ಚಿಕ್ಕಬಳ್ಳಾಪುರ: ಕಾಂಗ್ರೆಸ್ (Congress) ದರೋಡೆಕೋರರ ಕೂಟ, ಸಿದ್ದರಾಮಯ್ಯ (Siddaramaiah) ಸಂಪುಟ ಇದ್ದಾಗ ಏನಾದರು ಒಳ್ಳೆಯದು ಆಗಿದೆಯಾ? ಅವರು ಧರ್ಮಾತ್ಮರಾಗಿದ್ದರೆ, ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರ ಪಕ್ಷ ಬಿಟ್ಟು 16 ಜನ ಯಾಕೆ ಓಡಿಹೋದರು ಎಂದು ಕಂದಾಯ ಸಚಿವ ಆರ್. ಅಶೋಕ್ (R. Ashoka) ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಉತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರಿ ಇಲ್ಲ, ಅವರು ನೀರು ಹಾಕಿ ತೊಳೆದರೆ ಸಾಲದು, ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗೋದು. ಕಾಂಗ್ರೆಸ್ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಆ ಸ್ಥಳಗಳನ್ನು ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗುತ್ತದೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಸುಧಾಕರ್ ಈ ರಾಜ್ಯದ, ದೇಶದ ಆಸ್ತಿ; ಸಚಿವ ಶಿವರಾಮ್ ಹೆಬ್ಬಾರ್
ಈ ಹಿಂದೆ ಕಾಂಗ್ರೆಸ್ನ 5 ವರ್ಷ ಸರ್ಕಾರ ಇದ್ದಾಗ ಕಾಂಗ್ರೆಸ್ನವರು ಜನರಿಗೆ ಮೋಸ ಮಾಡಿದ್ದರು. ಕಾಂಗ್ರೆಸ್ ನಾಲಾಯಕ್ ಪಕ್ಷ ಎಂದು 16 ಜನ ಹೊರ ಬಂದರು. ಹೀಗಿದ್ದರೂ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಕಾಂಗ್ರೆಸ್ನವರು ಹೊರಟಿದ್ದಾರೆ. ಆದಷ್ಟು ಬೇಗ ಅವರಿಗೆ ಭ್ರಮನಿರಸನವಾಗಲಿದೆ. ಈ ಹಿಂದೆ ರಾಜ್ಯವನ್ನು ಲೂಟಿ ಮಾಡಿದವರು ಈಗ ಬಸ್ನಲ್ಲಿ ಬರುತ್ತಿದ್ದಾರೆ ಎಚ್ಚರವಾಗಿರಿ ಎಂದು ಹೇಳಿದರು.
ಮೋದಿ ಅಂದರೆ ದೇಶದ ಐಕಾನ್, ಮೋದಿ ಅಂದರೆ ನಮ್ಮ ಮನೆಯ ಮಗನ ರೀತಿ. ಯುವಕರಿಗೆ ಅಭಿವೃದ್ಧಿ ಪರ ಚಿಂತನೆ ಮಾಡುವ ಆದರ್ಶ ಪುರುಷ. ಮೋದಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಮೋದಿ ಎಂದು ಹಾಡಿ ಹೊಗಳಿದರು.
ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 am, Fri, 13 January 23