ಚಿಕ್ಕಬಳ್ಳಾಪುರ: ಪಪ್ಪಾಯ ಹಣ್ಣು ಲೋಡ್​ ತುಂಬಿದ್ದ ಬೊಲೇರೊ ವಾಹನ ಕಳ್ಳತನ

ಇತ್ತೀಚೆಗೆ ಮಾಲು ಸಮೇತ ವಾಹನವನ್ನೇ ಕದಿಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಅಡಿಕೆ, ಟೆಮೆಟೋ ತುಂಬಿದ್ದ ವಾಹನಗಳನ್ನು ಕಳ್ಳತನ ಮಾಡಿರುವ ಪ್ರಕರಣ ನಡೆದಿವೆ. ಅದರಂತೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಇದೀಗ ಪಪ್ಪಾಯ ಸಮೇತ ಬೊಲೇರೊ ಪಿಕ್ ಅಪ್ ವಾಹನವನ್ನೇ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ವಿವಿಧ ಕಾಯಿಲೆಗಳಿಗೆ ರಾಮಬಾಣವಾಗಿರುವ ಪಪ್ಪಾಯ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇದರಿಂದ ಪಪ್ಪಾಯ ಸಾಗಿಸುತ್ತಿದ್ದ ವಾಹನದ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದೆ.

ಚಿಕ್ಕಬಳ್ಳಾಪುರ: ಪಪ್ಪಾಯ ಹಣ್ಣು ಲೋಡ್​ ತುಂಬಿದ್ದ ಬೊಲೇರೊ ವಾಹನ ಕಳ್ಳತನ
Papaya Load Bolero Pickup Theft
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ

Updated on:Jan 27, 2025 | 5:43 PM

ಚಿಕ್ಕಬಳ್ಳಾಪುರ, (ಜನವರಿ 27): ಮೊನ್ನೇ ಅಷ್ಟೇ ಲಾರಿ ಸಮೇತ ಕೋಟ್ಯಂತರ ಮೌಲ್ಯದ ಅಡಿಕೆ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರದಲ್ಲಿ ಪಪ್ಪಾಯ ಹಣ್ಣು ಸಮೇತ ಬೊಲೇರೊ ಪಿಕ್ ಅಪ್ ವಾಹನವನ್ನು ಕದ್ದು ತೆಗೆದುಕೊಂಡಿರುವ ಹೋಗಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಬೈಪಾಸ್​ನ ಭಗವತಿ ಹೋಟಲ್ ಬಳಿ ಪಪ್ಪಾಯ ಹಣ್ಣು ತುಂಬಿದ್ದ ವಾಹನದ ಚಾಲಕ ಶೌಚಕ್ಕೆ ಹೋಗಿದ್ದರು. ಈ ವೇಳೆ ಖದೀಮರು ವಾಹನವನ್ನು ಚಾಲನೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪಪ್ಪಾಯ ಹಣ್ಣುಗಳಿಗೆ ಭಾರಿ ಬೇಡಿಕೆ ಇದೆ. ಇದರಿಂದ ಪಪ್ಪಾಯ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ಬೆಂಗಳೂರಿನ ಯಲಹಂಕ ಮೂಲದ ಹೇಮಂತ್ ಎನ್ನುವವರು ಆಂಧ್ರದಿಂದ ಪಪ್ಪಾಯ ಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಮೊನ್ನೆ ರಾತ್ರಿ ಆಂಧ್ರ ಪ್ರದೇಶದ ಅನಂತಪುರದಿಂದ ಪಪ್ಪಾಯ ತುಂಬಿದ್ದ ವಾಹನ ಬೆಂಗಳೂರಿಗೆ ಬರುತ್ತಿತ್ತು. ಆದ್ರೆ, ಮಹೇಂದ್ರ ಪಿಕ್ ಅಪ್ ವಾಹನದ ಚಾಲಕ ಗಂಗಾಧರ್ ಎನ್ನುವವರು ವಾಹನನ್ನು ಚಿಕ್ಕಬಳ್ಳಾಪುರ ಬೈಪಾಸ್​ನ ಭಗವತಿ ಹೋಟಲ್ ಬಳಿ ನಿಲ್ಲಿಸಿ ಶೌಚಾಲಯಕ್ಕೆ ಹೋಗಿದ್ದಾರೆ. ಆಗ ಎರಡು ಬೈಕ್ ಗಳಲ್ಲಿ ಬಂದ ಆರು ಜನ ಯುವಕರು ವಾಹನವನ್ನು ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಲಾರಿ ಸಮೇತ ಕೋಟ್ಯಂತರ ರೂ ಮೌಲ್ಯದ ಅಡಿಕೆಯೊಂದಿಗೆ ಚಾಲಕ ಪರಾರಿ

ಚಾಲಕ ಗಂಗಾಧರ್​ ಕೆಲ ದೂರ ವಾಹನ ಹಿಂದೆ ಓಡಿ ಹೋಗಿದ್ದಾರೆ. ಆದ್ರೆ, ವಾಹನ ಕಣ್ಣಿಗೆ ಕಾಣಿಸದೇ ಹೋಗಿದೆ. ಇನ್ನೂ ವಾಹನದಲ್ಲಿ ಸುಮಾರು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಪಪ್ಪಾಯ ಹಣ್ಣುಗಳು ಇತ್ತು ಎಂದು ತಿಳಿದುಬಂದಿದೆ. ಬಳಿಕ ವಾಹನ ಚಾಲಕ ಗಂಗಾಧರ್ ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಾಗ ವಾಹನದಲ್ಲಿದ್ದ ಅರ್ಧದಷ್ಟು ಪಪ್ಪಾಯ ಅಮಾನಿ ಗೋಪಾಲಕೃಷ್ಣ ಕೆರೆ ಬಳಿ ಅನ್ ಲೋಡ್ ಆಗಿರುವುದು ಕಂಡು ಬಂದಿದೆ.

ಇನ್ನೂ ವಾಹನ ಕಳ್ಳತನವಾದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದು, ಸ್ಪಷ್ಟವಾಗಿ ರೆಕಾರ್ಡ್​ ಆಗಿಲ್ಲ. ಓವರ್ ಲೋಡ್ ಇರುವ ವಾಹನ ಸ್ಲೋ ಆಗಿ ಚಲಿಸುತ್ತೆ ಅಂತ ಕೆಲವು ಹಣ್ಣುಗಳನ್ನು ಕೆರೆ ಬಳಿ ಬಿಸಾಡಿ ಇನ್ನೂಳಿದ ಪಪ್ಪಾಯ ಸಮೇತ ವಾಹನವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಇನ್ನೂ ಪ್ರಕರಣ ದಾಖಲು ಮಾಡಿರುವ ಪೊಲೀಸರು, ವಾಹನ ಜೊತೆ ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:42 pm, Mon, 27 January 25

ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ