ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ

ಮಕ್ಕಳಾಗಿಲ್ಲ ಎಂದು ಹೇಳಿ ಮನೆಗೆ ಬೆಳಕಾಗಿ ಬಂದ ಸೊಸೆಯನ್ನೇ ಮನೆಯಿಂದಲೇ ದೂರ ಇರಿಸುವ ಮೂಲಕ ಅತ್ತೆ ಅಮಾನವೀಯವಾಗಿ ನಡೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಯಿಯ ಈ ಕೃತ್ಯಕ್ಕೆ ಮಗನೂ ಸಾಥ್ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಪತಿ ಮನೆ ಮುಂದೆಯೇ ಧರಣಿ ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ
ಮಕ್ಕಳಾಗಿಲ್ಲ ಎಂದು ಸೊಸೆಯನ್ನೇ ಮನೆಯಿಂದ ದೂರ ಇಟ್ಟ ಅತ್ತೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on:Sep 18, 2023 | 5:29 PM

ಚಿಕ್ಕಬಳ್ಳಾಪುರ, ಸೆ.18: ಅದು ಶ್ರೀಮಂತರಲ್ಲಿ ಶ್ರೀಮಂತ ಕುಟುಂಬ, ಒಂದು ಪ್ರತಿಷ್ಟಿತ ಖಾಸಗಿ ಶಾಲೆ ಬೇರೆ ನಡೆಸುತ್ತಿದೆ, ಇನ್ನು ಅವರ ಮನೆಗೆ ಬಂದ ಸೊಸೆಗೆ ಮದುವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಲಿಲ್ಲ ಅಂತ ಆಕೆಯ ಗಂಡನ ಜೊತೆ ಬೇರೆ ಮನೆ ಮಾಡಿ ಇಟ್ಟಿದ್ರು, ಇನ್ನು ಕೈ ಹಿಡಿದ ಗಂಡ ಕಳೆದ 8 ತಿಂಗಳಿಂದ ಪತ್ನಿಯನ್ನ ಬಿಟ್ಟು ತಾಯಿ ಜೊತೆ ವಾಸ ಮಾಡುತ್ತಿದ್ದಾನೆ ಅಂತ ನೊಂದ ಆತನ ಪತ್ನಿ ,ಅತ್ತೆ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾಳೆ. ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ.

ಅತ್ತೆಯ ಮನೆಯ ಮುಂದೆ ಸೊಸೆ ಅಹೋರಾತ್ರಿ ಧರಣಿ ನಡೆಸುತ್ತಿರೋದು, ಚಿಕ್ಕಬಳ್ಳಾಪುರ ನಗರದ ಮುನ್ಸಿಫಲ್ ಬಡಾವಣೆಯಲ್ಲಿ.. ಹೌದು, ದಿವಂಗತ ನಿವೃತ್ತ ಪ್ರಾಂಶುಪಾಲ ಖುದ್ದೂಸ್ ಹಾಗೂ ಆತನ ಪತ್ನಿ ನ್ಯಾಮತ್ ಬೇಗಂ ರ ಎರಡನೇ ಮಗ ಮುಕ್ತಾರ್​ ಅಹ್ಮದ್ ಪತ್ನಿ ಜಬೀನ್ ತಾಜ್ ಈಗ ನ್ಯಾಯ ಕೋರಿ ಅತ್ತೆ ನ್ಯಾಮತ್ ಬೇಗಂ ಮನೆ ಮುಂದೆ ದರಣಿ ನಡೆಸಿದ್ದಾಳೆ..

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧದ ಶಂಕೆ; ಪತ್ನಿಯನ್ನ ನಡು ಬೀದಿಯಲ್ಲಿ ಕೊಚ್ಚಿ ಕೊಲೆಗೈದ ಪತಿ

ಜಬೀನ್ ತಾಜ್ ಹಾಗೂ ಮುಕ್ತಾರ ಅಹ್ಮದ್ ಗೆ ಮದುವೆಯಾಗಿ 8 ವರ್ಷಗಳಾಗಿವೆ.. ದಂಪತಿಗೆ ಮಕ್ಕಳಾಗಿಲ್ಲವಂತೆ, ಇದೇ ವಿಚಾರಕ್ಕೆ ಅತ್ತೆ, ಬಾವ ಹಾಗೂ ಗಂಡನ ಮದ್ಯೆ ಮನಸ್ತಾಪ ಆಗಿತ್ತಂತೆ, ಇದ್ರಿಂದ ಮುಕ್ತಾರ್​ ಅಹ್ಮದ್, ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿ ಇಟ್ಟಿದ್ದನಂತೆ, ಕಳೆದ 8 ತಿಂಗಳಿನಿಂದ ಪತ್ನಿ ಇರುವ ಕಡೆ ಹೋಗದೆ ತಾಯಿ ಜೊತೆಯೇ ಇದ್ದಾನಂತೆ, ಇದ್ರಿಂದ ಗಂಡನನ್ನ ಹುಡುಕಿಕೊಂಡು ಬಂದು ಅತ್ತೆ ಮನೆ ಮುಂದೆ ಜಬೀನ್ ತಾಜ್ ಧರಣಿ ನಡೆಸಿದ್ದಾಳೆ..

ಆರೋಪ ಅಲ್ಲಗಳೆದ ಮಹಿಳೆ ಪತಿ

ಸೊಸೆ ಮನೆ ಮುಂದು ಬಂದು ಧರಣಿ ಮಾಡುತ್ತಿದ್ದಂತೆ, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಆಕೆಯ ಅತ್ತೆ, ಇಂದು ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ಆಗಮಿಸಿ ಸೊಸೆಯ ವಿರುದ್ದ ದೂರು ನೀಡಿದ್ದಾರೆ, ಆದ್ರೆ ಸೊಸೆ ಚಿಕ್ಕಬಳ್ಳಾಪುರ ಎಸ್ಪಿ ಸೇರಿದಂತೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿ ಧರಣಿ ನಡೆಸಿದ್ದಾಳೆ, ಇದಕ್ಕೆ ಪ್ರತಿಕ್ರಿಯಿಸಿದ ಆಕೆಯ ಗಂಡ ಮುಕ್ತಾರ್​ ಅಹ್ಮದ್ ಪತ್ನಿಯ ಆರೋಪ ಅಲ್ಲಗೆಳೆದಿದ್ದಾನೆ.

ಶ್ರೀಮಂತ ಸುಶಿಕ್ಷಿತ ವಿದ್ಯಾವಂತ ಕುಟುಂಬದಲ್ಲೇ ಸೊಸೆಗೆ ಮಕ್ಕಳಾಗಿಲ್ಲ ಅಂತ, ಮನೆಯಿಂದ ದೂರ ಇಟ್ಟು ಈಗ ಆಕೆಯಿಂದ ಗಂಡನನ್ನ ದೂರ ಮಾಡಿದ್ದಕ್ಕೆ ನೊಂದ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿ ಒಬ್ಬಂಟಿಯಾಗಿ ಅತ್ತೆ ಮನೆ ಮುಂದೆ ಧರಣಿ ನಡೆಸಿದ್ದಾಳೆ, ಪೊಲೀಸರು ಒಂಟಿ ಮಹಿಳೆಯ ಧರಣಿಗೆ ಯಾವುದೇ ರಕ್ಷಣೆ ನೀಡಿಲ್ಲ, ಇದ್ರಿಂದ ಮಹಿಳೆ ಪೊಲೀಸರ ವಿರುದ್ದವೂ ಅಸಮದಾನ ವ್ಯಕ್ತಪಡಿಸಿದ್ದಾಳೆ.. ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Mon, 18 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ