AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sidlaghatta: ಶಿಡ್ಲಘಟ್ಟ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಪೆಟ್ರೋಲ್ ಬಂಕ್​​ನಲ್ಲಿ ಪಂಪ್ ಮಾಡುವ ಯಂತ್ರಗಳು ಸುಟ್ಟು ಭಸ್ಮ

ಶಿಡ್ಲಘಟ್ಟ- ಜಂಗಮಕೋಟೆ ರಸ್ತೆಯಲ್ಲಿನ ಮಾಳಮಾಚನಹಳ್ಳಿ ಬಳಿ ಇರುವ ಭಾರತ್ ಪೇಟ್ರೋಲ್ ಬಂಕ್ ನಲ್ಲಿ ಶುಕ್ರವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಪೆಟ್ರೋಲ್ ಪಂಪ್ ಮಾಡುವ ಮಿಷನ್​ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

Sidlaghatta: ಶಿಡ್ಲಘಟ್ಟ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಪೆಟ್ರೋಲ್ ಬಂಕ್​​ನಲ್ಲಿ ಪಂಪ್ ಮಾಡುವ ಯಂತ್ರಗಳು ಸುಟ್ಟು ಭಸ್ಮ
ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಪೆಟ್ರೋಲ್ ಬಂಕ್ ಬೆಂಕಿಗೆ ಆಹುತಿ
TV9 Web
| Updated By: ಸಾಧು ಶ್ರೀನಾಥ್​|

Updated on:Nov 13, 2021 | 11:13 AM

Share

ಚಿಕ್ಕಬಳ್ಳಾಪುರ; ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ಹೊತ್ತಿಕೊಂಡು ಪೆಟ್ರೋಲ್ ಪಂಪ್ ಮಾಡುವ ಯಂತ್ರಗಳು ಸುಟ್ಟುಕರಕಲಾಗಿದೆ. ಇದೆ ವೇಳೇ ಸಂಭವಿಸಬಹುದಾಗಿದ್ದ ಭಾರಿ‌ ಅನಾಹುತವೊಂದು ತಪ್ಪಿದೆ. ಘಟನೆ ಶಿಡ್ಲಘಟ್ಟ ತಾಲೂಕು ಮಾಳಮಾಚನಹಳ್ಳಿ ಬಳಿಯ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಶಿಡ್ಲಘಟ್ಟ- ಜಂಗಮಕೋಟೆ ರಸ್ತೆಯಲ್ಲಿನ ಮಾಳಮಾಚನಹಳ್ಳಿ ಬಳಿ ಇರುವ ಭಾರತ್ ಪೇಟ್ರೋಲ್ ಬಂಕ್ ನಲ್ಲಿ ಶುಕ್ರವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಪೆಟ್ರೋಲ್ ಪಂಪ್ ಮಾಡುವ ಮಿಷನ್​ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಪೆಟ್ರೊಲ್ ಬಂಕ್ ನಲ್ಲಿ ಮಲಗಿದ್ದ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆಯಾಗಿ ಪೆಟ್ರೋಲ್ ಬಂಕ್ ಗೆ ಬೆಂಕಿ ಹೊತ್ತಿಕೊಂಡು ಯಂತ್ರಗಳು ಮಾತ್ರ ಸುಟ್ಟು ಹೋಗಿದ್ದು, ಒಂದು ವೇಳೆ ಭೂಮಿಯಲ್ಲಿನ ಪೆಟ್ರೊಲ್ ಶೇಖರಣಾ ಟ್ಯಾಂಕ್ ಗಳಿಗೇನಾದರೂ ಬೆಂಕಿ ತಗುಲಿ ಬ್ಲಾಸ್ಟ್ ಆಗಿದ್ದರೆ ಭಾರಿ ಅನಾಹುತ ನಡೆದು ಹೊಗುವುದಿತ್ತು.

Also Read: ಚಿಕ್ಕಬಳ್ಳಾಪುರದಲ್ಲಿ ವಿಪರೀತ ಮಳೆ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಗ್ರಾ. ಪಂ. ಸದಸ್ಯ ಇನ್ನೂ ಪತ್ತೆಯಿಲ್ಲ

(short circuit in petrol bunk pumping machine gutted at malamachanahalli near sidlaghatta)

Published On - 11:07 am, Sat, 13 November 21