Jumping bean: ದುಬಾರಿ ತರಕಾರಿಗಳ ಮಧ್ಯೆ ಅವರೆಕಾಯಿಗೆ ಬಂತು ಡಿಮ್ಯಾಂಡ್; ಚಿಕ್ಕಬಳ್ಳಾಪುರದಲ್ಲಿ ಅವರೆಕಾಯಿ ಸೀಸನ್ ಶುರು

Jumping bean: ದುಬಾರಿ ತರಕಾರಿಗಳ ಮಧ್ಯೆ ಅವರೆಕಾಯಿಗೆ ಬಂತು ಡಿಮ್ಯಾಂಡ್; ಚಿಕ್ಕಬಳ್ಳಾಪುರದಲ್ಲಿ ಅವರೆಕಾಯಿ ಸೀಸನ್ ಶುರು
ದುಬಾರಿ ತರಕಾರಿಗಳ ಮಧ್ಯೆ ಅವರೆಕಾಯಿಗೆ ಬಂತು ಡಿಮ್ಯಾಂಡ್; ಚಿಕ್ಕಬಳ್ಳಾಪುರದಲ್ಲಿ ಅವರೆಕಾಯಿ ಸೀಸನ್ ಶುರು

avarekai or jumping bean season: ಅವರೆಕಾಯಿ ಮಾರಾಟಕ್ಕೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯಲ್ಲಿ ಈಗ ಅವರೆಕಾಯಿಯದ್ದೇ ಹವಾ. ಮಹಾಮಳೆಗೆ ಇರೊ ಬರೊ ತರಕಾರಿ ಬೆಳೆ ಹಾಳಾಗಿ ತಿನ್ನೊಕೆ ತರಕಾರಿಗಳು ಇಲ್ಲವೆಂದು ಕೊರಗುತ್ತಿರುವಾಗಲೇ ತರಕಾರಿಗಳ ರಾಜ ಅವರೆಕಾಯಿ ಸೀಸನ್ ಆರಂಭವಾಗಿದೆ.

TV9kannada Web Team

| Edited By: sadhu srinath

Dec 30, 2021 | 8:20 AM

ಚಿಕ್ಕಬಳ್ಳಾಪುರ: ಇತ್ತಿಚಿಗೆ ಸುರಿದ ಧಾರಾಕರ ಮಳೆಯಿಂದ ಆ ಜಿಲ್ಲೆಯಲ್ಲಿ ಬೆಳೆದಿದ್ದ ತರಕಾರಿ ಬೆಳೆ ಹಾಳಾಗಿ ಈಗ ತಿನ್ನೋಕೆ ತರಕಾರಿಗಳು ಇಲ್ಲ. ಅಷ್ಟು ಇಷ್ಟು ಇರೊ ತರಕಾರಿಗಳಿಗೆ ಚಿನ್ನದ ಬೆಲೆ. ಇದ್ರಿಂದ ತರಕಾರಿ ಕೊಂಡುಕೊಳ್ಳಲು ಆಗ್ತಿಲ್ಲ ಆದ್ರೆ ತರಕಾರಿಗಳ ಬದಲು ಈಗ ಅವರೆಕಾಯಿ ಸೀಸನ್ ಆರಂಭವಾಗಿದ್ದು ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಅವರೆಕಾಯಿಯ ಘಮಲು ಆವರಿಸಿದೆ (avarekai or jumping bean season). ಗ್ರಾಹಕರು ಅವರೆಕಾಯಿಯ ರುಚಿಗೆ ಮನಸೋತಿದ್ದಾರೆ.

ಅವರೆಕಾಯಿ ಮಾರಾಟಕ್ಕೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯಲ್ಲಿ ಈಗ ಅವರೆಕಾಯಿಯದ್ದೇ ಹವಾ. ಮಹಾಮಳೆಗೆ ಇರೊ ಬರೊ ತರಕಾರಿ ಬೆಳೆ ಹಾಳಾಗಿ ತಿನ್ನೊಕೆ ತರಕಾರಿಗಳು ಇಲ್ಲವೆಂದು ಕೊರಗುತ್ತಿರುವಾಗಲೇ ತರಕಾರಿಗಳ ರಾಜ ಅವರೆಕಾಯಿ ಸೀಸನ್ ಆರಂಭವಾಗಿದೆ. ಅವರೆಕಾಯಿಯ ಹಸಿ ಕಾಳಿಂದ ರುಚಿ ರುಚಿಯಾಗಿ ಸಾಂಬಾರ್, ಹಿತಕಿದ ಬೆಳೆ ಸಾರು, ಚಿತ್ರನ್ನ, ಉಪ್ಪಿಟ್ಟು, ಪೊಂಗಲ್ ನಲ್ಲಿಯೂ ಅವರೆಕಾಳು ಬಳಸುತ್ತಾರೆ. ಕಾಳಗೊಜ್ಜು, ಸ್ವೀಟ್, ಕಾಳು, ಖರೀದ ಕಾಳುಗಳಲ್ಲಿ ಅಡುಗೆ ಮಾಡುತ್ತಾರೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಅವರೆಕಾಳನ್ನು ಬಳಸಿ ಅಡುಗೆ ಮಾಡ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಅವರೆಕಾಳಿಗೆ ಭಾರಿ ಡಿಮ್ಯಾಂಡ್ ಇದೆ. ಕಳೆದ ವರ್ಷ 30ರೂಪಾಯಿ ಕೆ.ಜಿ ಅವರೆಕಾಯಿ ಇದ್ರೆ ಈ ಬಾರಿ 60 ರೂಪಾಯಿಗೆ ಕೆ.ಜಿ ಅವರೆಕಾಯಿ ಮಾರಾಟವಾಗ್ತಿದೆ.

ಮೊದಲೇ ಹೇಳಿ ಕೇಳಿ ಚಳಿಗಾಲ, ಸಂಜೆಯಾದ್ರೆ ಸಾಕು ಚಳಿಗಾಳಿ ಬೀಸುತ್ತೆ. ಇಂತಹ ಸಮಯಲ್ಲಿ ಅವರಕಾಯಿ ಮನೆಗೆ ತಗೊಂಡು ಹೋದ್ರೆ ಬಿಸಿ ಸಾರ್ ಮಡ್ಕೊಂಡು ಸವಿಯ ಬಹುದು. ಅಥವಾ ಅದಕ್ಕೆ ಉಪ್ಪು ಕಾರ ಹಾಕಿ ಫ್ರೈ ಮಾಡಿ ತಿನ್ನಬಹುದು.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

avarekai

ಅವರೆಕಾಯಿ

ಇದನ್ನೂ ಓದಿ: ನಡೆಯದ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ನಿರ್ಲಕ್ಷ್ಯ: ಇದು ನಿಷ್ಕ್ರಿಯ ಸರ್ಕಾರ ಎಂದ ಈಶ್ವರ ಖಂಡ್ರೆ

Follow us on

Most Read Stories

Click on your DTH Provider to Add TV9 Kannada