ಬಂಡೀಪುರದಲ್ಲಿ ಹೊಸವರ್ಷಾಚರಣೆಗೆ ಬ್ರೇಕ್; ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ.
ಚಾಮರಾಜನಗರ, ಡಿ.31: ಹೊಸ ವರ್ಷಕ್ಕೆ (New Year) ಕೌಂಟ್ ಡೌನ್ ಆರಂಭವಾಗಿದೆ. ಹೊಸ ವರ್ಷವನ್ನ ಹೊಸ ಹೊರುಪಿನೊಂದಿಗೆ ಬರಮಾಡಿಕೊಳ್ಳಲು ಜನರು ಕಾಯುತ್ತಿದ್ದಾರೆ. ಇನ್ನು ಬಂಡೀಪುರದಲ್ಲಿ(Bandipur) ಹೊಸವರ್ಷಾಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ. ಬಂಡೀಪುರದ ಖಾಸಗಿ ರೆಸಾರ್ಟ್ಗಳಲ್ಲಿಯೂ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ.
2023ರನ್ನು ಕಳಿಸಿ 2024ಕ್ಕೆ ಸ್ವಾಗತ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೊಸಾ ವರ್ಷಕ್ಕೆ ಪಾರ್ಟಿ ಮಾಡೊದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಪಬ್ , ಕ್ಲಬ್, ಪ್ರವಾಸಿ ತಾಣ, ಫಾರ್ಮ್ ಹೌಸ್, ರೆಸಾರ್ಟ್ ಹೀಗೆ ಯೋಚಿಸುತ್ತಿದ್ದಾರೆ. ಆದರೆ ಮುನ್ನೆಚ್ಚರಿಕಾಕ್ರಮವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ. ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ. ಆದರೆ ಅರಣ್ಯ ಇಲಾಖೆ ವಸತಿಗೃಹ ಹಾಗೂ ಬಂಡೀಪುರದ ಖಾಸಗಿ ರೆಸಾರ್ಟ್ಗಳಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಿದೆ. ಡಿಜೆ ಡ್ಯಾನ್ಸ್, ಮೋಜು ಮಸ್ತಿ ಹಾಗೂ ಕಲರ್ ಲೈಟಿಂಗ್ಸ್‌ಗೆ ನಿರ್ಬಂಧ ಹೇರಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಪ್ರವಾಸಿತಾಣಗಳಿಗೆ ನಿರ್ಬಂಧ
ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕುಂತಿ ಬೆಟ್ಟ, ಶಿವಗಂಗೆ ಬೆಟ್ಟ, ನಂದಿ ಹಿಲ್ಸ್ ಮತ್ತು ಸಿದ್ದರ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗುವ ಪ್ಲಾನ್ ಇದ್ರೆ ಕೈ ಬಿಟ್ಟುಬಿಡಿ. ಯಾಕಂದ್ರೆ ಡಿಸೆಂಬರ್ 30, 31 ಮತ್ತು ಜನವರಿ 01 ತನಕ ಯಾರಿಗೂ ಎಂಟ್ರಿ ಇಲ್ಲ. ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಮುನ್ನವೇ 37 ಐಪಿಎಸ್ಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ಸರ್ಕಾರ ಆದೇಶ
ಬೆಂಗಳೂರಲ್ಲಿ ಹೈ ಅಲರ್ಟ್
ಪಬ್ ಕ್ಲಬ್ನಲ್ಲಿ ಎಷ್ಟು ಜನರಿಗೆ ಕುಳಿತುಕೊಳ್ಳಲು ಜಾಗ ಇದೆಯೋ ಅಷ್ಟೇ ಟಿಕೆಟ್ಗಳನ್ನು ಮಾರಾಟ ಮಾಡ್ಬೇಕು. ಡಿಜೆ ನೈಟ್ಸ್ ಮಾಡುವವರು ಅನುಮತಿ ಪಡೆಯುವುದರ ಜೊತೆಗೆ ಸೌಂಡ್ ಲಿಮಿಟ್ಸ್ ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು. ರಾತ್ರಿ ಒಂದು ಘಂಟೆ ಅಷ್ಟರಲ್ಲಿ ಪಾರ್ಟಿ ಎಂಡ್ ಮಾಡ್ಬೇಕು. ಒಂದು ಘಂಟೆ ನಂತ್ರ ಪಾರ್ಟಿ ಮಾಡುವಹಾಗಿಲ್ಲ. ಪಾರ್ಟಿ ಎಂಟ್ರಿಕೊಡುವ ಪ್ರತಿಯೊಂದು ವ್ಯಕ್ತಿಯ ಹೆಸರು ಮತ್ತು ಫೋನ್ ನಂಬರ್ ಸಂಗ್ರಹ ಮಾಡ್ಬೇಕು, ಪಾರ್ಟಿಯಲ್ಲಿ ಡ್ರಗ್ಸ್ ಗಾಂಜಾ ನಶೆ ಏರಿಸುವ ಯಾವುದಾದ್ರು ವಸ್ತುಗಳ ಬಳಕೆ ಆಗುವುದು ತಿಳಿದ್ರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸರು ಜೋನ್ ರೀತಿಯಲ್ಲಿ ವಿಭಾಗ ಮಾಡಿಕೊಂಡು ತಮ್ಮ ಏರಿಯಾದಲ್ಲಿ ಇರುವ ಎಲ್ಲಾ ಕ್ಲಬ್, ಪಬ್, ಬಾರ್ ಮತ್ತು ಮಾಲ್ ಗಳಿಗೆ ಮತ್ತು ಪಾರ್ಟಿ ಆಯೋಜನೆ ಮಾಡುವ ಪಂಚತಾರಾ ಹೋಟೆಲ್ ಗಳಿಗೆ ಸೂಜನೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ