ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ನವಜೋಡಿಯನ್ನ ಅಣ್ಣ-ತಂಗಿ ಎಂದ ಪೋಷಕರು, ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಪ್ರೀತಿಸಿ ಮದುವೆಯಾದ ನವಜೋಡಿಗೆ ಪೋಷಕರೇ ಶಾಕ್ ನೀಡಿದ್ದಾರೆ. ಸಂಬಂಧದಲ್ಲಿ ಅಣ್ಣ-ತಂಗಿ ಆಗುತ್ತಾರೆಂದು ವರಸೆ ತೆಗೆದಿದ್ದಾರೆ. ಪೋಷಕರ ಮಾತಿಗೆ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಯುವತಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ, ನವೆಂಬರ್ 12: ಪ್ರೇಮ ವಿವಾಹ ಬಳಿಕ ಪ್ರೇಮಿಗಳನ್ನು ಅಣ್ಣ-ತಂಗಿ ಎಂದ ಪೋಷಕರ ಮಾತಿಗೆ ಬೇಸತ್ತು ಯುವತಿ (girl) ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ನಡೆದಿದೆ. ಸುಕನ್ಯಾ(19) ವಿಷ ಸೇವಿಸಿ ಆತ್ಮಹತ್ಯೆಗೆ (suicide) ಯತ್ನಿಸಿದ್ದ ಯುವತಿ. ಅಸ್ವಸ್ಥಗೊಂಡಿದ್ದ ಯುವತಿಗೆ ಸದ್ಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಬಂದಿದೆ.
ನಡೆದದ್ದೇನು?
ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದ ನಿತಿನ್ ಮತ್ತು ಸುಕನ್ಯಾ ಮೂರು ದಿನಗಳ ಹಿಂದೆಯಷ್ಟೇ ಕೈವಾರ ಬಳಿಯ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಆದರೆ ಇವರ ಪ್ರೇಮ ವಿವಾಹಕ್ಕೆ ಎರಡೂ ಕಡೆಯ ಪೋಷಕರಿಂದ ವಿರೋಧವಿತ್ತು. ಹೀಗಾಗಿ ಅಣ್ಣ-ತಂಗಿ ವರಸೆ ತೆಗೆದಿದ್ದಾರೆ.
ಇದನ್ನೂ ಓದಿ: ಸ್ಕ್ಯಾನಿಂಗ್ಗೆ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಆನೇಕಲ್ನಲ್ಲೊಬ್ಬ ಕಾಮುಕ ರೇಡಿಯಾಲಜಿಸ್ಟ್
ಸಂಬಂಧದಲ್ಲಿ ಯುವತಿಗೆ ನಿತಿನ್ ಅಣ್ಣ ಆಗುತ್ತಾನೆ, ಹೀಗಾಗಿ ಹೆಂಡತಿಯನ್ನ ಬಿಡುವಂತೆ ನಿತಿನ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇತ್ತ ಪೋಷಕರ ಮಾತಿಗೆ ಬೇಸತ್ತ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಯುವಕ ಮದುವೆ ನಿರಾಕರಿಸಿದ್ದಕ್ಕೆ ಗರ್ಭಿಣಿ ಯುವತಿ ಸುಸೈಡ್
ಮದುವೆ ಆಗುತ್ತೇನೆ ಅಂತಾ ನಂಬಿಸಿ ಯುವಕ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿ ಇದೀಗ ಮದುವೆಗೆ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ಯುವತಿ ಕುಟುಂಬಸ್ಥರು ಯುವಕನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಘಟನೆ ನಡೆದಿತ್ತು.
ಇದನ್ನೂ ಓದಿ: ವಿಶೇಷ ಚೇತನ ಯುವತಿ ಅತ್ಯಾಚಾರ ಯತ್ನ: ಕಾಮುಕನಿಗೆ ಸ್ಥಳೀಯರಿಂದ ಬಿತ್ತು ಧರ್ಮದೇಟು
ಸಿಂದೂ ಪರಮಣ್ಣನವರ್ (25) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಮೂಲತಃ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದು, ಆದರೆ ಅಜ್ಜ-ಅಜ್ಜಿ ಮನೆಯಾದ ಹಲಗೇರಿ ಗ್ರಾಮದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಸಿಂದೂ ಗೆಳೆತಿಯ ಮೂಲಕ ಶರತ್ ಪರಿಚಯಾಗಿತ್ತು. ಪರಿಚಯ ಪ್ರೀತಿಯಾಗಿ ಪರಸ್ಪರ ಇಬ್ಬರೂ ಐದು ವರ್ಷ ಪ್ರೀತಿಸಿದ್ದಾರೆ. ಈ ವೇಳೆ ದೈಹಿಕ ಸಂಪರ್ಕ ಮಾಡಿದ್ದು, ಸಿಂದೂ ಗರ್ಭಿಣಿಯಾಗಿದ್ದರು. ಮದುವೆಯಾಗು ಅಂದರೆ ಶರತ್ ನಿರಾಕರಿಸಿದ್ದರು ಎಂದು ಆಕ್ರೋಶ ವ್ಯಕ್ತವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Wed, 12 November 25




