ಇರೋ ಹುದ್ದೆ ರದ್ದು ಮಾಡಿ ಪ್ರಭಾವಿ ಮಹಿಳಾ ಅಧಿಕಾರಿಯ ವರ್ಗಾವಣೆ; ಸಚಿವರಿಗೆ ಸವಾಲ್ ಹಾಕಿ ಕೋರ್ಟ್ ಮೊರೆ
ಆಕೆ ಖಡಕ್ ಮಹಿಳಾ ಅಧಿಕಾರಿ. ಆಕೆಯ ಸಂಬಂಧಿಗಳು ಮಂತ್ರಿಗಳು, ಶಾಸಕರು ಇದ್ದಾರೆ. ಜೊತೆಗೆ ಆಕೆಗೆ ನಿವೃತ್ತ ಐಪಿಎಸ್ ಅಧಿಕಾರಿಗಳ ಬೆಂಬಲವೂ ಇದೆ. ಫೀಲ್ಡಿಗಿಳಿದ್ರೆ ಯಾರಿಗೂ ಕೇರ್ ಮಾಡದೆ ತನ್ನ ಕೆಲಸವನ್ನ ತಾನು ಮಾಡಿ ತೋರಿಸುತ್ತಿದ್ದರು. ಆದ್ರೆ, ಆ ಮಹಿಳಾ ಅಧಿಕಾರಿಯ ವರ್ಗಾವಣೆ ಯಾವುದೇ ಮಂತ್ರಿಗಳು ಹಾಗೂ ಶಾಸಕರಿಂದ ಸಾಧ್ಯವಿರಲಿಲ್ಲ. ರಾತ್ರಿ ವರ್ಗಾವಣೆ ಮಾಡಿದ್ರೆ ಬೆಳಿಗ್ಗೆ ಮರು ವರ್ಗಾವಣೆ ಮಾಡಿಕೊಂಡು ಬರುತ್ತಿದ್ದ ಪ್ರಭಾವಿ ಆಕೆ. ಆದ್ರೆ, ಆಕೆಯ ಹುದ್ದೆಯ ಮೇಲೆ ಕಣ್ಣು ಹಾಕಿದ ಪ್ರಭಾವಿ ಮಂತ್ರಿಯೊಬ್ಬರು, ಆಕೆ ಸೇವೆಯಲ್ಲಿದ್ದ ಹುದ್ದೆಯನ್ನೇ ರದ್ದು ಮಾಡಿ ಅಪ್ ಗ್ರೆಡ್ ಮಾಡಿದೆ. ಪಟ್ಟುಬಿಡದ ಆಕೆ ಅಲ್ಲಿಯ ಮಂತ್ರಿಯೊಬ್ಬರಿಗೆ ಸ್ವಾಭಿಮಾನದ ಸವಾಲೆಸಗಿದ್ದಾರೆ. ಅಷ್ಟಕ್ಕೂ ಆಕೆ ಯಾರು? ಆ ಮಂತ್ರಿಯಾದ್ರೂ ಯಾರು ಅಂತೀರಾ? ಈ ಸ್ಟೋರಿ ಓದಿ.
ಚಿಕ್ಕಬಳ್ಳಾಪುರ, ಜು.13: ಶ್ರೀಮತಿ ಕೃಷ್ಣವೇಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿ. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿರಿಯ ಭೂ ವಿಜ್ಞಾನಿ(Senior Geoscientist)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಚಿಕ್ಕಬಳ್ಳಾಪುರ(Chikkaballapur)ಕ್ಕೆ ಕಾಲಿಟ್ಟ ಕೃಷ್ಣವೇಣಿ. ಆಗಾಗ ಕಲ್ಲು ಕ್ವಾರಿ, ಕ್ರಷರ್ ಮಾಫಿಯಾ ಮೇಲೆ ದಾಳಿ ಮಾಡಿ ಖ್ಯಾತಿಯಾಗಿದ್ದರು. ಇನ್ನು ಅಂದಿನ ಪ್ರಭಾವಿ ಮಂತ್ರಿ ಡಾ.ಕೆ.ಸುಧಾಕರ್ ಅವರನ್ನ ಎದುರು ಹಾಕಿಕೊಂಡು ಡ್ಯೂಟಿ ಮಾಡಿದ್ದರು. ಕೊನೆಗೆ ಅಂದಿನ ಮಂತ್ರಿ ಡಾ.ಕೆ. ಸುಧಾಕರ್ಗೆ ಸೆಡ್ಡು ಹೊಡೆದು ವರ್ಗಾವಣೆಗೆ ನಿರ್ಬಂಧಕಾಜ್ಞೆ ಮಾಡಿಕೊಳ್ಳುತ್ತಿದ್ದರು. ಆದ್ರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಕೃಷ್ಣವೇಣಿಗೆ ಮೈನಿಂಗ್ ಮಾಫಿಯಾ ಸಂಕಷ್ಟಕ್ಕೆ ದೂಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕೃಷ್ಣವೇಣಿ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಸಲಿಗೆ ಚಿಕ್ಕಬಳ್ಳಾಪುರದ ಹಿರಿಯ ಭೂ ವಿಜ್ಞಾನಿ ಹುದ್ದೆಯನ್ನ ರದ್ದುಗೊಳಿಸಿ ಉಪ ನಿರ್ದೇಶಕರ ಹುದ್ದೆಯನ್ನ ಸೃಜಿಸಲಾಗಿದೆ. ಇದರಿಂದ ಕೃಷ್ಣವೇಣಿಯನ್ನ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದಿರುವ ಶ್ರೀಮತಿ ಕೃಷ್ಣವೇಣಿ. ಹೈಕೋರ್ಟ್ ಮೊರೆಹೋಗಿದ್ದು, ಸ್ವಾಭಿಮಾನದ ಸವಾಲು ಹಾಕಿದ್ದಾರೆ. ಹೈ ಕೋರ್ಟ್ ಕಾಪಾಡಿಕೊಳ್ಳಲು ಆದೇಶ ಮಾಡಿದೆ. ಅದ್ರೆ, ಇಲ್ಲಿ ಯಾರ ಪರವಾಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆಯಂತೆ.
ಇದನ್ನೂ ಓದಿ:ಕಲಬುರಗಿ: 6 ತಿಂಗಳ ಹಿಂದೆ ಮೃತಪಟ್ಟ ಇಂಜಿನಿಯರ್ ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಎಡವಟ್ಟು
ಮತ್ತೊಂದೆಡೆ ಕೃಷ್ಣವೇಣಿಯನ್ನ ವರ್ಗಾವಣೆ ಮಾಡಿದ್ದಕ್ಕೆ ಗಣಿ ಮಾಫಿಯಾ ಪಾರ್ಟಿ ಮಾಡಿ ಕುಣಿದಾಡಿದೆಯಂತೆ. ಮತ್ತೊಂದೆಡೆ ಕೆಲ ಸರ್ಕಾರಿ ಅಧಿಕಾರಿಗಳು ಮಾತನಾಡಿ, ‘ಸರ್ಕಾರ ವರ್ಗಾವಣೆ ಮಾಡಿದ ಕಡೆ ಕರ್ತವ್ಯ ನಿರ್ವಹಿಸಬೇಕು. ಇಲ್ಲೇ ಕೆಲಸ ಮಾಡಬೇಕು ಎಂದು ದರ್ದು ಏನಿದೆ ?. ಪರೋಕ್ಷವಾಗಿ ಒಬ್ಬ ಅಧಿಕಾರಿ ಸರ್ಕಾರದ ವ್ಯವಸ್ಥೆಗೆ ಸವಾಲೆಸದಂತಾಗಿದೆ ಎನ್ನುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ