ನಾರ್ಮಲ್ ಡೆಲವರಿ ಆದ್ರೆ ಮಾತ್ರ ಅಡ್ಮಿಟ್ ಮಾಡಿಕೊಳ್ತೀವಿ ಅಂತಾರೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯರು! ಹೀಗೇಕೆ?
Gundlupet Government Hospital: ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜೆ ಬಳಿಕ ಹೆರಿಗೆ ಮಾಡಿಸುವ ವೈದ್ಯರು ಇರುವುದಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ನಾರ್ಮಲ್ ಡೆಲವರಿ ಆದ್ರೆ ಮಾತ್ರ ಅಡ್ಮಿಟ್ ಮಾಡಿ ಕೊಳ್ಳುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಗರ್ಭಿಣಿ ಕುಟುಂಬಸ್ಥರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಗರ್ಭಿಣಿ ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಾಮರಾಜನಗರ, ಆಗಸ್ಟ್ 28: ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಕೊಡಬೇಕಾದ ಸರ್ಕಾರಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ (Gundlupet Government Hospital) ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ರಾತ್ರಿ ಹೆರಿಗೆ ಮಾಡಿಸಲು ಸೂಕ್ತ ವೈದ್ಯರು ಇರುವುದಿಲ್ಲ, ಇನ್ನು ಕರೆಂಟ್ ಹೋದ್ರೆ ಯುಪಿಎಸ್ ವ್ಯವಸ್ಥೆ ಸಹ ಇಲ್ಲ. ನಿನ್ನೆ ಭಾನುವಾರ ರಾತ್ರಿ ವನಜಾ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಡೆಲವರಿಗೆಂದು ಕುಟುಂಬಸ್ಥರು ಗರ್ಭಿಣಿಯನ್ನು (Pregnant) ಕರೆದುಕೊಂಡು ಬಂದಿದ್ದರು. ಆದ್ರೆ ಗೈನೋಕಾಲಜಿಸ್ಟ್ ಹಾಗೂ ಅನಸ್ತಿಷಿಯಾ ನೀಡುವ ವೈದ್ಯರು ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಈ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ.
ಈ ಮಧ್ಯೆ ಪ್ರತಿ ದಿನ ಸಂಜೆ ಬಳಿಕ ಹೆರಿಗೆ ಮಾಡಿಸುವ ವೈದ್ಯರು ಇರುವುದಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ನಾರ್ಮಲ್ ಡೆಲವರಿ ಆದ್ರೆ ಮಾತ್ರ ಅಡ್ಮಿಟ್ ಮಾಡಿ ಕೊಳ್ಳುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಗರ್ಭಿಣಿ ಕುಟುಂಬಸ್ಥರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಗರ್ಭಿಣಿ ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗರ್ಭಿಣಿ ಕುಟುಂಬಸ್ಥರು ಹಾಗೂ ವೈದ್ಯರ ನಡುವಿನ ನಡೆದ ಮಾತಿನ ಚಕಮಕಿಯ ವಿಡಿಯೋ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಆದರೆ ಗರ್ಭಿಣಿ ಕುಟುಂಬಸ್ಥರು ಹೆರಿಗೆ ನೋವು ಹೆಚ್ಚಾದ ಕಾರಣ ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಕರೆತಂದಿದ್ದಾರೆ. ರಾತ್ರಿ ಡೆಲವರಿ ಮಾಡಿಸಲು ಸೂಕ್ತ ವೈದ್ಯಕೀಯ ಸಿಬ್ಬಂದಿ ನೀಡಿ ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ