ಎಂ.ಕಾಂ ಓದಿ ಕೃಷಿ ಕಾಯಕಕ್ಕೆ ಎಂಟ್ರಿ; ವೀಳ್ಯದೆಲೆ ಬೆಳೆದು ಭರ್ಜರಿ ಲಾಭ ಕಂಡ ಯುವ ರೈತ

ಆ ಯುವಕ ಓದಿದ್ದು ಎಂ.ಕಾಂ, ಮಹಾನಗರದಲ್ಲಿ ಓದಿಗೆ ಒಳ್ಳೆಯ ಕೆಲಸ ಸಿಕ್ಕು ಕೈ ತುಂಬಾ ಸಂಬಳ ಸಿಗುತಿತ್ತು. ಆದ್ರೆ, ಬೇರೆಯವರ ಕೈಯಲ್ಲಿ ದುಡಿಯುವುದ್ದಕ್ಕಿಂತ ತಾನೆ ಇನ್ನೊಬ್ಬರಿಗೆ ಕೆಲಸ ಕೊಡಬೇಕು ಎಂದು ಮುಂದಾಗಿದ್ದಾನೆ. ಇದೆ ಕಾರಣಕ್ಕೆ ಸಿಟಿ ಜೀವನ ಬಿಟ್ಟು ಹಳ್ಳಿಗೆ ಬಂದಿರುವ ಯುವಕ, ಸಾವಯುವ ಕೃಷಿಗೆ ಕೈ ಹಾಕಿ ಯಶಸ್ಸು ಕಂಡಿದ್ದಾನೆ. 

ಎಂ.ಕಾಂ ಓದಿ ಕೃಷಿ ಕಾಯಕಕ್ಕೆ ಎಂಟ್ರಿ; ವೀಳ್ಯದೆಲೆ ಬೆಳೆದು ಭರ್ಜರಿ ಲಾಭ ಕಂಡ ಯುವ ರೈತ
ವೀಳ್ಯದೆಲೆ ಬೆಳೆದು ಭರ್ಜರಿ ಲಾಭ ಕಂಡ ಯುವ ರೈತ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 19, 2024 | 9:16 PM

ಯಾದಗಿರಿ, ಜೂ.19: ಯಾದಗಿರಿ ಜಿಲ್ಲೆಯ ಗುರುಮಠಕಲ್(Gurumithakal) ತಾಲೂಕಿನ ಎಲ್ಹೇರಿ ಗ್ರಾಮದ ವಿಶ್ವಶಂಕರ್ ಎಂಬ ಯುವಕ, ಸಿಟಿ ಲೈಫ್​ಗೆ ಗುಡ್ ಬೈ ಹೇಳಿ ಹಳ್ಳಿ ಸೇರಿದ್ದಾನೆ. ಸಿಟಿಯಲ್ಲಿದ್ದು ಒಳ್ಳೆಯ ಕಂಪನಿಯಲ್ಲಿ ಎಸಿ ರೂಮ್​ನಲ್ಲಿ ಕುಳಿತುಕೊಂಡು ಕೆಲಸ ಮಾಡಿಕೊಂಡು ಕೈ ತುಂಬಾ ಸಂಬಂಳ ಪಡೆಯುವ ಬದಲು ಕೃಷಿಯಲ್ಲಿ ಖುಷಿ ಕಾಣಲು ಮುಂದಾಗಿದ್ದಾನೆ. ಜೊತೆಗೆ ತಕ್ಕ ಮಟ್ಟಿಗೆ ಸಕ್ಸಸ್ ಕೂಡ ಆಗಿದ್ದಾನೆ. ಹೌದು, ಈ ವಿಶ್ವಶಂಕರ್ ಎಂ.ಕಾಂ ಪದವಿ ಮುಗಿಸಿ ಸಿಟಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಬಳಿಕ ವಿಶ್ವಶಂಕರ್​ಗೆ ಹಳ್ಳಿ ಕಡೆ ಮನಸ್ಸು ಎಳೆದಿದೆ. ಹೀಗಾಗಿ ತನ್ನೂರಿಗೆ ಬಂದು ಕೃಷಿ ಕಾಯಕವನ್ನ ಆರಂಭಿಸಿ, ಅದರಲ್ಲೂ ವೀಳ್ಯದೆಲೆ (Betel) ಬೆಳೆದು ಭರ್ಜರಿ ಲಾಭ ಕಂಡಿದ್ದಾನೆ.

ತಂದೆಯ 12 ಎಕರೆ ಬಂಜರು ಭೂಮಿಯನ್ನ ಪಡೆದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾನೆ. ಏನನ್ನೂ ಬೆಳೆಯಲೂ ಯೋಗ್ಯವಲ್ಲದ ಭೂಮಿಯಲ್ಲಿ ಸಾವಯುವ ಕೃಷಿ ಪದ್ದತಿಯನ್ನ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾನೆ. ಜಮೀನಿನಲ್ಲಿ ಬೋರವೆಲ್ ಕೊರೆಸಿದ್ದು, 4 ಎಕರೆ ಜಮೀನಿನಲ್ಲಿ 25 ವೆರಾಯಿಟಿ ಬೆಳೆಗಳನ್ನು ಬೆಳೆದಿದ್ದಾನೆ. ವರ್ಷದ 12 ತಿಂಗಳು ಹಣ್ಣುಗಳು ತೋಟದಲ್ಲಿ ಸಿಗಬೇಕು ಎನ್ನುವ ದೃಷಿಯಿಂದ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತರಹ ಹಣ್ಣಿನ ಗಿಡಗಳನ್ನ ಹಾಕಿದ್ದಾನೆ. ಕೊಟ್ಟಿಗೆ ಗೊಬ್ಬರವನ್ನ ಬಳಸಿಕೊಂಡು ಕೃಷಿ ಮಾಡುತ್ತಿದ್ದು, ಯಶಸ್ವಿಯಾಗಿದ್ದೆನೆ ಎನ್ನುತ್ತಾರೆ ವಿಶ್ವಶಂಕರ್.

ಇದನ್ನೂ ಓದಿ:ಪಪ್ಪಾಯ ಬೆಳೆದು ಕೈ ಸುಟ್ಟುಕೊಂಡ ಯುವ ರೈತ; ಬ್ಯುಸಿನೆಸ್ ಬಿಟ್ಟು ಕೃಷಿಗೆ ಇಳಿದ ಯುವಕ ಕಂಗಾಲು!

ಇನ್ನು ವಿಶ್ವಶಂಕರ್ ಕುಟುಂಬ ಮೂಲತ ಕೃಷಿ ಕುಟುಂಬವಾಗಿದೆ. ತಾತನ ಕಾಲದಿಂದಲೂ ಗ್ರಾಮದಲ್ಲಿ ಕೃಷಿ ಕಾಯಕದಲ್ಲೇ ತೊಡಗಿಕೊಂಡಿದ್ದಾರೆ. ತಂದೆ ಸರ್ಕಾರಿ ಉದ್ಯೋಗದಲ್ಲಿರುವ ಕಾರಣಕ್ಕೆ ಸ್ವಲ್ಪ ಗ್ಯಾಪ್ ಆಗಿತ್ತು. ಆದ್ರೆ, ತಂದೆ ನಿವೃತ್ತಿಯಾದ ಬಳಿಕ ತೋಟದಲ್ಲೇ ಮನೆ ಮಾಡಿಕೊಂಡಿದ್ದು ಸಾವಯುವ ಕೃಷಿ ಮಾಡುತ್ತಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಪೆರು, ಚಿಕೂ, ದಾಳಿಂಬೆ, ಸೆಬು, ರಾಮಫಲು, ಸೀತಾಫಲ ಸೇರಿದಂತೆ 25 ವೆರಾಯಿಟಿಯ ಹಣ್ಣುಗಳನ್ನ ಬೆಳೆಯುತ್ತಿದ್ದಾರೆ.

ಯಾವ ದಿನ ತೋಟಕ್ಕೆ ಹೋದರೂ ಸಹ ಹಣ್ಣಗಳನ್ನ ಸಿಗಬೇಕು ಎನ್ನುವ ಉದ್ದೇಶದಿಂದ ಬೆಳೆಯಲಾಗಿದೆ. ಆರಂಭವಾಗಿದ್ದರಿಂದ ಇದರಿಂದ ಅಷ್ಟೋಂದು ಲಾಭ ಬಂದಿಲ್ಲ. ಆದ್ರೆ, ಒಂದು ಎಕರೆಯಲ್ಲಿ ಸಾವಿರಾರು ರೂ.ಖರ್ಚು ಮಾಡಿ ಪಾಲಿ ಹೌಸ್ ಮಾಡಿದ್ದು, ಅದರಲ್ಲಿ ವೀಳ್ಯದೆಲೆಯನ್ನ ಬೆಳೆಯಲಾಗಿದೆ. ಇದು ವರ್ಷದ 12 ತಿಂಗಳು ಸಹ ಲಾಭ ತಂದು ಕೊಡುತ್ತಿದೆ. ನಿತ್ಯ ಎರಡು ಸಾವಿರದಷ್ಟು ವೀಳ್ಯದೆಲೆಯನ್ನ ಯಾದಗಿರಿ ಸೇರಿದಂತೆ ನಾನಾ ಕಡೆ ವಿಳೆದೆಲೆಯನ್ನ ಮಾರಾಟ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಎಲ್ಲಿಯೂ ಸಹ ವೀಳ್ಯದೆಲೆಯನ್ನ ಬೆಳೆದಿಲ್ಲ, ಹೀಗಾಗಿ ಇರೋದೊಂದೆ ವೀಳ್ಯದೆಲೆ ತೋಟವಾಗಿದ್ದರಿಂದ ಮಾರುಕಟ್ಟೆಗೆ ಇದೆ ಒಂದೆ ತೋಟದಿಂದ ನಿತ್ಯ ವೀಳ್ಯದೆಲೆ ಹೋಗುತ್ತದೆ.

ಇನ್ನು ಈ ವೀಳ್ಯದೆಲೆ ಬೆಳೆಯನ್ನ ಬೆಳೆಯೋಕೆ ಹಾಗೂ ಇದನ್ನ ನಿರ್ವಹಣೆ ಮಾಡಲು ಕಲಬುರ್ಗಿ ಜಿಲ್ಲೆಯಿಂದ ಕಾರ್ಮಿಕರನ್ನ ಕರೆಸಿಕೊಂಡಿದ್ದಾರೆ. ಇದೆ ಕಾರ್ಮಿಕರು ಎಲೆಗಳನ್ನ ಕಟ್ ಮಾಡುವುದ್ದರಿಂದ ಹಿಡಿದು ಪ್ರತಿಯೊಂದು ಕೆಲಸಗಳನ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹಳ್ಳಿಯಿಂದ ಸಿಟಿಗೆ ಬದುಕು ಕಟ್ಟಿಕೊಳ್ಳಲು ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಆದ್ರೆ, ಈ ಯುವಕ ಸಿಟಿ ಲೈಫ್​ನಿಂದ ಬೋರಾಗಿ ಹಳ್ಳಿಗೆ ಬಂದು ಕೃಷಿ ಕಾಯಕವನ್ನ ಆರಂಭಿಸಿ ಸಕ್ಸಸ್ ಆಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್