ಎಸ್​ಸಿ, ಎಸ್​ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ: ಹೆಚ್.​​ಸಿ. ಮಹದೇವಪ್ಪ

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಹಣದ ಕ್ರೂಡೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಗೃಹಲಕ್ಷ್ಮೀ ಯೋಜನೆ ಜಾರಿಗಾಗಿ ಎಸ್​​ಸಿ ಎಸ್​​ಟಿ ಅನುದಾನವನ್ನು ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಪ್ರತಿಭಟನೆಯೂ ನಡೆಸಿತ್ತು.

ಎಸ್​ಸಿ, ಎಸ್​ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ: ಹೆಚ್.​​ಸಿ. ಮಹದೇವಪ್ಪ
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​​ಸಿ ಮಹದೇವಪ್ಪ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: Rakesh Nayak Manchi

Updated on: Aug 20, 2023 | 6:37 PM

ಚಾಮರಾಜನಗರ, ಆಗಸ್ಟ್ 20: ಯಾವುದೇ ಕಾರಣಕ್ಕೂ ಎಸ್​ಸಿ, ಎಸ್​ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​​.ಸಿ.ಮಹಾದೇವಪ್ಪ (H.C.Mahadevappa) ಹೇಳಿದ್ದಾರೆ. ಚಾಮರಾಜನಗರದಲ್ಲಿ ನಡೆದ ಸಂವಿಧಾನ ಉಳಿವಿಗಾಗಿ ಭೀಮಸಂಕಲ್ಪ ಸಮಾವೇಶದಲ್ಲಿ ಈ ಹೇಳಿಕೆ ನೀಡಿದರು.

ಒಂದೊಂದೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಯೋಜನೆಗಳ ಸಮರ್ಪಕ ಜಾರಿಗಾಗಿ ಹಣದ ಕ್ರೂಡೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಗೃಹಲಕ್ಷ್ಮೀ ಯೋಜನೆ ಜಾರಿಗಾಗಿ ಎಸ್​​ಸಿ ಎಸ್​​ಟಿ ಅನುದಾನವನ್ನು ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಪ್ರತಿಭಟನೆಯೂ ನಡೆಸಿತ್ತು.

ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ನಿಯಮ 7ಡಿ ಅಡಿ ಅವಕಾಶ ಇದೆ. ಈ ನಿಯಮವನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡಿಕೊಂಡಿತ್ತು. ಬಿಜೆಪಿ ಸರ್ಕಾರ SCP, TSP ಹಣವನ್ನು ಬೇರೆ ಯೋಜನೆಗಳಿಗೆ ನೀಡುತ್ತಿತ್ತು. ನಾವು ಈಗ 7ಡಿ ನಿಯಮವನ್ನೇ ತೆಗೆದುಹಾಕುತ್ತಿದ್ದೇವೆ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Video: ಆ ಕಡೆ ಸೂರ್ಯನ ಪ್ರಕೋಪ -ಈ ಕಡೆ ಅಧಿಕಾರಿಗಳ ಬೇಜವಾಬ್ದಾರಿತನ: ಆತಂಕದ ಕ್ಷಣಗಳ ಎದುರಿಸಿದ ಸಚಿವ ಡಾಕ್ಟರ್​​ ಮಹದೇವಪ್ಪ

ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೇ ನಾವೇ ಎಂದು ಹೇಳಿದ ಹೆಚ್​.ಸಿ.ಮಹದೇವಪ್ಪ, ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಪ್ರತಿಭಟನೆ ಮಾಡುವಂತೆ ಹೇಳಿಕೊಟ್ಟಿದ್ದೆ. ಹೆಚ್​​.ಸಿ.ಮಹದೇವಪ್ಪಗೆ ಧಿಕ್ಕಾರ ಕೂಗಿ ಅಂತಾ ನಾನೇ ಹೇಳಿಕೊಟ್ಟಿದ್ದೆ. ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದಲಿತರ ಪರ ಕೆಲಸ ಮಾಡಿಸುತ್ತಿದ್ದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ದಲಿತರ ಪರ ಕೆಲಸ ಮಾಡಿಸುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ ಸ್ಕೀಮ್ ಗಳಿಗೆ ಬೇರೆ ಯೋಜನೆ ಅಥವಾ ಇಲಾಖೆಗಳಿಗೆ ಮೀಸಲಾಗಿರಿಸಿರುವ ಹಣ ಬಳಸಲಾಗಿತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಅರೋಪ ಮಾಡಿದ್ದರು. ವಿಧಾನಸೌಧಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಎಸ್​​ಸಿಪಿ ಟಿಎಸ್​​​ಪಿ ಸಭೆಯ ಬಳಿಕ ಮಾತನಾಡಿದ್ದ ಮಹಾದೇವಪ್ಪ ಅವರಿಗೆ ಪತ್ರಕರ್ತರು ಮೀಸಲು ಹಣವನ್ನು ಗೃಹಲಕ್ಷ್ಮೀ ಬಳಸಲಾಗುತ್ತಿದೆಯೇ ಅಂತ ಪ್ರಶ್ನೆ ಕೇಳಿದ್ದರು.

ಸಚಿವರು ಉತ್ತರ ನೀಡುತ್ತಿದ್ದಾಗ, ಸರ್ ನೀವು ಸುಳ್ಳು ಹೇಳುತ್ತಿದ್ದೀರಿ ಅಂತ ನೇರವಾಗಿ ಆರೋಪಿಸಿದ್ದರು. ಇಲ್ಲ, ಹಾಗೇನೂ ಇಲ್ಲ, ಒಂದು ಇಲಾಖೆಗೆ ಬಿಡುಗಡೆ ಮಾಡಿದ ಅನುದಾನ ಬೇರೆ ಯೋಜನೆಗೆ ಬಳಸಲು ಸಾಧ್ಯವಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್