಭೆಯಲ್ಲಿ ಆಯುಕ್ತರ ಅಂದಾ ದರ್ಬಾರ್, ಕಾನೂನು ಉಲ್ಲಂಘಸಿ ಹಣ‌ಲೂಟಿ

ಕಾನೂನು ಸಚಿವ ಎಚ್ ಕೆ ಪಾಟೀಲ್ ಕ್ಷೇತ್ರದಲ್ಲೇ ಕಾನೂನು ಉಲ್ಲಂಘಸಿ ಹಣ‌ಲೂಟಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಸರ್ಕಾರಿ ಕೆಲಸಕ್ಕೆ ಕಾರ್ ಬಾಡಿಗೆ ಪಡೆಯುವಲ್ಲಿ ನಿಯಮ ಗಾಳಿಗೆ ತೂರಿ ಹಣ‌ ಲೂಟಿ ಮಾಡಿರೋ ಗಂಭೀರ ಆರೋಪ ಬೆಟಗೇರಿ ನಗರಸಭೆ ಆಯುಕ್ತರ ವಿರುದ್ಧ ಕೇಳಿಬಂದಿದೆ.

ಗದಗ ಬೆಟಗೇರಿ ನಗರಸಭೆಯಲ್ಲಿ ಆಯುಕ್ತರ ಅಂದಾ ದರ್ಬಾರ್, ಕಾನೂನು ಉಲ್ಲಂಘಸಿ ಹಣ‌ಲೂಟಿ
ಗದಗ ನಗರಸಭೆ ಆಯುಕ್ತರಾಗಿದ್ದ ರಮೇಶ ಸುಣಗಾರ ಮತ್ತು ನಗರಸಭೆ ಅಧ್ಯಕ್ಷೆ ಉಷಾ ದಾಸರ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 02, 2023 | 3:12 PM

ಗದಗ, ಸೆ.2: ಸರ್ಕಾರಿ ಕೆಲಸಕ್ಕೆ ಕಾರು ಬಾಡಿಗೆ ಪಡೆಯುವಲ್ಲಿ ನಿಯಮ ಗಾಳಿಗೆ ತೂರಿ ಹಣ‌ ಲೂಟಿ ಮಾಡಿರುವ ಗಂಭೀರ ಆರೋಪ ಗದಗದ (Gadag) ಬೆಟಗೇರಿ ನಗರಸಭೆ ಆಯುಕ್ತರ ವಿರುದ್ಧ ಕೇಳಿಬಂದಿದೆ. ನಿಯಮದ ಪ್ರಕಾರ ಬಾಡಿಗೆ ಪಡೆಯಬೇಕು. ಆದರೆ, ಕೋಟೆಷನ್ ಮೇಲೆ ಬೇಕಾಬಿಟ್ಟಿ ಕಾರ್ ಬಾಡಿಗೆ ಪಡೆದು ತಿಂಗಳಿಗೆ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ. ನಿವೃತ್ತ ಆಗುವ ವೇಳೆ ಪೌರಾಯಕ್ತರು ಭರ್ಜರಿ ಕಮಾಯಿ ಮಾಡಿ ಅಂದಾ ದರ್ಬಾರ್ ಮಾಡಿದ್ದಾರೆ.

ಒಬ್ಬರು ಸರ್ಕಾರಿ ಅಧಿಕಾರಿ, ಇನ್ನೊಬ್ಬರು ಜನಪ್ರತಿನಿಧಿ. ಇಬ್ಬರು ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರು. ಇಬ್ಬರಿಗೂ ಸರ್ಕಾರಿ ಕಾರಿನ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ಟೆಂಡರ್ ಮೂಲಕ ಬಾಡಿಗೆ ಪಡೆಯಲು ಅನುಮತಿ ನೀಡಿದೆ. ಆದರೆ, ಗದಗ ನಗರಸಭೆ ಆಯುಕ್ತರಾಗಿದ್ದ ರಮೇಶ ಸುಣಗಾರ (ಆಗಸ್ಟ್ 30 ರಂದು ನಿವೃತ್ತಿಯಾಗಿದ್ದಾರೆ) ಬೇಕಾಬಿಟ್ಟಿ ಹಣ ಖರ್ಚು ಹಾಕಿ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಟೆಂಡರ್ ಕರೆಯದೇ ಕೋಟೇಶನ್ ಮೂಲಕ ಅಂದಾದುಂದಿ ಹಣ ಖರ್ಚು ಹಾಕಿದ್ದಾರೆ ಅಂತ ಸದಸ್ಯರು ಕಿಡಿಕಾರಿದ್ದಾರೆ.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಹಾಗೂ ನಗರಸಭೆ ಆಯುಕ್ತರಾದ ರಮೇಶ್ ಸುಣಗಾರ್ ಇಬ್ಬರು ಅಂದಾ ದರ್ಬಾರ್ ನಡೆಸಿದ್ದಾರೆ. ನಗರಸಭೆ ಅಧ್ಯಕ್ಷರು ಅವಳಿ ನಗರದಲ್ಲಿ ಓಡಾಡಿ ಜನರ ಸಮಸ್ಯೆಗಳನ್ನು ಆಲಿಸಲಿ ಎಂದು ಸರ್ಕಾರ ವಾಹನ ನೀಡಿದೆ. ನಿಯಮ ಪ್ರಕಾರ ಟೆಂಡರ್ ಕರೆಯಬೇಕು. ಎಲ್ಲೋ ಬೋರ್ಡ್ ಕಾರನ್ನು ಬಾಡಿಗೆ ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ನಿಯಮಗಳಿವೆ.

ಇದನ್ನೂ ಓದಿ: ಗದಗ-ಬೇಟಗೇರಿ ನಗರ ಸಭೆಯಲ್ಲಿ ಗೋಲ್ಮಾಲ್​; ಕಾನೂನ ಬಾಹಿರ ಕಾಮಗಾರಿ ಟೆಂಡರ್ ಮಾಡಿ ಕೋಟ್ಯಾಂತರ ಹಣ ಲೂಟಿಗೆ ಪ್ಲಾನ್

ಆದರೆ, ನಗರಸಭೆ ಆಡಳಿತ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಹಣ ಲೂಟಿ‌ ಮಾಡುವ ಕೆಲಸ ಮಾಡುತ್ತಿದೆ. ಅಧ್ಯಕ್ಷರು ಪರವಾನಿಗೆ ಎಲ್ಲೋ ಬೋರ್ಡ್ ಅಂತಾ ತೆಗೆದುಕೊಂಡು, ವೈಟ್ ಬೋರ್ಡ್ ಕಾರ್ ಉಪಯೋಗ ಮಾಡುತ್ತಿದ್ದಾರೆ. ಆ ವೈಟ್ ಬೋರ್ಡ್ ಕಾರಿಗೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರು ಅಂತಾ ನಾಮ ಫಲಕವನ್ನು ಹಾಕಿಕೊಂಡು ರಾಜಾರೋಷವಾಗಿ ಓಡಾಟ ಮಾಡುತ್ತಿದ್ದಾರೆ.

ನಗರಸಭೆ ಕಚೇರಿ ಮುಂದೇ ವೈಟ್ ಬೋರ್ಡ್ ಕಾರ್ ನಿಲ್ಲಿಸುತ್ತಾರೆ. ಹಾಗೇ ಆಯುಕ್ತರು ಕೂಡಾ ವೈಟ್ ಬೋರ್ಡ್ ಕಾರನ್ನು ಉಪಯೋಗ ಮಾಡುತ್ತಿದ್ದಾರೆ. ಇದು ನಗರಸಭೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಹಣವನ್ನು ಲಪಟಾಯಿಸುತ್ತಿದ್ದಾರೆ ಅಂತ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಆರೋಪ ಮಾಡಿದ್ದಾರೆ.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಕಾನೂನು ಗಾಳಿಗೆ ತೂರಿ ಅಂದಾ ದರ್ಬಾರ್ ನಡೆಸಿದ್ದಾರೆ. ಪ್ರತಿ ತಿಂಗಳು 60-70 ಸಾವಿರ ಹಣ ಬಿಲ್ ಮಾಡಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಸರ್ಕಾರದ ವಾಹನ ಇಲ್ಲದ ವೇಳೆಯಲ್ಲಿ, ಬಾಡಿಗೆ ರೂಪದಲ್ಲಿ ಖಾಸಗಿ ವಾಹನಗಳನ್ನು ಉಪಗಿಸಿಕೊಂಡು ಸರ್ಕಾರಿ ‌ಕೆಲಸ ಮಾಡಲಿ ಎಂದು ವಾಹನ ನೀಡುತ್ತಾರೆ.

ಅದಕ್ಕೂ ಟೆಂಡರ್ ಕರೆದು, ಯಾರು ಕಡಿಮೆ ದರವನ್ನು ಹಾಕಿರುತ್ತಾರೆ, ಆವರಿಗೆ ಟೆಂಡರ್ ಮಾಡಲಾಗುತ್ತದೆ. ಸರ್ಕಾರಿ ಕೆಲಸಕ್ಕೆ ಖಾಸಗಿ ವಾಹನ ಪಡೆಯಬೇಕು ಎಂದರೆ, ಆ ವಾಹನ ಎಲ್ಲೋ ಬೋರ್ಡ್ ಹೊಂದಿರಬೇಕು. ಆದರೆ, ಈ ಇಬ್ಬರು ದಾಖಲೆಯಲ್ಲಿ ಎಲ್ಲೋ ಬೋರ್ಡ್ ಕಾರು ಅಂತಾ ತೋರಿಸಿ, ವೈಟ್ ಬೋರ್ಡ್ ಕಾರನ್ನು ಉಪಯೋಗ ಮಾಡುತ್ತಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ.

ಕೋಟೆಷನ್ ಮೇಲೆ ಬಾಡಿಗೆ ಪಡೆದು ಹಣ ದೋಚುವ ಕೆಲಸ ಗದಗ ನಗರಸಭೆಯಲ್ಲಿ ನಡೆದಿದೆ. ಇನ್ನೂ ಬಗ್ಗೆ ಗದಗ ಜಿಲ್ಲಾ ಯೋಜನಾ ನಿರ್ದೇಶಕರನ್ನು ಕೇಳಿದರೆ, ಬಾಡಿಗೆ ರೂಪದಲ್ಲಿ ಪಡೆದ ಕಾರು ಎಲ್ಲೋ ಬೋರ್ಡ್ ಇರಬೇಕು. ಟೆಂಡರ್ ಮಾಡಿಯೇ ಕಾರ್ ಬಾಡಿಗೆ ಪಡೆಯಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ತವರು ಜಿಲ್ಲೆಯಲ್ಲೇ ಈ ರೀತಿ ಕಾನೂನು ಉಲ್ಲಂಘನೆಯಾಗಿದೆ. ಅಷ್ಟೆ ಅಲ್ಲದೆ, ಸರ್ಕಾರದ ಹಣ ಲೂಟಿ ನಡೆಸಲಾಗಿದೆ. ಇನ್ನಾದರೂ ಜಿಲ್ಲಾಡಳಿತ ನಗರಸಭೆ ಅಂದಾ ದರ್ಬಾರ್ ಬ್ರೆಕ್ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sat, 2 September 23

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ