ಚಿಂತಾಮಣಿ: ವ್ಯಕ್ತಿಯ ಬರ್ಬರ ಹತ್ಯೆ, ಜೆಸಿಬಿ ಚಾಲಕನ ಮೇಲೆ ಶಂಕೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ರಾಮಸ್ವಾಮಿ ಎಂಬುವವರನ್ನು ಮಚ್ಚಿನಿಂದ ಕೊಲೆ ಮಾಡಲಾಗಿದೆ. ರಾತ್ರಿ ವೇಳೆ ದೇವಸ್ಥಾನದಿಂದ ಮನೆಗೆ ಹೋಗುವಾಗ ಅವರನ್ನು ಕೊಲೆ ಮಾಡಲಾಗಿದೆ. ಅವರ ಚಾಲಕ ನಾಗೇಶನೇ ಕೊಲೆಗಾರ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ನಾಗೇಶನ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯಿಂದ ಚಿಂತಾಮಣಿಯಲ್ಲಿ ಆತಂಕ ಮನೆ ಮಾಡಿದೆ.

ಚಿಂತಾಮಣಿ: ವ್ಯಕ್ತಿಯ ಬರ್ಬರ ಹತ್ಯೆ, ಜೆಸಿಬಿ ಚಾಲಕನ ಮೇಲೆ ಶಂಕೆ
ಮೃತ ರಾಮಸ್ವಾಮಿ
Edited By: ವಿವೇಕ ಬಿರಾದಾರ

Updated on: Feb 14, 2025 | 11:41 AM

ಚಿಕ್ಕಬಳ್ಳಾಪುರ, ಫೆಬ್ರವರಿ 14: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ (Chintamani) ನಗರದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಿಂತಾಮಣಿ ನಗರದ ಅಶ್ವಿನಿ ಬಡಾವಣೆ ನಿವಾಸಿ ರಾಮಸ್ವಾಮಿ ಮೃತದುರ್ದೈವಿ. ಮೂಲತಃ ಚಿಂತಾಮಣಿ ತಾಲೂಕಿನ ನಾಗದೇನಹಳ್ಳಿ ನಿವಾಸಿಯಾಗಿದ್ದ ರಾಮಸ್ವಾಮಿ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್​ಗಳ ವ್ಯವಹಾರ ಮಾಡುತ್ತಿದ್ದರು. ರಾಮಸ್ವಾಮಿ ಗುರುವಾರ (ಫೆಬ್ರವರಿ 13) ರ ರಾತ್ರಿ 9.30ರ ಸಮಯ ದೇವಸ್ಥಾನವೊಂದರಿಂದ ತನ್ನದೇ ಸ್ಕೂಟಿಯಲ್ಲಿ ಮನೆಯತ್ತ ಹೊರಟಿದ್ದರು. ದಾರಿ ಮಧ್ಯೆ, ಸ್ಕೂಟಿ ಅಡ್ಡ ಹಾಕಿದ ವ್ಯಕ್ತಿಯೊರ್ವ ರಾಮಸ್ವಾಮಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇನ್ನೂ, ರಾಮಸ್ವಾಮಿ ಬಳಿ ಚಾಲಕನಾಗಿ ನಾಗೇಶ ಎಂಬಾತ ಕೆಲಸ ಮಾಡುತ್ತಿದ್ದನು. ಈ ನಾಗೇಶನೇ ಕೊಲೆ ಮಾಡಿದ್ದಾನೆ ಎಂದು ರಾಮಸ್ವಾಮಿಯ ಸಂಬಂಧಿಗಳು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಗೇಶನಿಗಾಗಿ ಬಲೆ ಬಿಸಿದ್ದಾರೆ.

ಗೃಹಣಿ ಅನುಮಾಸ್ಪದವಾಗಿ ಸಾವು

ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಗೃಹಿಣಿ ಜಾಹ್ನವಿ (26) ಮೃತದೇಹ ಪತ್ತೆಯಾಗಿದೆ. ಜಾಹ್ನವಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಲಾಗಿದೆ ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪತಿ ಯಶವಂತ್​ ವಿರುದ್ಧ ಜಾಹ್ನವಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜಾಹ್ನವಿ 4 ವರ್ಷದ ಹಿಂದೆ ಯಶವಂತ್​ನನ್ನು ಮದುವೆಯಾಗಿದ್ದರು.

ಇದನ್ನೂ ಓದಿ: ಅಪ್ರಾಪ್ತೆ ಜತೆ ಲವ್, ಪ್ರೇಯಸಿಯ ಸಾಕಲು ಕಳ್ಳತನ ಮಾಡ್ತಿದ್ದ ಯುವಕ ಲಾಕ್

ಮದುವೆಯಾದಗಿನಿಂದಲೂ ಪತ್ನಿಗೆ ಜಾಹ್ನವಿಗೆ ಪತಿ ಯಶವಂತ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ನಿತ್ಯ ಕುಡಿದು ಬಂದು ಜಾಹ್ನವಿಗೆ ಹಲ್ಲೆ ಮಾಡುತ್ತಿದ್ದ ಆರೋಪವಿದೆ. ಜಾಹ್ನವಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮೃತದೇಹದ ಮೈಮೇಲೆ ಮತ್ತು ಮುಖದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಹಲ್ಲೆ ನಡೆಸಿ, ಬಳಿಕ ಕೊಲೆ ಮಾಡಿದ್ದಾನೆಂದು ಜಾಹ್ನವಿ ಪೋಷಕರು ಆರೋಪಿಸಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us