ಟ್ರೆಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆಯಿಂದ ಶಾಕ್; ರಾಜ್ಯಾದ್ಯಂತ ತಾತ್ಕಾಲಿಕವಾಗಿ ಚಾರಣಕ್ಕೆ ನಿರ್ಬಂಧ!
ಚಾರಣದ ಟಿಕೆಟ್ ಬುಕಿಂಗ್ ಇಕೋ ಟೂರಿಸಂ ಮಾಡುತ್ತಿತ್ತು. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ, ಆ.06: ಪ್ರಕೃತಿ ಸೊಬಗು ಹಾಗೂ ಚಾರಣಕ್ಕೆ ಖ್ಯಾತಿಯಾಗಿರುವ ಸ್ಕಂದಗಿರಿ, ಕೈವಾರಬೆಟ್ಟ, ಮಾಕಳಿದುರ್ಗ, ಅಂತರಗಂಗೆ, ಸಾವನದುರ್ಗ, ಬಿದರುಕಟ್ಟೆ, ರಾಮದೇವರಬೆಟ್ಟ, ಚಿನಾಗ್‌ಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ರಾಜ್ಯ ಅರಣ್ಯ ಇಲಾಖೆ(Karnataka Forest Department) ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.
ರಾಜ್ಯಾದ್ಯಂತ ತಾತ್ಕಾಲಿಕವಾಗಿ ಚಾರಣಕ್ಕೆ ತಡೆ
ಚಾರಣದ ಟಿಕೆಟ್ ಬುಕಿಂಗ್ ಇಕೋ ಟೂರಿಸಂ ಮಾಡುತ್ತಿತ್ತು. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಯ್ದ ಪ್ರಕೃತಿ ಸೊಬಗಿನ ತಾಣಗಳನ್ನು ಗುರುತಿಸಿ, ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರ ಅನುಕೂಲಕ್ಕೆಂದು ರಾಜ್ಯ ಸರ್ಕಾರ ಪರಿಸರ ಪ್ರವಾಸೋದ್ಯಮ ಮಂಡಳಿಯನ್ನು ನಿರ್ಮಿಸಿ, ಅದರಡಿ 20ಕ್ಕೂ ಹೆಚ್ಚು ಅಚ್ಚುಮೆಚ್ಚಿನ ಚಾರಣ ಸ್ಥಳಗಳನ್ನು ಮಂಡಳಿಯ ನಿರ್ವಹಣೆಗೆ ಸೂಚಿಸಿತ್ತು.
ಇದನ್ನೂ ಓದಿ:ಕೇದಾರನಾಥ ಚಾರಣ ಮಾರ್ಗದಲ್ಲಿ ಸಿಲುಕಿದ್ದ 8,000 ಯಾತ್ರಿಕರ ರಕ್ಷಣೆ
ಅರಣ್ಯ ಪ್ರವಾಸೋದ್ಯಮ ಮಂಡಳಿ (ಇಕೋ ಟೂರಿಸಂ)ನಲ್ಲಿ ಗೋಲ್ ಮಾಲ್
ಇನ್ನು ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಂಡು, ಚಾರಣಕ್ಕೆ ಅಧಿಕೃತವಾಗಿ ಅವಕಾಶ ಕಲ್ಪಿಸಲು ಕರ್ನಾಟಕ ಅರಣ್ಯ ಪ್ರವಾಸೋದ್ಯಮ ಮಂಡಳಿ (ಇಕೋ ಟೂರಿಸಂ)ಗೆ ನೀಡಲಾಗಿತ್ತು. ಇದು ಚಾರಣ ಎಕೋ ಟೂರಿಸಂ ಹಾಗೂ ರಾಜ್ಯ ಸರ್ಕಾರಕ್ಕೆ ಲಾಭದಾಯಕ ಉದ್ಯಮವಾಗಿತ್ತು. ಆದರೆ, ಇಕೋ ಟೂರಿಸಂ ಮಂಡಳಿಯ ಕೆಲವು ಸಿಬ್ಬಂದಿಗಳ ಕುತಂತ್ರದಿಂದ ಆನ್‌ಲೈನ್‌ನಲ್ಲೆ ನಕಲಿ ಟಿಕೆಟ್ ಬುಕ್ಕಿಂಗ್ ಮಾಡಿ ಲಕ್ಷ-ಲಕ್ಷ ಹಣ ದುರುಪಯೋಗ ಮಾಡಲಾಗಿತ್ತು.
ಇಕೋ ಟೂರಿಸಂ ಗೋಲ್ ಮಾಲ್ ಬಯಲು ಮಾಡಿದ್ದ ಟಿವಿ9 ಕನ್ನಡ ಡಿಜಿಟಲ್
2024 ಮಾರ್ಚ್ 03 ರಂದು ಟಿವಿ9 ಕನ್ನಡ ಡಿಜಿಟಲ್ ಚಿಕ್ಕಬಳ್ಳಾಪುರ ಪ್ರತಿನಿಧಿ ಭೀಮಪ್ಪ ಪಾಟೀಲ್ ಸಾಕ್ಷ್ಯಾಧಾರಗಳ ಸಮೇತ ಇಕೋ ಟೂರಿಸಂ ಗೋಲ್ ಮಾಲ್ನ ಸಮಗ್ರ ವರದಿ ಮಾಡಿದ್ದರು.
ಅರಣ್ಯ ಪ್ರವಾಸೋದ್ಯಮ ಟಿಕೆಟ್ ಬುಕ್ಕಿಂಗ್‍ನಲ್ಲೂ ಗೋಲ್‍ಮಾಲ್
ಚಾರಣಿಗರಿಂದ ಹಣ ಪಡೆದು ಇಲಾಖೆಗೆ ಹಣ ಪಾವತಿಸದ ಆರೋಪ ಎಂದು ವರದಿಯಾಗಿತ್ತು. ಇದರಿಂದ ಎಚ್ಚೇತ್ತ ಅರಣ್ಯ ಇಲಾಖೆ ತಡವಾಗಿ ಕ್ರಮ ಕೈಗೊಂಡಿದೆ. ಇದರಿಂದ ಸ್ವತಃ ಅರಣ್ಯ ಇಲಾಖೆಯಿಂದಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ನಿರ್ವಹಣೆ ಮಾಡಲು ಮುಂದಾಗಿದೆ.
ಪ್ರಸಿದ್ದ ಚಾರಣಧಾಮಗಳು ಯಾವುವು?
ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ, ಕೈವಾರಬೆಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಕಳಿದುರ್ಗ ಕೋಲಾರದ ಅಂತರಗಂಗೆ ತುಮಕೂರಿನ ಸಾವನದುರ್ಗ, ರಾಮನಗರದ ರಾಮದೇವರಬೆಟ್ಟ ಸೇರಿದಂತೆ ಚಿನಾಗ್‌ಬೆಟ್ಟ, ಸಿದ್ದರಬೆಟ್ಟಗಳು ಪ್ರಸಿದ್ದ ಚಾರಣಧಾಮಗಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ