ಚಾಮರಾಜನಗರ: ಆದಿವಾಸಿಗಳ ಜಮೀನನ್ನ ಅರಣ್ಯ ಜಮೀನೆಂದು ನೋಟಿಸ್, ಅಧಿಕಾರಿಗಳ ವಿರುದ್ಧ ಆಕ್ರೋಶ
1963ರಲ್ಲಿ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಸೋಲಿಗರಿಗಾಗಿ ಕಂದಾಯ ಜಮೀನು ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಸರ್ವೇ ನಂಬರ್ 1.2.3.4 ನ್ನ ಅರಣ್ಯ ಜಮೀನು ಎಂದು ನಮೂದಿಸಿ ನೋಟಿಸ್ ನೀಡಲಾಗಿದೆ. ಇದೀಗ ಆದಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚಾಮರಾಜನಗರ, ಜುಲೈ.25: ಆದಿವಾಸಿ ಜಮೀನುಗಳನ್ನ ಅರಣ್ಯ ಜಮೀನೆಂದು ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಪೋಡುಗಳ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬಂಗ್ಲೆಪೋಡು, ಯರಕನಗದ್ದೆ ಹಾಗೂ ಸೀಗೆಬೆಟ್ಟದ ಪೋಡಿನ ಜನತೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
1963ರಲ್ಲಿ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಸೋಲಿಗರಿಗಾಗಿ ಕಂದಾಯ ಜಮೀನು ನೀಡಿದ್ದರು. ಸರ್ಕಾರ ನೀಡಿದ ಜಮೀನಿನಲ್ಲೇ ಆದಿವಾಸಿಗಳು ಸೋಲಿಗರು ಉಳುಮೆ ಮಾಡುತ್ತ ಬರುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಸರ್ವೇ ನಂಬರ್ 1.2.3.4 ನ್ನ ಅರಣ್ಯ ಜಮೀನು ಎಂದು ನಮೂದಿಸಿ ನೋಟಿಸ್ ನೀಡಲಾಗಿದೆ. ಅರಣ್ಯ ಇಲಾಖೆ ನೀಡಿದ ನೋಟಿಸ್ ನಿಂದ ಬೇಸತ್ತು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆಯಲ್ಲೇ ತಾಲೂಕು ಕಚೇರಿ ಬಳಿ ಕುಳಿತು ಸೋಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣವೇ ಸಮಸ್ಯೆ ಬಗೆ ಹರಿಸುವಂತೆ ಸೋಲಿಗರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ, ಬಿಜೆಪಿ ಮೇಯರ್ ವಿರುದ್ಧ ದೂರು