ನೆರೆಪೀಡಿತ ಪ್ರದೇಶಗಳ ರೈತರಿಗೆ ಶಾಸಕ ಮಹೇಶ್ ಸಾಂತ್ವನ
ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಕಾವೇರಿ ಪಾತ್ರದ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಮೀನು ನುಗ್ಗಿದ್ದು, ಶಾಸಕ ಎನ್ ಮಹೇಶ್ ಈ ಪ್ರದೇಶಗಳಿಗೆ ಭೇಡಿ ನೀಡಿ ಆತಂಕದಲ್ಲಿರುವ ರೈತರನ್ನು ಸಂತೈಸಿದರು. ಜಲಾಶಯಗಳಿಂದ ಬಿಟ್ಟಿರುವ ನೀರು ಹಲವಾರು ಕಡೆ ಜಮೀನುಗಳಿಗೆ ನುಗ್ಗಿದೆ. ಅಪಾರ ಪ್ರಮಾಣದ ಬೆಳೆಹಾನಿಯಿಂದಾಗಿ ತೀರಾ ಸಂಕಷ್ಟದಲ್ಲಿರುವ ರೈತರಿಗೆ ನೆರವಿನ ಭರವಸೆ ನೀಡಿದರು. ಇಲ್ಲಿ ಸ್ಮರಿಸಬಹುದಾದ ಅಂಶವೆಂದರೆ, ಕಳೆದ ವರ್ಷವೂ ಈ ಗ್ರಾಮಗಳು […]
ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಕಾವೇರಿ ಪಾತ್ರದ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಮೀನು ನುಗ್ಗಿದ್ದು, ಶಾಸಕ ಎನ್ ಮಹೇಶ್ ಈ ಪ್ರದೇಶಗಳಿಗೆ ಭೇಡಿ ನೀಡಿ ಆತಂಕದಲ್ಲಿರುವ ರೈತರನ್ನು ಸಂತೈಸಿದರು.
ಜಲಾಶಯಗಳಿಂದ ಬಿಟ್ಟಿರುವ ನೀರು ಹಲವಾರು ಕಡೆ ಜಮೀನುಗಳಿಗೆ ನುಗ್ಗಿದೆ. ಅಪಾರ ಪ್ರಮಾಣದ ಬೆಳೆಹಾನಿಯಿಂದಾಗಿ ತೀರಾ ಸಂಕಷ್ಟದಲ್ಲಿರುವ ರೈತರಿಗೆ ನೆರವಿನ ಭರವಸೆ ನೀಡಿದರು. ಇಲ್ಲಿ ಸ್ಮರಿಸಬಹುದಾದ ಅಂಶವೆಂದರೆ, ಕಳೆದ ವರ್ಷವೂ ಈ ಗ್ರಾಮಗಳು ಪ್ರವಾಹಕ್ಕೀಡಾಗಿ, ರೈತರು ಬಸವಳಿದಿದ್ದರು.
ರೈತರೊಂದಿಗೆ ಮಾತಾಡಿದ ನಂತರ ಸಚಿವ ಮಹೇಶ್, ಅಧಿಕಾರಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.