Bagepalli Election Results: ಬಾಗೇಪಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ತ್ರಿಕೋನ ಸ್ಫರ್ಧೆಯ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿಗೆ ಗೆಲುವು

|

Updated on: May 13, 2023 | 3:38 PM

Bagepalli Assembly Election Result 2023 Live Counting Updates: ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್. ಸುಬ್ಬಾರೆಡ್ಡಿ ಗೆಲುವು ಸಾಧಿಸಿದ್ದು 82128 ಮತ ಪಡೆದಿದ್ದಾರೆ.

Bagepalli Election Results: ಬಾಗೇಪಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ತ್ರಿಕೋನ ಸ್ಫರ್ಧೆಯ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿಗೆ ಗೆಲುವು
ಬಾಗೇಪಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿಗೆ ಗೆಲುವು
Follow us on

Bagepalli Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್. ಸುಬ್ಬಾರೆಡ್ಡಿ ಗೆಲುವು ಸಾಧಿಸಿದ್ದು 82128 ಮತ ಪಡೆದಿದ್ದಾರೆ. ಗೆಲುವಿನ ಅಂತರ-19179 ಮತಗಳು. ಸೋತ ಹುರಿಯಾಳು ಬಿಜೆಪಿ-ಸಿ.ಮುನಿರಾಜು 62949 ಮತ ಪಡೆದಿದ್ದಾರೆ. ಮೇ 10 ರಂದು ನಡೆದ ಮತದಾನದಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ (Bagepalli Assembly Elections 2023) ಶೇ. 85.38 ರಷ್ಟು ಮತದಾನವಾಗಿತ್ತು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವು ಆಂಧ್ರ ಹಾಗೂ ಕರ್ನಾಟಕ ರಾಜ್ಯದ ಗಡಿಭಾಗದಲ್ಲಿದ್ದು, ರಾಜಧಾನಿ ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿದೆ. ಕ್ಷೇತ್ರದಲ್ಲಿ ಇತಿಹಾಸ ಪ್ರಸಿದ್ದ ಗುಮ್ಮನಾಯಕಪಾಳ್ಯದ ಕೋಟೆ, ಗುಡಿಬಂಡೆ ಕೋಟೆ, ಗಡಿದಂನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಯಲ್ಲೋಡು ಆದಿನಾರಾಯಣಸ್ವಾಮಿ ದೇವಸ್ಥಾನವಿದೆ. ಕ್ಷೇತ್ರದಲ್ಲಿ ಬಹುತೇಕ ಜನ ತೆಲಗು ಭಾಷಿಕರು. ಬಾಗೇಪಲ್ಲಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷ ಪ್ರಬಲವಾಗಿದೆ ರಾಜ್ಯದಲ್ಲಿಯೇ ಸಿಪಿಐಎಂ ಪಕ್ಷ ಬಾಗೇಪಲ್ಲಿ ಪ್ರಬಲವಾಗಿದೆ. ಸಿಪಿಐಎಂ ಪಕ್ಷದಿಂದ ದಿವಂಗತ ಜಿ.ವಿ. ಶ್ರೀರಾಮರೆಡ್ಡಿ 2 ಬಾರಿ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ರಾಜ್ಯದಲ್ಲಿ ಸದ್ದು ಮಾಡಿದ್ದರು.

ಇನ್ನು 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಉದ್ಯಮಿ ಡಾ. ಸಿ.ಆರ್. ಮನೋಹರ್ 38302 ಮತಗಳು, ಸಿಪಿಐಎಂ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ವಿ.ಶ್ರೀರಾಮರೆಡ್ಡಿ 51697 ಮತಗಳು, ಬಿಜೆಪಿಯಿಂದ ಸ್ಪರ್ಧಿಸಿದ್ದ ನಟ ಪಿ.ಸಾಯಿಕುಮಾರ್ 4140 ಮತಗಳು ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಉದ್ಯಮಿ ಎಸ್.ಎನ್.ಸುಬ್ಬಾರೆಡ್ಡಿ 65710 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.

ಇನ್ನು ದಿನಾಂಕ 20-04-2023 ರಂತೆ ಪುರುಷ ಮತದಾರರು 99629, ಮಹಿಳಾ ಮತದಾರರು 101967, ಇತರೆ 29 ಜನ ಸೇರಿ ಒಟ್ಟು 201021 ಮತದಾರರಿದ್ದಾರೆ. ಇನ್ನು 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಸ್.ಎನ್.ಸುಬ್ಬಾರೆಡ್ಡಿ, ಬಿಜೆಪಿಯಿಂದ ಸಿ.ಮುನಿರಾಜು, ಸಿಪಿಐಎಂನಿಂದ ಡಾ.ಅನಿಲ್‌ಕುಮಾರ್ ಸ್ಪರ್ಧೆ ಮಾಡಿದರೆ ಜೆಡಿಎಸ್ ಸ್ಪರ್ಧಿಸಿಲ್ಲ. ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತಗಳ ವಿವರ ಹೀಗಿದೆ. ಎಸ್‌ಸಿ 50 ಸಾವಿರ, ಎಸ್‌ಟಿ 25 ಸಾವಿರ, ರೆಡ್ಡಿ/ಒಕ್ಕಲಿಗ 50 ಸಾವಿರ, ಬಲಜಿಗ 35 ಸಾವಿರ, ಮುಸ್ಲಿಂ 18 ಸಾವಿರ, ಕುರುಬ 6 ಸಾವಿರ, ಲಿಂಗಾಯಿತ/ಬ್ರಾಹ್ಮಣ 5 ಸಾವಿರ ಇತರೆ 10 ಸಾವಿರಕ್ಕೂ ಹೆಚ್ಚು ಎಂಬ ಮಾಹಿತಿಯಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 2:54 am, Sat, 13 May 23