38 ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು

ತನಗಿಂತ ಅರ್ಧಷ್ಟು ಕಡಿಮೆ ವಯಸ್ಸಿನ ಯುವಕನ ಜತೆ ಮಹಿಳೆ ಹೊಂದಿದ್ದ ಅಕ್ರಮ ಸಂಬಂಧ ದುರಂತಕ್ಕೆ ಕಾರಣವಾಗಿದೆ. 38 ವರ್ಷದ ಮಹಿಳೆಯ ಅಕ್ರಮ ಸಂಬಂಧದ ಒತ್ತಾಯದಿಂದ ಬೇಸತ್ತ 19ರ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಆತ್ಮಹತ್ಯೆಗೆ ಮಹಿಳೆ ಅಕ್ರಮ ಸಂಬಂಧಕ್ಕೆ ಒತ್ತಾಯಿಸುತ್ತಿದ್ದುದೇ ಕಾರಣ ಎಂದು ಮನೆಯವರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

38 ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು
ನಿಖಿಲ್ ಕುಮಾರ್ ಮತ್ತು ಮಹಿಳೆ ಜತೆ ನಿಖಿಲ್ ಇದ್ದ ಮೊಬೈಲ್ ಚಿತ್ರ
Edited By:

Updated on: Nov 05, 2025 | 11:31 AM

ಚಿಕ್ಕಬಳ್ಳಾಪುರ, ನವೆಂಬರ್ 5: 38 ವರ್ಷ ವಯಸ್ಸಿನ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಪದೇಪದೆ ಕಾಡಿಸುತ್ತಿದ್ದ ಕಾರಣ 19 ವರ್ಷ ವಯಸ್ಸಿನ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದ (Chikkaballapur) ಚಿಂತಾಮಣಿ (Chintamani)  ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದೆ. ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ.

38 ವರ್ಷ ವಯಸ್ಸಿನ ಶಾರದಾ ಎಂಬಾಕೆ ನಿಖಿಲ್ ಜತೆ​ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಇದೆ. ಪೋಷಕರ ವಿರೋಧದ ನಡುವೆಯೂ ಶಾರದಾ ಯುವಕನನ್ನು ಬಿಟ್ಟಿರಲಿಲ್ಲ. ಪೋಷಕರ ಕಣ್ತಪ್ಪಿಸಿ ಯುವಕನನ್ನು ಹೊರಗಡೆ ಕರೆದೊಯ್ಯುತಿದ್ದಳು ಎಂಬ ಆರೋಪವಿದೆ.

ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಚೇದನ ನೀಡಿದ್ದ ಶಾರದಾ, ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ಯುವಕ ನಿಖಿಲ್​​ಗೆ ಅಕ್ರಮ ಸಂಬಂಧಕ್ಕಾಗಿ ಕಾಟ ಕೊಡುತ್ತಿದ್ದಳು ಎಂಬ ಆರೋಪವಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಮಾತು ಬಾರದ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ

ಸದ್ಯ, ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ನಿಖಿಲ್ ಪೋಷಕರು ಈಗ ಶಾರದಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us