ರೈತರಿಗೂ ತಟ್ಟಿದ್ದ ಯುದ್ಧದ ಬಿಸಿ: ಗಗನಕ್ಕೇರಿದ್ದ ತರಕಾರಿ ದರದಲ್ಲಿ ಭಾರೀ ಕುಸಿತ

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ದದ ಬಿಸಿ ಚಿಕ್ಕಬಳ್ಳಾಪುರದ ತರಕಾರಿ ಬೆಳೆಗಾರರಿಗೂ ತಟ್ಟಿದೆ. ಕಮರ್ಷಿಯಲ್ ಸಿಲಿಂಡರ್​ಗಳ ಕೊರತೆಯಿಂದ ಕೆಲವು ಹೋಟಲ್​ಗಳು ಬಂದ್ ಆಗಿರುವ ಕಾರಣ ತರಕಾರಿ ಖರೀದಿಸುವವರಿಲ್ಲದಾಗಿದೆ. ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ತರಕಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿದ್ದು, ರೈತರು ಕಂಗಾಲಾಗಿದ್ದಾರೆ.

ರೈತರಿಗೂ ತಟ್ಟಿದ್ದ ಯುದ್ಧದ ಬಿಸಿ: ಗಗನಕ್ಕೇರಿದ್ದ ತರಕಾರಿ ದರದಲ್ಲಿ ಭಾರೀ ಕುಸಿತ
ತರಕಾರಿ
Image Credit source: tv9 kannada
Edited By:

Updated on: Apr 03, 2026 | 5:19 PM

ಚಿಕ್ಕಬಳ್ಳಾಪುರ, ಏಪ್ರಿಲ್​ 03: ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹೋಟೆಲ್‍ಗಳು ಬಂದ್ ಆಗಿವೆ. ಇತ್ತ ಚಿಕ್ಕಬಳ್ಳಾಪುರದಲ್ಲೂ ಗ್ಯಾಸ್​ ಅಭಾವ ಮುಂದುವರೆದಿದೆ. ಹೋಟೆಲ್​ಗಳು ಬಂದ್ ಆಗುತ್ತಿವೆ. ಹೀಗಾಗಿ ಸದ್ಯ ನಗರದಲ್ಲಿ ತರಕಾರಿಗೆ (vegetable) ಬೆಲೆ ಇಲ್ಲದಂತಾಗಿದ್ದು, ರಾಶಿ-ರಾಶಿ ತರಕಾರಿ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿವೆ.

ಚಿಕ್ಕಬಳ್ಳಾಪುರದಲ್ಲಿ ತರಕಾರಿಗಿಲ್ಲ ಬೆಲೆ

ಚಿಕ್ಕಬಳ್ಳಾಪುರ ಹೂವು, ಹಣ್ಣು, ತರಕಾರಿಗೆ ಖ್ಯಾತಿ ಪಡೆದಿದೆ. ಅಲ್ಲಿ ಬೆಳೆಯುವ ತರಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಿಗೆ ದಿನನಿತ್ಯ ರಫ್ತಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ಬೆಂಗಳೂರು ಸೇರಿದಂತೆ ವಿವಿಧಡೆ ಹೋಟೆಲ್‍ಗಳು ಬಂದ್ ಆಗಿವೆ.

ಇದನ್ನೂ ಓದಿ: ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು

ಇದರಿಂದ ಚಿಕ್ಕಬಳ್ಳಾಪುರದ ತರಕಾರಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ತರಕಾರಿಗಳ ಬೆಲೆ ತೀವ್ರ ಕುಸಿತವಾಗಿದೆ. ಬೆಸಿಗೆಯಲ್ಲಿ ಕೆ.ಜಿ ಬೀನ್ಸ್ ಬೆಲೆ ಬರೋಬ್ಬರಿ 80 ರೂಪಾಯಿಯಿಂದ 100 ರೂಪಾಯಿವರೆಗೂ ಇರುತ್ತೆ, ಆದರೆ ಈ ಭಾರಿ ಮೂಟೆ ಬೀನ್ಸ್ ಬೆಲೆ 300 ರೂಪಾಯಿಯಿಂದ 400 ನೂರು ರೂಪಾಯಿಗೆ ಬಿಕಾರಿಯಾಗುತ್ತಿದೆ.

ಯಾವ ತರಕಾರಿಗೆ ಎಷ್ಟು ಬೆಲೆ?

ಇರಾನ್, ಇಸ್ರೇಲ್-ಅಮೇರಿಕ ಯುದ್ಧ ಆರಂಭವಾಗುವುದಕ್ಕೂ ಮುನ್ನ ತರಕಾರಿಗಳಿಗೆ ಒಳ್ಳೆಯ ಬೆಲೆಯಿತ್ತು. ಕಳೆದ 20 ದಿನಗಳಿಂದ ತರಕಾರಿಗಳ ಬೆಲೆ ತೀವ್ರ ಕುಸಿತಿದೆ. ಬೀನ್ಸ್ ಕೆಜಿಗೆ 20 ರೂ, ಕ್ಯಾರೆಟ್ 8 ರೂ, ಸೋರೆಕಾಯಿ 5 ರೂ, ಆಲೂಗಡ್ಡೆ 6 ರೂ, ಬೆಂಡೆಕಾಯಿ 10 ರೂ, ಈರುಳ್ಳಿ 12 ರೂ, ಮೂಲಂಗಿ 5 ರೂ, ಆಗಲಕಾಯಿ 15 ರೂ, ಕ್ಯಾಪ್ಸಿಕಂ 20 ರೂ, ಬದನೇಕಾಯಿ 2 ರೂ, ದರ ಕುಸಿದಿದೆ. ಇನ್ನು ಹಗಲು-ರಾತ್ರಿ ಕಷ್ಟಪಟ್ಟು ತರಕಾರಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಒಟ್ಟಿನಲ್ಲಿ ಗಲ್ಫ್​ ಯುದ್ಧ ಎಫೆಕ್ಟ್​ನಿಂದ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್​​ ಉದ್ಯಮ ಕುಂಟುತ್ತಾ ಸಾಗಿದೆ. ಇದರಿಂದ ಹೋಟೆಲ್ ಉದ್ಯಮ ನಂಬಿಕೊಂಡಿದ್ದ ತರಕಾರಿ ವ್ಯಾಪಾರಕ್ಕೂ ಭಾರಿ ಹೊಡೆತ ಬಿದ್ದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:19 pm, Fri, 3 April 26

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us