Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲಿ 20 ಅಡಿ ಆಳದ ಗುಂಡಿ ತೋಡಿದ ಮಹಿಳೆ

Chamarajanagar: ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ನಿಧಿ ಶೋಧಕ್ಕಾಗಿ ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಜ್ಯೋತಿಷಿಯೊಬ್ಬರು ಮಹಿಳೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾರೆ. ಜ್ಯೋತಿಷಿ ಮಾತು ನಂಬಿ ಮಹಿಳೆಯು ಕಳಸ ಇಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ. ಬಳಿಕ 3 ಅಡಿ ಅಗಲ 20 ಅಡಿ ಆಳದ ಗುಂಡಿ ತೆಗೆಸಿದ್ದಾರೆ. ನೆರೆಹೊರೆಯವರಿಗೆ ವಿಷಯ ಗೊತ್ತಾಗಿ ರಾಮಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಜ್ಯೋತಿಷಿ ಕಾಲ್ಕಿತ್ತಿದ್ದಾನೆ. 

ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲಿ 20 ಅಡಿ ಆಳದ ಗುಂಡಿ ತೋಡಿದ ಮಹಿಳೆ
ನಿಧಿ ಆಸೆಗಾಗಿ ಮನೆಯಲ್ಲಿ ಗುಂಡಿ ತೋಡಿದ ಮಹಿಳೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​

Updated on: Aug 23, 2023 | 12:26 PM

ಚಾಮರಾಜನಗರ, ಆಗಸ್ಟ್​ 23: ಮಹಿಳೆಯೊಬ್ಬರು ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ (treasure) ಮನೆಯಲ್ಲೆ ಗುಂಡಿ ತೋಡಿರುವ ಪ್ರಸಂಗ ನಡೆದಿದೆ. ಆ ಗೃಹಿಣಿ ನಿಧಿ ಆಸೆಗಾಗಿ ಮನೆಯೊಳಗೆ ಬರೋಬ್ಬರಿ 20 ಅಡಿ ಆಳದ ಗುಂಡಿ (pit) ತೆಗೆದಿದ್ದಾರೆ! ಚಾಮರಾಜನಗರ ( Chamarajanagar) ಜಿಲ್ಲೆ ಹನೂರು (hanur) ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ವಾಸ್ತು ಸರಿ ಇಲ್ಲ ಎಂದು ಶಾಸ್ತ್ರ ಕೇಳಲು ಹೋಗಿದ್ದ ಗ್ರಾಮದ ಭಾಗ್ಯ ಎಂಬ ಮಹಿಳೆಗೆ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ನಂಬಿಸಿದ್ದಾನೆ.

ನಿಧಿ ಸಿಗಲು ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಸದರಿ ಜ್ಯೋತಿಷಿ ಮಹಿಳೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾನೆ. ಜ್ಯೋತಿಷಿ ಮಾತು ನಂಬಿ ಮಹಿಳೆಯು ಕಳಸ ಇಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ: ಗೋಡಂಬಿ ತೋಪಿನಲ್ಲಿ ಮೋಜು ಮಸ್ತಿ ಮಾಡಲು ಗಂಡನನ್ನು ಕರೆದುಕೊಂಡು ಹೋದವಳು.. ಆಮೇಲೆ ಎನು ಮಾಡಿದಳು ಗೊತ್ತಾ!?

ಬಳಿಕ 3 ಅಡಿ ಅಗಲ 20 ಅಡಿ ಆಳದ ಗುಂಡಿ ತೆಗೆಸಿದ್ದಾರೆ. ನೆರೆಹೊರೆಯವರಿಗೆ ವಿಷಯ ಗೊತ್ತಾಗಿ ರಾಮಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಜ್ಯೋತಿಷಿ ಕಾಲ್ಕಿತ್ತಿದ್ದಾನೆ. ಕಳೆದೊಂದು ವಾರದ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್​ ಮೊದಲ ವಾರದಲ್ಲಿ ನಿಧಿ ಆಸೆಗಾಗಿ ಜಮೀನಿನಲ್ಲಿ ಹುಣಸೂರು ತಾಲೂಕಿನ‌ಲ್ಲಿಯೂ ದೇವರ ಕಲ್ಲು ಕಿತ್ತು ಶೋಧ ನಡೆಸಿದ್ದ ದುಷ್ಕರ್ಮಿಗಳು

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ‌ ಅಗ್ರಹಾರ ಗ್ರಾಮದಲ್ಲಿಯೂ ಲೋಕೇಶ್ ಎಂಬುವವರ ಜಮೀನಿನಲ್ಲಿ ಒಂದು ದೇವರ ಕಲ್ಲಿದ್ದು, ಆ ಕಲ್ಲಿನ ಕೆಳಗಡೆ ಒಂದು ಹಂಡೆಯಲ್ಲಿ ಚಿನ್ನ ಇದೆ ಎಂದು ನಂಬಿದ್ದರು‌. ಆದ್ರೆ ಇಷ್ಟು ದಿನ ದೇವರ ಮೇಲಿದ್ದ ನಂಬಿಕೆಯಿಂದ ಗುಂಡಿ ತೆಗೆಯುವ ಧೈರ್ಯವನ್ನ ಕುಟುಂಬಸ್ಥರು ಮಾಡಿರಲಿಲ್ಲ. ಈ ಬಗ್ಗೆ ಕಳೆದ ಒಂದು ತಿಂಗಳಲ್ಲಿ ಈ ಬಗ್ಗೆ ಗ್ರಾಮದಲ್ಲಿ ಮತ್ತೆ ಚರ್ಚೆ ಶುರುವಾಗಿತ್ತು.

ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರನ್ನು ಕರೆದುಕೊಂಡು ಬಂದು ಇವರು ನಿಧಿ ತೆಗೆಯುತ್ತಾರೆ ಅಂತ ಲೋಕೇಶ್ ಕುಟುಂಬಸ್ಥರಿಗೆ ಪರಿಚಯಿಸಿದ್ದಾನೆ. ಅಲ್ಲಿ ನಿಧಿ ಇದೆ, ನಾವು ಅಲ್ಲಿ ಟೆಸ್ಟ್ ಮಾಡಿದ್ದೇವೆ ಅಂತನು ಇಬ್ಬರು ಆಸಾಮಿಗಳು ತಿಳಿಸಿದ್ದಾರಂತೆ.‌ ಆದ್ರೆ ಕುಟುಂಬಸ್ಥರು ಇದಕ್ಕೆ ಒಪ್ಪಿಲ್ಲವಂತೆ. ನಿಧಿಗಾಗಿ ಶೋಧ ಮಾಡಿದ್ರೆ‌ ಕುಟುಂಬಕ್ಕೆ ಕೆಡಕಾಗುತ್ತೆ ಅನ್ನೋ ಕಾರಣಕ್ಕೆ ಅವರಿಬ್ಬರಿಗು ಬೇರೆ ಬೇರೆ ಕಾರಣ ಹೇಳಿ‌ ಕಳುಹಿಸುತ್ತಿದ್ದರಂತೆ. ಆದ್ರೆ ಕಳೆದ‌ ಶುಕ್ರವಾರದಂದು ಬಂದು ನೋಡಿದ್ರೆ‌ ಜಮೀನಲ್ಲಿ‌ಪೂಜೆ ಮಾಡಿ ಕಲ್ಲನ್ನು ಬೀಳಿಸಿ‌ಗುಂಡಿ ತೆಗೆಯಲಾಗಿದೆ ಎಂದು ಜಮೀನಿನ ಮಾಲೀಕ ಲೋಕೇಶ್ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ