ಗಣಪತಿ ವಿಗ್ರಹಗಳನ್ನು ಸ್ಪಾನ್ಸರ್ ಮಾಡದ ರಾಜಕಾರಣಿಗಳು; ಗಣೇಶನ ವಿಗ್ರಹಗಳ ಮಾರಾಟದಲ್ಲಿ ತೀವ್ರ ಕುಸಿತ

TV9 Digital Desk

| Edited By: Sushma Chakre

Updated on: Sep 09, 2021 | 6:33 PM

ಕೊರೊನಾ ಸೋಂಕಿನ ಭೀತಿ ಹಾಗೂ ಸರ್ಕಾರ, ಪೊಲೀಸರ ನಿಬಂಧನೆಗಳನ್ನು ಕೇಳಿ ಪ್ರತಿ ವರ್ಷ ಗಣೇಶೋತ್ಸವ ಆಚರಿಸುತ್ತಿದ್ದ ಕೆಲವು ಸಂಘಟನೆಗಳು ಇದುವರೆಗೂ ಗಣೇಶೋತ್ಸವ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಕುಸಿದಿದೆ.

ಗಣಪತಿ ವಿಗ್ರಹಗಳನ್ನು ಸ್ಪಾನ್ಸರ್ ಮಾಡದ ರಾಜಕಾರಣಿಗಳು; ಗಣೇಶನ ವಿಗ್ರಹಗಳ ಮಾರಾಟದಲ್ಲಿ ತೀವ್ರ ಕುಸಿತ
ಗಣೇಶನ ವಿಗ್ರಹ

ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕರು, ಸಂಸದರು, ರಾಜಕಾರಣಿಗಳು ಹಾಗೂ ಜನಪ್ರತಿನಿಧಿ ಆಗಲು ಬಯಸುವವರು ಪ್ರತಿವರ್ಷ ಗಣೇಶೋತ್ಸವ ಬಂದರೆ ಸಾಕು ಬೇಡ ಬೇಡ ಅಂದರೂ ಊರಿಗೆ ಬಂದು ಗಣೇಶನ ವಿಗ್ರಹಗಳನ್ನು ನೀಡಿ ಗಣೇಶೋತ್ಸವಕ್ಕೆ ಸ್ಪಾನ್ಸರ್ ಮಾಡುತ್ತಿದ್ದರು. ಇದರಿಂದ ಗಣೇಶನ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬರುತ್ತಿತ್ತು. ಆದರೆ, ಈ ಬಾರಿ ಜನ ಪ್ರತಿನಿಧಿಗಳು ಗಣೇಶೋತ್ಸವದಿಂದ ವಿಮುಖರಾಗಿದ್ದಾರೆ.

ಮತ್ತೊಂದೆಡೆ ಕೊರೊನಾ ಸೋಂಕಿನ ಭೀತಿ ಹಾಗೂ ಸರ್ಕಾರ, ಪೊಲೀಸರ ನಿಬಂಧನೆಗಳನ್ನು ಕೇಳಿ ಪ್ರತಿ ವರ್ಷ ಗಣೇಶೋತ್ಸವ ಆಚರಿಸುತ್ತಿದ್ದ ಕೆಲವು ಸಂಘಟನೆಗಳು ಇದುವರೆಗೂ ಗಣೇಶೋತ್ಸವ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಕುಸಿದಿದೆ. ಇನ್ನು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಸ್ಥಳೀಯ ಶಾಸಕರು, ಸಂಸದರು ಹಾಗೂ ರಾಜಕಾರಣಿಗಳು ಮುಂದೆ ನಿಂತು ಪ್ರತಿವರ್ಷ ಗಣೇಶ ಚತುರ್ಥಿಗೆ ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಯಾವುದೇ ಶಾಸಕರು ಗಣೇಶನ ವಿಗ್ರಹಗಳ ಸ್ಪಾನ್ಸರ್ ಮಾಡ್ತಿಲ್ಲ. ಗಣೇಶ ಪ್ರತಿಷ್ಠಾಪನೆಗೆ ಹಣ ನೀಡ್ತಿಲ್ಲ. ಇದರಿಂದ ಜಿಲ್ಲೆಯಾದ್ಯಂತ ಗಣೇಶೋತ್ಸವ ನೀರಸವಾಗಿದೆ.

ವರ್ಷವಿಡೀ ಕಷ್ಟಪಟ್ಟು ತಯಾರಿಸಿದ ಗಣೇಶನ ವಿಗ್ರಹಗಳನ್ನು ತಂದು ಗಣೇಶ ವಿಗ್ರಹಗಳ ತಯಾರಕರು ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಇನ್ನೇನು ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದರೂ ನಿರೀಕ್ಷೆಯಷ್ಟು ವಿಗ್ರಹಗಳು ಮಾರಾಟವಾಗಿಲ್ಲ. ಸರ್ಕಾರ ಕೇವಲ ಮೂರು ದಿನಗಳ ಹಿಂದಷ್ಟೆ ಗಣೇಶ ಪ್ರತಿಷ್ಠಾಪನೆಗೆ ಕಠಿಣ ನಿಯಮಗಳನ್ನು ಜಾರಿ ಮಾಡಿ ಅನುಮತಿ ನೀಡಿದ ಹಿನ್ನಲೆ ಸಂಘಟನೆಗಳು ಮುಂದೆ ಬಂದು ಗಣೇಶ ವಿಗ್ರಹಗಳನ್ನು ಕೊಂಡು ಕೊಳ್ತಿಲ್ಲ.

ಒಂದೆಡೆ ಹಣಕಾಸಿನ ತೊಂದರೆ, ಮತ್ತೊಂದೆಡೆ ಸ್ಪಾನ್ಸರ್​ಗಳು ಯಾರೂ ಇಲ್ಲ. ಇನ್ನೊಂದೆಡೆ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಗಳು, ಇದರಿಂದ ಕೆಲವು ಸಂಘಟನೆಗಳು ಈ ಬಾರಿ ಗಣೇಶನ ಪ್ರತಿಷ್ಠಾಪನೆಯಿಂದ ದೂರ ಉಳಿದಿದ್ದಾರೆ. ಇದೆಲ್ಲದರ ಪರಿಣಾಮ ಗಣೇಶನ ವಿಗ್ರಹಗಳು ಮಾರಾಟವಾಗದೆ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟಿವಿ-9 ಜೊತೆ ಮಾತನಾಡಿದ ಗಣೇಶ ವಿಗ್ರಹಗಳ ತಯಾರಕ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವುತಿ ಗ್ರಾಮದ ನಿವಾಸಿ ಮಂಜುನಾಥ, 5 ಲಕ್ಷ ರೂ. ಬಂಡವಾಳ ಹಾಕಿ ಬರೋಬ್ಬರಿ 500 ವಿಗ್ರಹಗಳನ್ನು ತಂದು ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದೇನೆ, ಮೂರು ದಿನ ಕಳೆದ್ರೂ ಇನ್ನೂ 150 ವಿಗ್ರಹಗಳು ಮಾತ್ರ ಮಾರಾಟವಾಗಿವೆ. ಇನ್ನುಳಿದ ವಿಗ್ರಹಗಳು ಮಾರಾಟವಾಗುವ ನಂಬಿಕೆಯಿಲ್ಲ ಏನು ಮಾಡೋದು? ಅಂತ ತಮ್ಮ ಸಂಕಷ್ಟ ತೋಡಿಕೊಂಡರು.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೆರೆದಾಳ ನಿವಾಸಿ ನಾಗರಾಜ್ , ವರ್ಷವಿಡೀ ಗಣೇಶನ ವಿಗ್ರಹಗಳನ್ನು ತಯಾರಿಸಿ ಈಗ ಚಿಕ್ಕಬಳ್ಳಾಪುರ ನಗತರದ ಬಿಬಿ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಆದರೆ, ಅಂದುಕೊಂಡಷ್ಟು ವಿಗ್ರಹಗಳು ಮಾರಾಟವಾಗ್ತಿಲ್ಲ ಏನು ಮಾಡುವುದು? ಅಂತ ತಮ್ಮ ಅಳಲು ತೋಡಿಕೊಂಡರು.

(ವಿಶೇಷ ವರದಿ: ಭೀಮಪ್ಪ ಪಾಟೀಲ್)

ಇದನ್ನೂ ಓದಿ: Ganesh Chaturthi 2021: ಗಣೇಶ ಗೈಡ್​ಲೈನ್ಸ್ ಮತ್ತೊಮ್ಮೆ ಬದಲು: ಒಂದು ವಾರ್ಡ್​ನಲ್ಲಿ ಒಂದೇ ಗಣೇಶ ನಿಯಮ ಕೈಬಿಟ್ಟ ಬಿಬಿಎಂಪಿ

Ganesh Chaturthi 2021: ಎಲ್ಲ ದೇವರಿಗಿಂತ ಮೊದಲು ಗಣಪತಿಗೇ ಪೂಜೆ ಸಲ್ಲಿಸುವುದೇಕೆ?

(Chikkaballapur Ganesh Idols Sale Down as Politicians Not Sponsoring Lord Ganesha Idols due to Covid Pandemic)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada