AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಮಾನಾಸ್ಪದ ರೀತಿಯಲ್ಲಿ 7 ನವಿಲುಗಳು ಸಾವು; ತೋಟದ ಬೆಳೆ ತಿನ್ನಲು ಬಂದಾಗ ವಿಷ ಇಟ್ಟಿರುವ ಶಂಕೆ

ತೋಟದ ಬೆಳೆ ತಿನ್ನಲು ಬಂದಾಗ ವಿಷ ಇಟ್ಟು 7 ನವಿಲುಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಶಿಡ್ಲಘಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೇಸ್‌ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ 7 ನವಿಲುಗಳು ಸಾವು; ತೋಟದ ಬೆಳೆ ತಿನ್ನಲು ಬಂದಾಗ ವಿಷ ಇಟ್ಟಿರುವ ಶಂಕೆ
7 ನವಿಲುಗಳು ಸಾವು
TV9 Web
| Updated By: preethi shettigar|

Updated on:Mar 11, 2022 | 4:31 PM

Share

ಚಿಕ್ಕಬಳ್ಳಾಪುರ: ಅನುಮಾನಾಸ್ಪದ ರೀತಿಯಲ್ಲಿ 7 ನವಿಲುಗಳು (peacock) ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿ ಬಳಿ ನಡೆದಿದೆ. ಗ್ರಾಮದ ಸರ್ವೆ ನಂಬರ್ ಜಮೀನಿನಲ್ಲಿ ನವಿಲುಗಳು ಮೃತಪಟ್ಟಿವೆ(Death). ತೋಟದ ಬೆಳೆ ತಿನ್ನಲು ಬಂದಾಗ ವಿಷ ಇಟ್ಟು 7 ನವಿಲುಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಶಿಡ್ಲಘಟ್ಟ ಅರಣ್ಯ ಇಲಾಖೆ ಅಧಿಕಾರಿಗಳು (Forest department) ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೇಸ್‌ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

ಅಪರಿಚಿತ ವಾಹನ ಹರಿದು ಎರಡು ವರ್ಷದ ಚಿರತೆ ದಾರುಣ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44ರ ಬಳಿ ಚಿರತೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಎರಡು ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಾಡಿನಲ್ಲಿ ಅನ್ನ, ಆಹಾರ ಇಲ್ಲದೆ ರಸ್ತೆಗೆ ಬಂದಿದ್ದ ಚಿರತೆ ಸಾವನ್ನಪ್ಪಿದೆ. ಚಿರತೆ ಮೃತಪಟ್ಟ ಜಾಗದಲ್ಲಿ ಹಲವಾರು ಕಾಡು ಪ್ರಾಣಿಗಳು ಸಾವನಪ್ಪಿವೆ. ಕಳೆದ ಎರಡು ವರ್ಷದಲ್ಲಿ 6 ಕಾಡು ಪ್ರಾಣಿಗಳು ಸಾವನ್ನಪ್ಪಿವೆ.

ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸುವ ಕಾಡು ಪ್ರಾಣಿಗಳು ಸಾವನ್ನಪ್ಪುತ್ತವೆ. ಈಗಾಗಲೇ ಇದೇ ಜಾಗದಲ್ಲಿ ಜಿಂಕೆ, ಸಾರಂಗ, ಕರಡಿ ಹಾಗೂ ಚಿರತೆ ಮೃತಪಟ್ಟಿವೆ. ಹೀಗಾಗಿ ಅರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 44 ಹಾದು ಹೋಗಿದ್ದು, ಹೆದ್ದಾರಿಗೆ ಅಂಡರ್ ಪಾಸ್ ಮಾಡಿಕೊಡುವಂತೆ ಅರಸಲನ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

Tractor accident: ಓವರ್ ಲೋಡ್ ಧಾವಂತದಿಂದ​ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ 4 ಮಂದಿ ಸಾವು

viral video: ಜಿಂಕೆಯನ್ನು ಗಾಳಿಯಲ್ಲಿ ಹಾರಿ ಬೇಟೆಯಾಡಿದ ಚಿರತೆ; ಇಲ್ಲಿದೆ ಅಪರೂಪದ ದೃಶ್ಯ

Published On - 4:19 pm, Fri, 11 March 22