ಚಿಂತಾಮಣಿ: ಮಹಾಮಳೆಯಿಂದ ಕೋಡಿ ಹೋದ ಕನ್ನಂಪಲ್ಲಿ ಕೆರೆ ಡಬಲ್ ಖುಷಿಯನ್ನೂ ತಂದಿತು! ಏನದು?
Kannampalli kere: ಚಿಂತಾಮಣಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇರುತ್ತದೆ. 2000 ಅಡಿ ಆಳ ಕೊರೆದ್ರೂ... ಅಂತರ್ಜಲ ಸಿಗಲ್ಲ. ಅಂಥದರಲ್ಲಿ ಇತ್ತೀಚೆಗೆ ಸುರಿದ ಮಳೆ ಕನ್ನಂಪಲ್ಲಿ ಕೆರೆ ತುಂಬುವಂತೆ ಮಾಡಿದ್ದು, ಜನರಲ್ಲಿ ಒಂದೆಡೆ ಹರ್ಷ ಮತ್ತೊಂದೆಡೆ ಹಿಂದೂ ಮುಸ್ಲಿಂ ಭಾವೈಕ್ಯೆತೆಗೆ ಸಾಕ್ಷಿಯಾಗಿದ್ದು ಸಂತೋಷದ ವಿಷಯವೇ ಸರಿ.
ಅ ಒಂದು ಕೆರೆ ಸುಮಾರು ಒಂದು ಲಕ್ಷ ಜನರ ದಣಿವಾರಿಸುವ ಜೀವನಾಡಿ. ಕೆರೆಯ ಒಡಲು ತುಂಬಿದಾಗಲಷ್ಟೇ ನಗರದ ಜನತೆಯ ದಾಹ ನೀಗುವುದು. ಇತ್ತೀಚಿಗೆ ಸುರಿದ ಭಾರಿ ಮಳೆಗೆ ಆ ಕೆರೆ ತುಂಬಿ ಕೋಡಿ ಹೋಗಿದೆ. ಇದ್ರಿಂದ ಆ ಕೆರೆಗೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಎಂಬಂತೆ ಶ್ರದ್ದಾಭಕ್ತಿಯಿಂದ ಎರಡೂ ಸಮುದಾಯದ ಪುರೋಹಿತರು ಬಾಗಿನ ಅರ್ಪಿಸಿದ್ದಾರೆ. ಅಷ್ಟಕ್ಕೂ ಅದು ಎಲ್ಲಿ ಅಂದ್ರಾ ಈ ಸ್ಟೋರಿ ನೋಡಿ…
ಮಳೆ ನೀರಿಗೆ ಕೆರೆ ಒಡಲು ತುಂಬಿಕೊಂಡು ನಳನಳಿಸುತ್ತಿದೆ. ಶ್ರದ್ದಾ ಭಕ್ತಿಯಿಂದ ಗಂಗಾ ಮಾತೆಗೆ ಬಾಗಿನ ಅರ್ಪಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ (chintamani) ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಾರೆಡ್ಡಿ, ಬಾಗಿನ (bagina) ಕಾರ್ಯಕ್ರಮ ವೀಕ್ಷಿಸುತ್ತಿರುವ ನೂರಾರು ಕಾರ್ಯಾಕರ್ತರು. ಈ ದೃಶ್ಯಗಳು ಕಂಡುಬಂದಿದ್ದು ಚಿಂತಾಮಣಿ ನಗರದ ಕನ್ನಂಪಲ್ಲಿ ಕೆರೆಯಲ್ಲಿ (Kannampalli kere).
ಕೆಲ ದಿನಗಳ ಹಿಂದೆಯಷ್ಟೇ ಬತ್ತಿ ಬೆಂಗಾಡಾಗಿತ್ತು ಈ ವಿಶಾಲ ಕೆರೆ. ಇದರಿಂದ ನಗರದ ಜನತೆ ಟ್ಯಾಂಕರ್ ನೀರು ಕುಡಿದು ಅರ್ಧಂಬರ್ಧ ದಾಹ ನೀಗಿಸಿಕೊಳ್ಳುವ ಅನಿವಾರ್ಯತೆ ಎದುರಿಸುತಿದ್ರು. ಆದ್ರೆ ಇತ್ತೀಚೆಗೆ ಧೋ ಎಂದು ಸುರಿದ ಮಹಾಮಳೆಗೆ ಕೆರೆ ಕೋಡಿ ಹೋಗಿದೆ! ಇದ್ರಿಂದ ನಗರದ ಜನತೆಗೆ ಕೆಲವು ತಿಂಗಳ ನಂತರ ಕೆರೆ ನೀರು ಕುಡಿಯುವ ಯೋಗ ಬಂದಿದೆ. ಇದ್ರಿಂದ ಸಂತಸಗೊಂಡ ಸ್ಥಳೀಯ ಶಾಸಕ ಕೃಷ್ಣಾರೆಡ್ಡಿ ಕೆರೆಗೆ ಬಾಗಿನ ಅರ್ಪಿಸಿದ್ರು.
ಇನ್ನು ಚಿಂತಾಮಣಿ ತಾಲ್ಲೂಕಿನ ಕೈವಾರ ಪಕ್ಕದ ಕೊಳಾಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಂದು, ಕನ್ನಂಪಲ್ಲಿ ಕೆರೆಯಲ್ಲಿ ಇರಿಸಿ, ಹೋಮ ಹವನಗಳನ್ನು ಮಾಡಿ, ಹಿಂದೂ ಪುರೋಹಿತರು ಹಿಂದೂ ಶಾಸ್ತ್ರದ ಪ್ರಕಾರ ಪೂಜೆ ಸಲ್ಲಿಸಿದ್ದರೆ… ಮುಸ್ಲಿಂ ಸಮುದಾಯದಿಂದ ಮುಸ್ಲಿಂ ಹಜರತ್ ಗಳು ಭಕ್ತಿಭಾವಗಳಿಂದ ಪ್ರಾರ್ಥನೆ ಮಾಡಿಸಿ, ಉತ್ಸವ ಮೂರ್ತಿಯನ್ನು ಕರೆಯಲ್ಲಿ ತೇಲಿಬಿಟ್ಟು ದೇವರಿಗೆ ಕೃತಜ್ಞತೆ ಅರ್ಪಿಸಿದರು.
ಒಟ್ನಲ್ಲಿ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಆಗಾಗ ಹನಿ ಹನಿ ಕುಡಿಯುವ ನೀರಿಗೆ ಹಾಹಾಕಾರ ಇರುತ್ತದೆ. ಎರಡು ಸಾವಿರ ಅಡಿ ಆಳ ಕೊರೆದ್ರೂ… ಅಂತರ್ಜಲ ಸಿಗಲ್ಲ. ಅಂಥದರಲ್ಲಿ ಇತ್ತೀಚೆಗೆ ಸುರಿದ ಮಳೆ ಕನ್ನಂಪಲ್ಲಿ ಕೆರೆ ತುಂಬುವಂತೆ ಮಾಡಿದ್ದು, ಜನರಲ್ಲಿ ಒಂದೆಡೆ ಹರ್ಷ ಮತ್ತೊಂದೆಡೆ ಹಿಂದೂ ಮುಸ್ಲಿಂ ಭಾವೈಕ್ಯೆತೆಗೆ ಸಾಕ್ಷಿಯಾಗಿದ್ದು ಸಂತೋಷದ ವಿಷಯವೇ ಸರಿ.