ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಇನ್ನೂ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜ್ ಮಾಡದೆ ನಿರ್ಲಕ್ಷ್ಯ
ಶಾಲೆಗಳು 10 ಗಂಟೆಗೆ ಆರಂಭವಾಗಬೇಕಿದೆ. ಆದರೆ ಶಾಲಾ ಸಿಬ್ಬಂದಿ ಶಾಸ್ತ್ರಕ್ಕಾದರೂ ಶಾಲೆಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಕೊರೊನಾ ಮರಳುವ ಆತಂಕ ಎದುರಾಗಿದೆ.
ಚಿಕ್ಕಬಳ್ಳಾಪುರ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಮರಳಿ ಆರಂಭಗೊಳ್ಳುತ್ತಿವೆ. ಮಕ್ಕಳನ್ನು ವೆಲ್ಕಂ ಮಾಡಲು ಶಾಲಾ ಕಾಲೇಜುಗಳು ಸಜ್ಜಾಗಿವೆ. ಶಾಲಾ ಕಾಲೇಜುಗಳಲ್ಲಿ ಇವತ್ತು ಹಬ್ಬದ ವಾತಾವರಣ ಮನೆ ಮಾಡಿದೆ. ಬಾಳೆಕಂಬ ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡ ಶಾಲೆಗಳು ಮದುವಣಗಿತ್ತಿಯಂತೆ ರೆಡಿಯಾಗಿವೆ. ಮನೆಯಲ್ಲೇ ಇದ್ದು ಇದ್ದು ಬೋರ್ ಹೊಡೆದಿದ್ದ ಮಕ್ಕಳು ಅತ್ಯುತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಸ್ವಂತ ಜಿಲ್ಲೆಯಲ್ಲಿಯೇ ಪರಿಸ್ಥಿತಿ ಭಿನ್ನವಾಗಿದೆ. ಶಾಲೆಗಳಲ್ಲಿ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜ್ ನಿರ್ಲಕ್ಷ್ಯ ತೋರಲಾಗಿದೆ. ಶಾಲೆಗಳು 10 ಗಂಟೆಗೆ ಆರಂಭವಾಗಬೇಕಿದೆ. ಆದರೆ ಶಾಲಾ ಸಿಬ್ಬಂದಿ ಶಾಸ್ತ್ರಕ್ಕಾದರೂ ಶಾಲೆಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಕೊರೊನಾ ಮರಳುವ ಆತಂಕ ಎದುರಾಗಿದೆ.
ಇನ್ನೂ ಆತಂಕದ ವಿಚಾರವೆಂದರೆ ನಿನ್ನೆ ಇದೇ ಶಾಲೆಯ ಕೊಠಡಿಗಳನ್ನು ಟಿ.ಇ.ಟಿ ಪರೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ನಿನ್ನೆ ಅನೇಕ ಯುವ ಅಭ್ಯರ್ಥಿಗಳು ಇಲ್ಲಿ ಪರೀಕ್ಷೆ ಬರೆದಿದ್ದಾರೆ. ಅದಾದಮೇಲೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕಿತ್ತು. ಆ ನಿಟ್ಟಿನಲ್ಲಾದರೂ ಶಾಲಾ ಆಡಳಿತ ಎಚ್ಚೆತ್ತುಕೊಂಡಿಲ್ಲ.
ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಇನ್ನೂ ಒಂದು ಎಡವಟ್ಟು ಈ ಮಧ್ಯೆ, ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಇನ್ನೂ ಒಂದು ಎಡವಟ್ಟು ನಡೆದಿದೆ. ಇಂದಿನಿಂದ ರಾಜ್ಯಾದ್ಯಂತ ಶಾಲಾ ಕಾಲೇಜು ಆರಂಭಿಸುವುದಕ್ಕೆ ಸರ್ಕಾರ ಆದೇಶ ಮಾಡಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಪಿ.ಯು.ಸಿ ಖಾಸಗಿ ವಿದ್ಯಾರ್ಥಿಗಳು ಹಾಗೂ ತಿರಸ್ಕೃತ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ 6 ಕಾಲೇಜುಗಳಲ್ಲಿ ಮುಂದಿನ ತಿಂಗಳ 3ನೇ ತಾರೀಖು ವರೆಗೂ ಕಾಲೇಜು ರೀ ಓಪನ್ ಭಾಗ್ಯವಿಲ್ಲ.
ಕೋಲಾರ: ಕಾಲೇಜು ಆವರಣ ಸ್ವಚ್ಛ ಮಾಡದೆ ಸಿಬ್ಬಂದಿಯ ನಿರ್ಲಕ್ಷ್ಯ ಇಂದಿನಿಂದ 9, 10 ಮತ್ತು ಪಿಯುಸಿ ಭೌತಿಕ ತರಗತಿ ಆರಂಭ. ಆದರೆ ಕೋಲಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕಾಲೇಜು ಆವರಣದಲ್ಲಿ ಕಸದ ರಾಶಿ, ಕೆಸರು ತುಂಬಿದೆ. ಆದರೂ ಕಾಲೇಜು ಆವರಣ ಸ್ವಚ್ಛ ಮಾಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಕೋಲಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ.
ಟಿವಿ9 ವರದಿ ಬಳಿಕ ಎಚ್ಛೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೋಲಾರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲ್ನಲ್ಲಿ ಕೆಸರು ಗದ್ದೆ, ಕಸದ ರಾಶಿ ನಡುವೆಯೇ ಶಾಲೆ ಆರಂಭವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಆತಂಕದಲ್ಲಿಯೇ ಶಾಲೆಗಳಿಗೆ ಆಗಮಿಸಿದ್ದರು. ಈ ವರದಿ ಟಿವಿ9ನಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಛೆತ್ತುಕೊಂಡ ಅಧಿಕಾರಿಗಳು ಕಾಲೇಜು ಆವರಣದಲ್ಲಿ ಜೆಸಿಬಿಯಿಂದ ಸ್ವಚ್ಛತಾ ಕಾರ್ಯ ಶುರು ಮಾಡಿದ್ದಾರೆ. ಕೆಸರು ತುಂಬಿದ್ದ ಕಡೆ ಮಣ್ಣು ಸುರಿದು ಸಿಬ್ಬಂದಿಗಳು ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಸ್ಥಳಕ್ಕೆ ಬಿಇಓ ರಾಮಚಂದ್ರ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: School Reopening: ನಿಮ್ಮ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಿ; ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭ ಸುದ್ದಿ
School Reopen: ಶಾಲಾ ಮಕ್ಕಳು ಇಂದಿನಿಂದ ತಂಡೋಪಾದಿಯಲಿ ಮರಳಿ ಶಾಲೆಗೆ, ಯಾವ ಜಿಲ್ಲೆಗಳಲ್ಲಿ ಸ್ಕೂಲ್ ರೀಓಪನ್ ಇಲ್ಲ!?
Published On - 9:12 am, Mon, 23 August 21