AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tractor accident: ಓವರ್ ಲೋಡ್ ಧಾವಂತದಿಂದ​ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ 4 ಮಂದಿ ಸಾವು

Navali village, kanakagiri: ನಿಶ್ಚಿತಾರ್ಥಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಯಮನೂರಪ್ಪ(55) ಮತ್ತು ಅಂಬಮ್ಮ(50) ಸ್ಥಳದಲ್ಲೇ ಅಸುನೀಗಿದವರು. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

Tractor accident: ಓವರ್ ಲೋಡ್ ಧಾವಂತದಿಂದ​ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ 4 ಮಂದಿ ಸಾವು
ಓವರ್ ಲೋಡ್​ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ ಇಬ್ಬರು ಸ್ಥಳದಲ್ಲೇ ಸಾವು
TV9 Web
| Edited By: |

Updated on:Mar 11, 2022 | 3:15 PM

Share

ಕೊಪ್ಪಳ: ಸುಮಾರು 25 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು, ಚಿಕಿತ್ಸೆ ಫಲಿಸದೆ ಕಾರಟಗಿ ಆಸ್ಪತ್ರೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯಲ್ಲಿ ನಡೆದಿದೆ. ನಿಶ್ಚಿತಾರ್ಥಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಯಮನೂರಪ್ಪ(55) ಮತ್ತು ಅಂಬಮ್ಮ(50) ಸ್ಥಳದಲ್ಲೇ ಅಸುನೀಗಿದವರು. ಶೇಶಪ್ಪ ಬಂಡಿ (40) ಮತ್ತು ಯಮನಪ್ಪ ಸಿಂಧನೂರು (35) ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ಇವರೆಲ್ಲಾ ಕೊಪ್ಪಳ ಜಿಲ್ಲೆ ಕಾರಟಗಿಯ ಇಂದ್ರನಗರ ನಿವಾಸಿಗಳು. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸ್ ತಂಡ ಭೇಟಿ ನೀಡಿದೆ.

ನಿಶ್ಚಿತಾರ್ಥಕ್ಕೆ ಹೊರಟಿದ್ದವರು ಸೇರಿದ್ದು ಮಸಣಕ್ಕೆ: ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ‌ಪಾರ್ಕ್ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕಾರಟಗಿ ಪಟ್ಟಣದ 18ನೇ ವಾರ್ಡ್ ನ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿಯ ಸಿರವಾರ ಕಡೆಗೆ ಟ್ರ್ಯಾಕ್ಟರ್ ಹೊರಟಿತ್ತು.

ಹಾಡಹಗಲೇ ಸಿನಿಮೀಯವಾಗಿ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಗೆ ಸೇರಿದ 1 ಕೋಟಿ ಹಣ ದರೋಡೆ: ನೆಲಮಂಗಲ: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಹೆದ್ದಾರಿಯಲ್ಲಿ ಭಾರೀ ದರೋಡೆ ನಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದವರ ಹಣ ಮತ್ತು ಕಾರು ಕಿತ್ತುಕೊಂಡು ದರೋಡೆಕೋರರ ತಂಡವು ಪರಾರಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ಈ ಘಟನೆ ನಡೆದಿದೆ. ಚಿನ್ನದ ವ್ಯಾಪಾರಿ ಯೋಗೇಶ್ ಸೇರಿದಂತೆ ಮೊವರನ್ನ ಕಾರಿನಿಂದ ಬೆದರಿಸಿ ಇಳಿಸಿ, ಕಾರಿನ ಸಮೇತವಾಗಿ ದರೋಡೆಕೋರರು ಪರಾರಿಯಾಗಿದ್ದಾರೆ.

ಕಾರಿನಲ್ಲಿ ಒಂದು ಕೋಟಿ ರೂಪಾಯಿವರೆಗೂ ಹಣವಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ಗ್ಯಾಂಗ್ ಉದ್ಯಮಿ ಯೋಗೇಶ್ ಗೆ ಸೇರಿದ ಬ್ರೀಜಾ ಕಾರು ಕಿತ್ತುಕೊಂಡು ಪರಾರಿಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಒಂದೇ ದಿನ ಎರಡು ಕಡೆ! ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ -21 ವಾಹನಗಳು ಅಗ್ನಿಗಾಹುತಿ ಬೆಂಗಳೂರು: ನಗರ ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ ಬಿದ್ದಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ನಡೆದಿದೆ. ಸೀಜ್ ಮಾಡಿದ್ದ ಹಳೇ ವಾಹನಗಳನ್ನು ಸ್ಟೇಷನ್‌ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು. ದ್ವಿಚಕ್ರ ವಾಹನಗಳು, ಕಾರುಗಳ ಸಹಿತ 15 ವಾಹನಗಳು ಬೆಂಕಿಗಾಹುತಿಯಾಗಿವೆ. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ … ಇನ್ನು ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಬೆಂಕಿ ಅವಘಡ ನಡೆದಿದೆ. ಕೆ ಜಿ ಹಳ್ಳಿ ಪೊಲೀಸರು ಸೀಜ್ ಮಾಡಿದ್ದ ಕಾರುಗಳ ಪೈಕಿ ಆರು ಬೆಂಕಿಗಾಹುತಿಯಾಗಿವೆ. ಪೊಲೀಸರು ವಿವಿಧ ಕೇಸ್ ಗಳಲ್ಲಿ ಸೀಜ್ ಮಾಡಿದ್ದ ಕಾರುಗಳು ಇವಾಗಿವೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಎಷ್ಟೇ ಪ್ರಯತ್ನಿಸಿದರೂ ವಿವಾಹ ಭಾಗ್ಯ ಬರುತ್ತಿಲ್ಲವೇ? ಹೀಗೆ ಮಾಡಿ ಕಂಕಣ ಬಲ ಕೂಡಿ ಬರಬಹುದು! ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು

ಇದನ್ನೂ ಓದಿ: Kama kasturi: ಬೇಸಿಗೆ ಕಾಲ ಬರುತ್ತಿದೆ, ಉರಿ ಮೂತ್ರ ಕಾಡಿದರೆ ಇದನ್ನು ಬಳಸಿ ನಿಶ್ಚಿಂತೆಯಿಂದ ಇರಿ!

Published On - 2:15 pm, Fri, 11 March 22

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್