AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಲಕ್ಷ ಲಕ್ಷ ಸಂಪಾದನೆ: ಚಿಕ್ಕಬಳ್ಳಾಪುರ ರೈತ​ ಫುಲ್​ ಖುಷ್

ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ವಿವಿಧ ತಳಿಯ ದ್ರಾಕ್ಷಿ ಬೆಳೆದು ದೇಶ ವಿದೇಶಗಳಿಗೆ ರಪ್ತು ಮಾಡುವುದರಲ್ಲಿ ಫೇಮಸ್. ಕಾಲ ಕ್ರಮೇಣ ಸ್ವದೇಶಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾದ ಕಾರಣ ಕೆಲವು ರೈತರು ಅಮೇರಿಕನ್ ತಳಿಯಾದ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. ರೈತ ಕೆಆರ್ ರೆಡ್ಡಿ ಐದು ಎಕರೆ ಜಮೀನಿನಲ್ಲಿ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಕೈ ತುಂಬ ಕಾಸು ಎಣೆಸುತ್ತಿದ್ದಾರೆ.

ಅಮೇರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಲಕ್ಷ ಲಕ್ಷ ಸಂಪಾದನೆ: ಚಿಕ್ಕಬಳ್ಳಾಪುರ ರೈತ​ ಫುಲ್​ ಖುಷ್
ಅಮೇರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಲಕ್ಷ ಲಕ್ಷ ಸಂಪಾದನೆ: ಚಿಕ್ಕಬಳ್ಳಾಪುರ ರೈತ​ ಫುಲ್​ ಖುಷ್
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Jun 19, 2024 | 10:04 PM

Share

ಚಿಕ್ಕಬಳ್ಳಾಪುರ, ಜೂನ್​ 19: ಆ ಜಿಲ್ಲೆ ತರಹೇವಾರಿ ದ್ರಾಕ್ಷಿ (Grapes) ಬೆಳೆಯೋದರಲ್ಲಿ ಹೆಸರುವಾಸಿ. ಸ್ವದೇಶಿ ದ್ರಾಕ್ಷಿ ಬೆಳೆಯೋದ್ರರಲ್ಲಿ ಇಡೀ ರಾಜ್ಯದಲೇ ಮನ್ನಣೆ ಪಡೆದಿದ್ದ ರೈತ (Farmer). ಸ್ವದೇಶಿ ದ್ರಾಕ್ಷಿಗೆ ಕ್ರಮೇಣವಾಗಿ ಬೇಡಿಕೆ ಕಡಿಮೆಯಾಗಿದ್ರಿಂದ ವಿದೇಶಿ ತಳಿಯ ದ್ರಾಕ್ಷಿ ಬೆಳೆ ಬೆಳೆಯೋದಕ್ಕೆ ಶಿಫ್ಟ್ ಆಗಿದ್ದು, ಲಕ್ಷ ಲಕ್ಷ ರೂ. ಸಂಪಾದನೆ ಮಾಡಿ ದಿಲ್ ಖುಷ್ ಆಗಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಪ್ರಗತಿಪರ ರೈತ ಕೆ.ಆರ್ ರೆಡ್ಡಿ ವಿದೇಶಿ ತಳಿಯ ದ್ರಾಕ್ಷಿ ಬೆಳೆದಿದ್ದಾರೆ.

ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ವಿವಿಧ ತಳಿಯ ದ್ರಾಕ್ಷಿ ಬೆಳೆದು ದೇಶ ವಿದೇಶಗಳಿಗೆ ರಪ್ತು ಮಾಡುವುದರಲ್ಲಿ ಫೇಮಸ್. ಇರೋ ಕಡಿಮೆ ನೀರಾವರಿಯಲ್ಲಿ, ಬೆಂಗಳೂರು ಬ್ಲೂ, ದಿಲ್ ಖುಷ್, ಸೀಡ್ ಲೆಸ್, ಶರತ್, ಕೃಷ್ಣ ಸೇರಿದಂತೆ ಹಲವು ಬಗೆಯ ದ್ರಾಕ್ಷಿ ಬೆಳೆಯುತಿದ್ದ. ಆದರೆ ಕಾಲ ಕ್ರಮೇಣ ಸ್ವದೇಶಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾದ ಕಾರಣ ಅನುಕೂಲಸ್ಥ ಕೆಲವು ರೈತರು ಈಗ ಅಮೇರಿಕನ್ ತಳಿಯಾದ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. ಇನ್ನೂ ರೈತ ಕೆ ಆರ್ ರೆಡ್ಡಿ ಐದು ಎಕರೆ ಜಮೀನಿನಲ್ಲಿ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಕೈ ತುಂಬ ಕಾಸು ಎಣೆಸುತ್ತಿದ್ದಾರೆ.

ಇದನ್ನೂ ಓದಿ: ಹೆಚ್ಚಿದ ಟೊಮೇಟೊ ಬೆಲೆ; ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ಕದ್ದ ಕಳ್ಳರು

ರೆಡ್ ಗ್ಲೊಬ್ ದ್ರಾಕ್ಷಿಗೆ ಉತ್ತಮ ಬೆಲೆ ಇದೆ. ರೈತರ ತೋಟದಲ್ಲಿ ಕೆ.ಜಿ ದ್ರಾಕ್ಷಿ ಬೆಲೆ 200 ರೂಪಾಯಿ ಇದೆ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ರಪ್ತು ಆಗುತ್ತಿದೆ. ಇನ್ನೂ ರೆಡ್ ಗ್ಲೊಬ್ ದ್ರಾಕ್ಷಿ ಕಟಾವು ಮಾಡಿದ ನಂಗತರ 20 ದಿನಗಳ ಕಾಲ ಸಾಮಾನ್ಯವಾಗಿ ಹಾಳಾಗುವುದಿಲ್ಲ. ಹಣ್ಣು ಗಟ್ಟಿಯಾಗಿದ್ದು, ಕಲರ್ ಕಲರ್ ಆಗಿರುತ್ತದೆ. ಮಾಗಿದಷ್ಟು ರುಚಿ ಹೆಚ್ಚಾಗುತ್ತೆ. ಇದ್ರಿಂದ ಕೆಲವು ಯುರೋಪ್ ದೇಶಗಳಲ್ಲಿ ರೆಡ್ ಗ್ಲೊಬ್ ದ್ರಾಕ್ಷಿ ಗೆ ಭಾರಿ ಬೇಡಿಕೆ ಇದೆ.

ಇದನ್ನೂ ಓದಿ: ವಿನೂತನ ವಿಧಾನಗಳ ಮೂಲಕ ಮಾವು ಬೆಳೆದು 75 ಲಕ್ಷ ರೂಪಾಯಿ ಸಂಪಾದಿಸಿದ ರೈತ!

ಸ್ವದೇಶಿ ದ್ರಾಕ್ಷಿ ಬೆಳೆಯೋದ್ರರಲ್ಲಿ ಇಡೀ ರಾಜ್ಯದಲೇ ಮನ್ನಣೆ ಪಡೆದಿರುವ ಚಿಕ್ಕಬಳ್ಳಾಪುರದ ರೈತರು ಈಗ ವಿದೇಶಿ ಮೂಲದ ರೆಡ್ ಗ್ಲೊಬ್ ದ್ರಾಕ್ಷಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.