ಜಮೀನು ವಿವಾದ: ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಮದುವೆಯಾಗಿ ನಾಲ್ಕು ವರ್ಷ ಆದ್ರೂ ಮಕ್ಕಳಾಗಲಿಲ್ಲ ಅಂತ ನೊಂದಿದ್ದ ದಂಪತಿ ಒಂದೆ ಸೀರೆಯಲ್ಲಿ ಎದುರು ಬದರಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಮದುವೆಯಾಗಿ ನಾಲ್ಕು ವರ್ಷ ಆದ್ರೂ ಮಕ್ಕಳಾಗಲಿಲ್ಲ ಅನ್ನೊ ಚಿಂತೆಯಿಂದ ನೊಂದಿದ್ದ ದಂಪತಿ, ಒಂದೆ ಸೀರೆಯಲ್ಲಿ ಎದುರು ಬದರಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಟೋ ಚಾಲಕ ಚಂದ್ರಶೇಖರ್ (32) ಶಶಿಕಲಾ (24) ಮೃತ ದುರ್ದೈವಿಗಳು.
ಚಿಕ್ಕಬಳ್ಳಾಪುರ ತಾಲೂಕಿನ ಸೂಲಕುಂಟೆ ನಿವಾಸಿಗಳು ಆಗಿರುವ ದಂಪತಿ, ಪರಸ್ಪರ ಅನೋನ್ಯತೆಯಿಂದ ಇದ್ದರು. ಆದ್ರೂ ಮದುವೆಯಾಗಿ ನಾಲ್ಕು ವರ್ಷ ಆದ್ರೂ ಮಕ್ಕಳಾಗಲಿಲ್ಲ ಅಂತ ನೊಂದಿದ್ದರಂತೆ, ಇದ್ರಿಂದ ಮಕ್ಕಳಿಗಾಗಿ ದೇವರು ದಿಂಡಿರು ಪೂಜೆ ಪುನಸ್ಕಾರಗಳನ್ನು ಮಾಡ್ತಿದ್ದರಂತೆ. ಆದ್ರೂ ದೇವರು ಕರುಣೆ ತೋರಲಿಲ್ಲ ಅಂತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನೂ ನಿನ್ನೆ ಸಂಜೆಯಾದ್ರೂ ಗಂಡ ಹೆಂಡತಿ ಮನೆಯಿಂದ ಆಚೆ ಬಂದಿರಲಿಲ್ಲ ಇದ್ರಿಂದ ಅನುಮಾನಗೊಂಡ ಪಕ್ಕದ ಮನೆಯ ನಿವಾಸಿ ಕಿಟಕಿಯಿಂದ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದಂಪತಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಳಸಿದ ಬಾಟಲ್ನಲ್ಲಿ ಅಂಟಿಕೊಂಡಿರುತ್ತವೆ ಸೂಕ್ಷ್ಮಜೀವಿಗಳು: ಈ ವಿಧಾನದ ಮೂಲಕ ಶುಚಿಗೊಳಿಸಿ
ಜಮೀನು ವಿವಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಸ್ಪಷ್ಟಪಡಿಸಿದ್ದಾರೆ. ಕುಂಟನಾರಾಯಣಪ್ಪ 10 ಗುಂಟೆ ಜಮೀನನ್ನು ಮೃತ ಚಂದ್ರಶೇಖರ್ ತಾಯಿಗೆ ಮಾರಾಟ ಮಾಡಿದ್ರು. ಅದೇ ಜಮೀನನ್ನ ಕುಂಟ ನಾರಾಯಣಪ್ಪ ಬೇರೊಬ್ಬರಿಗೂ ಮಾರಾಟ ಮಾಡಿದ್ರು. ಚಂದ್ರಶೇಖರ್ ಎಂಬುವವರ ಬದಲಿಗೆ ಹನುಮಂತಪ್ಪ ಎಂಬುವರಿಗೆ ನೊಂದಣಿ ಮಾಡಿದ್ರು. ಇದ್ರಿಂದ ಕೋರ್ಟ್ ಕಚೇರಿ ಅಂತ ಅಲೆದಾಡಿದ್ದ ಚಂದ್ರಶೇಖರ್, ಗ್ರಾಮದಲ್ಲಿ ನ್ಯಾಯ ಪಂಚಾಯತಿಗೂ ಇಂದು ನಿರ್ಧಾರ ಮಾಡಲಾಗಿತ್ತು. ಆದ್ರೆ ನ್ಯಾಯ ಪಂಚಾಯತಿಗೂ ಮುನ್ನವೇ ದಂಪತಿ ನೇಣಿಗೆ ಶರಣಾಗಿದ್ದಾರೆ. ಮಕ್ಕಳಾಗಲಿಲ್ಲ ಎಂದು ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಮದುವೆಯಾಗಿ 4 ವರ್ಷ ಕಳೆದಿವೆ. ಗಂಡ ಹೆಂಡತಿ ಅನ್ಯೋನ್ಯವಾಗಿದ್ರು ಎಂದರು.
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ಕಲಬುರಗಿ ಹಳೇ ಜೇವರ್ಗಿ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ ಮಾಡಲಾಗಿದೆ. ಕಲಬುರಗಿಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಜಮೀರ್(23) ಹತ್ಯೆಯಾದ ಯುವಕ. ಕಳದೆ ರಾತ್ರಿ ಐದಾರು ಜನ ದುಷ್ಕರ್ಮಿಗಳು ಸೇರಿಕೊಂಡು ಬರ್ಬರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆ ಜಮೀರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ
ಬೆಂಗಳೂರು: ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೀತಾ ಅರೆಸ್ಟ್ ಆದ ಆರೋಪಿ. ಆ.16ರಂದು ವಿದ್ಯಾರಣ್ಯಪುರದಲ್ಲಿರುವ ಸ್ನೇಹಿತೆ ಲಕ್ಷ್ಮೀ ಮನೆಗೆ ಗೀತಾ ಬಂದಿದ್ದರು. ಈ ವೇಳೆ ಡಿಸೈನ್ ನೋಡುವ ನೆಪದಲ್ಲಿ 8-10 ಲಕ್ಷ ಮೌಲ್ಯದ ಆಭರಣಗಳನ್ನ ಕದ್ದು ಪರಾರಿಯಾಗಿದ್ದರು. ಬಂಧಿತರಿಂದ 9.84 ಲಕ್ಷ ಮೌಲ್ಯದ 216 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:47 am, Sun, 18 September 22