ವಿನೂತನ ವಿಧಾನಗಳ ಮೂಲಕ ಮಾವು ಬೆಳೆದು 75 ಲಕ್ಷ ರೂಪಾಯಿ ಸಂಪಾದಿಸಿದ ರೈತ!
ಇಲ್ಲೊಬ್ಬ ರೈತ ಮಾಡಿದ ಐಡಿಯಾದಿಂದ ಮೂರು ಪಟ್ಟು ಹೆಚ್ಚಾಗಿ ಮಾವಿನ ಇಳುವರಿ ಬಂದಿದೆ. ರೈತನೊಬ್ಬ ಬೇಸಿಗೆಯ ರಣಬಿಸಿಲಿಗೂ ಸೆಡ್ಡು ಹೊಡೆದು ಬಂಪರ್ ಮಾವು ಬೆಳಿದಿದ್ದ. ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಹಾಗೆ ಮಾವಿನ ಕಾಯಿಯಲ್ಲಿ 75 ಲಕ್ಷ ರೂಪಾಯಿ ಆದಾಯ ಗಳಿಸಿ, ಬೆಷ್ ಅನಿಸಿಕೊಂಡಿದ್ದಾನೆ. ಅಷ್ಟಕ್ಕೂ ಆ ರೈತ ಯಾರು ಅಂತೀರಾ? ಈ ಸ್ಟೋರಿ ಓದಿ.
ಚಿಕ್ಕಬಳ್ಳಾಪುರ, ಜೂ.06: ಈ ಬಾರಿಯ ಮಾವಿನ ಇಳುವರಿ(Mango Crop) ಕಂಡ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಮೀಸಗಾನಹಳ್ಳೀ ಗ್ರಾಮದ ರೈತ ಗೋಪಾಲಪ್ಪ, ಸ್ವತಃ ಭೂಮಿತಾಯಿಗೆ ನಮೊ ಎನ್ನುತ್ತಿದ್ದಾರೆ. ಬೆಂಗಳೂರಿನ ಗೋಪಾಲಪ್ಪ ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಲಕ್ಕನಾಯಕನಹಳ್ಳಿ ಗ್ರಾಮದ ಬಳಿ 25 ಎಕೆರೆ ಜಮೀನು ಹೊಂದಿದ್ದು, ಅದರಲ್ಲಿ 18 ಎಕರೆ ಜಮೀನಿಲ್ಲಿ ಬಾದಾಮಿ, ಮಲ್ಲಿಕಾ, ತೋತಾಪುರಿ, ಬೇಗನ್ ಪಲ್ಲಿ ಜಾತಿಯ ಮಾವು ಬೆಳೆದಿದ್ದಾನೆ. ಈ ಭಾರಿ ಇಸ್ರೇಲ್ ತಂತ್ರಜ್ಞಾನ ಬಳಸಿ ಮಾವಿನಕಾಯಿ ಬೆಳಿದಿದ್ದು, ಗಿಡದ ತುಂಬ ಬರಿ ಕಾಯಿಗಳೆ ಕಾಣುತ್ತಿವೆ.
ಇಸ್ರೇಲ್ ತಂತ್ರಜ್ಞಾನ
ಈ ರೈತ ತೋಟವನ್ನು 75 ಲಕ್ಷ ರೂಪಾಯಿಗೆ ಗುತ್ತಿಗೆ ಕೊಟ್ಟಿದ್ದು, ಮಾವಿನ ಮರಗಳಿಗೆ ಮಧ್ಯಭಾಗದಲ್ಲೇ ಸೂರ್ಯನ ಬೆಳಕು ಬೀಳುವ ಹಾಗೆ ಮಾಡಲಾಗಿದೆ. ಇಸ್ರೇಲ್ ತಂತ್ರಜ್ಞಾನದ ಮಾದರಿಯಲ್ಲಿ ಪ್ರೂನಿಂಗ್ ಮಾಡಿದ್ದಾರೆ. ಮಾವಿನ ಮರಗಳಿಗೆ ಹನಿ ನೀರಾವರಿ ಪದ್ದತಿ ಆಳವಡಿಸಿ ಪ್ರತಿನಿತ್ಯ ನೀರುಣಿಸಿದ್ದಾರೆ. ಮರದ ಕೆಳಗೆ ನಾಲ್ಕು ಕಡೆ ಗುಂಡಿ ತೆಗೆದು ಪೋಷಕಾಂಶಗಳನ್ನ ಪೂರೈಸಿದ್ದಾರೆ.
ಇದನ್ನೂ ಓದಿ:ಬಿಸಿಲಿಗೆ ಬಾಡಿದ ಮಾವು; 88 ಕೋಟಿ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ
ಇದಲ್ಲದೇ ಈ ಬಾರಿ ಅತಿಯಾದ ತಾಪಮಾನ ಇದ್ದ ಕಾರಣ 1 ತಿಂಗಳ ಕಾಲ ಮಾವಿನ ಮರಗಳಿಗೆ ವಾಟರ್ ಸ್ಪ್ರೇ ಮಾಡಿಸಿ ಮರ ಬಿಸಲಿಗೆ ಬಾಡದಂತೆ ಕಾಪಾಡಿಕೊಂಡಿದ್ದಾರೆ. ಇದರಿಂದ ಬಂಪರ್ ಫಸಲು ಬಂದಿದೆ. ಬರೋಬ್ಬರಿ 180 ರಿಂದ 200 ಟನ್ ಮಾವು ಇಳುವರಿ ಬಂದಿದ್ದು, ವ್ಯಾಪಾರಿ ಸಯ್ಯದ್ ಎಂಬುವವರು 75 ಲಕ್ಷ ರೂಪಾಯಿಗೆ ತೋಟ ಗುತ್ತಿಗೆ ಪಡೆದಿದ್ದಾರೆ. ಇನ್ನು ರೈತನ ತೋಟಕ್ಕೆ ಚಿಕಬಳ್ಳಾಪುರ ಸೇರಿದಂತೆ ರಾಜ್ಯ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತನ ಕಾಯಕಕ್ಕೆ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ