ಬಿಸಿಲಿನ ಬೇಗಗೆ ದಾಹ ತೀರಿಸಿಕೊಳ್ಳಲು ಲೆಮನ್​ ಜ್ಯೂಸ್ ಮೊರೆ; ನಿಂಬೆ ಹಣ್ಣಿಗೆ ಭಾರಿ ಡಿಮ್ಯಾಂಡ್​!

ಒಂದೆಡೆ ಬೇಸಿಗೆಯ ಬಿಸಿಗಾಳಿ ಹಾಗೂ ಉಷ್ಣ. ಬಿಸಿಲಿನ ತಾಪ ತಡೆದುಕೊಳ್ಳಲು ಜನರು, ನಿಂಬೆ ಹಣ್ಣಿನ ಜ್ಯೂಸ್, ಪಾನಕಗಳ ಮೊರೆ ಹೊಗುತ್ತಿದ್ದಾರೆ. ಇದ್ರಿಂದ ಮಾರುಕಟ್ಟೆಯೆಲ್ಲಿ ಸೇಬು ಹಣ್ಣಿನ ಬೆಲೆ ಕುಸಿದಿದ್ದು, ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. ಕೆ.ಜಿ ನಿಂಬೆ ಹಣ್ಣಿನ ಬೆಲೆ ಇನ್ನೂರು ರೂಪಾಯಿ ಆಗಿದೆ. 

ಬಿಸಿಲಿನ ಬೇಗಗೆ ದಾಹ ತೀರಿಸಿಕೊಳ್ಳಲು ಲೆಮನ್​ ಜ್ಯೂಸ್ ಮೊರೆ; ನಿಂಬೆ ಹಣ್ಣಿಗೆ ಭಾರಿ ಡಿಮ್ಯಾಂಡ್​!
ನಿಂಬೆ ಹಣ್ಣಿಗೆ ಭಾರಿ ಡಿಮ್ಯಾಂಡ್​
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 21, 2024 | 9:47 PM

ಚಿಕ್ಕಬಳ್ಳಾಪುರ, ಮಾ.21: ಬೆಸಿಗೆಯ ಬಿಸಿ ತಡೆದುಕೊಳ್ಳಲಾಗದ ಜನ, ಬಿಸಿಗಾಳಿಯಿಂದ ದೇಹವನ್ನು ತಂಪಾಗಿಡಲು ಪರದಾಡುತ್ತಿದ್ದಾರೆ. ಸುಲಭವಾಗಿ ನಿಂಬೆ ಹಣ್ಣಿನ ಪಾನಕ, ಜ್ಯೂಸ್​(Lemon juice)ಗಳಿಂದ ದೇಹವನ್ನು ತಂಪಾಗಿ ಮಾಡಿಕೊಳ್ಳಬಹುದು, ಇದರಿಂದ ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ. ಕೆ.ಜಿ ಸೇಬು ಹಣ್ಣಿನ ಬೆಲೆ 180 ರೂಪಾಯಿ ಆದರೆ, ಕೆ.ಜಿ ನಿಂಬೆ ಹಣ್ಣಿನ ಬೆಲೆ ಇನ್ನೂರು ರೂಪಾಯಿ ಆಗಿದೆ. ಈ ಹಿನ್ನಲೆ ಈಗ ಎಲ್ಲಿ ನೋಡಿದರೂ ನಿಂಬೆ ಹಣ್ಣು ಹಾಗೂ ನಿಂಬೆ ಹಣ್ಣಿನ ಜ್ಯೂಸ್​ನದ್ದೆ ಕಾರುಬಾರಾಗಿದೆ.

ಬಿಸಿಗಾಳಿ ಹಾಗೂ ಉಷ್ಣದಿಂದ ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳು ತುಂಬಾ ಹುಷಾರ್​ ಆಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ನಿಂಬೆ ಹಣ್ಣಿನ ಜ್ಯೂಸ್​ಗಳನ್ನೆ ಕೇಳುತ್ತಿದ್ದಾರೆ. ಆದ್ರೆ, ಒಂದು ನಿಂಬೆ ಹಣ್ಣಿನ ಬೆಲೆ 7 ರಿಂದ 8 ರೂಪಾಯಿ ಇದೆ. ಈ ಹಿನ್ನಲೆ ಜ್ಯೂಸ್ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ನಿಂಬೆ ಹಣ್ಣಿಗಂತೂ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳು ಆ್ಯಪಲ್ ಬೆಲೆಯನ್ನೆ ಮಿರಿಸಿದೆ.

ಇದನ್ನೂ ಓದಿ:ಊಟದ ಬಳಿಕ ನಿಂಬೆ ನೀರು ಕುಡಿಯುವುದರಿಂದ ಸಿಗುವ ಲಾಭಗಳು

35 ಸಾವಿರ ರೂಪಾಯಿಗೆ ಹರಾಜಾದ ಒಂದು ನಿಂಬೆ ಹಣ್ಣು

ಇನ್ನು ಯುಗಾದಿ, ರಾಮನವಮಿ ವೇಳೆಗೆ ನಿಂಬೆ ಹಣ್ಣು ಖರೀದಿ ಮತ್ತಷ್ಟು ದುಬಾರಿಯಾಗಲಿದ್ದು, ಬೇಸಿಗೆಯ ಬಯಲು ಪ್ರದೇಶಗಳಾದ ಆಂಧ್ರ, ತಮಿಳುನಾಡಿನಲ್ಲಿಯೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಇದೆಲ್ಲದರ ಆಚೆಗೆ ನೋಡುವುದಾದರೆ ತಮಿಳುನಾಡಿನ ಗ್ರಾಮವೊಂದರಲ್ಲಿ ಒಂದು ನಿಂಬೆಹಣ್ಣಿನ ಬೆಲೆ 35 ಸಾವಿರ ರೂಪಾಯಿ ಇದೆ. ಹೌದು, ನೀವು ಕೇಳಿದ್ದು ಸರಿ. ಏನಪ್ಪಾ ಆ ನಿಂಬೆಹಣ್ಣಿನ ವಿಶೇಷತೆ ಅಂದರೆ, ತಮಿಳುನಾಡಿನ ಶಿವಗರಿ ಗ್ರಾಮದ ಶಿವನ ದೇವಸ್ಥಾನದಲ್ಲಿ ಇದೇ ತಿಂಗಳ 8ರಂದು ನಡೆದ ವಿಶೇಷ ಪೂಜೆ ನಡೆಯಿತು. ಆ ವೇಳೆ ನಿಂಬೆಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಹರಾಜು ಹಾಕಲಾಯಿತು. ಆಗ ಭಕ್ತರು ಇಷ್ಟೊಂದು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದರು. ಹೀಗೆ ಖರೀದಿ ಆಡಿದ ನಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಹೋದರೆ ಒಳಿತಾಗುತ್ತದೆ ಎಂ-ದು ಅಲ್ಲಿನ ಭಕ್ತರು ನಂಬುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​

Published On - 9:44 pm, Thu, 21 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ