ಚಿಕ್ಕಬಳ್ಳಾಪುರ ಬಳಿ ಹೆದ್ದಾರಿಯಲ್ಲಿ ಹಾವು ಅಡ್ಡಬಂತು ಅಂತಾ ಲಾರಿ ಚಾಲಕ ಬ್ರೇಕ್ ಹಾಕಿದ! ಮುಂದೇನಾಯ್ತು ನೋಡಿ

ರಸ್ತೆಯಲ್ಲಿ ವಾಹನಗಳ ತಪಾಸಣೆಯಿಂದ ಅಪಘಾತವೆಂದು ಆಕ್ರೋಶಗೊಂಡಿದ್ದಾರೆ. ಲಾರಿಗೆ ಹಾವು ಅಡ್ಡ ಬಂದಿರುವುದನ್ನು ತೋರಿಸಿದ ಮೇಲೆ ಸ್ಥಳೀಯರು ಮೊದಲು ಬೆಚ್ಚಿಬಿದ್ದು, ಮೆತ್ತಗಾಗಿದ್ದಾರೆ.

ಚಿಕ್ಕಬಳ್ಳಾಪುರ ಬಳಿ ಹೆದ್ದಾರಿಯಲ್ಲಿ ಹಾವು ಅಡ್ಡಬಂತು ಅಂತಾ ಲಾರಿ ಚಾಲಕ ಬ್ರೇಕ್ ಹಾಕಿದ! ಮುಂದೇನಾಯ್ತು ನೋಡಿ
ಹೆದ್ದಾರಿಯಲ್ಲಿ ಹಾವು ಅಡ್ಡಬಂತು ಅಂತಾ ಲಾರಿ ಚಾಲಕ ಬ್ರೇಕ್ ಹಾಕಿದ! ಮುಂದೇನಾಯ್ತು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 07, 2022 | 12:18 PM

ಚಿಕ್ಕಬಳ್ಳಾಪುರ: ಹಾವಿನಂತಿರುವ ರಸ್ತೆಯ ಮೇಲೆ ಹಾವೇ ನಿಜರೂಪದಲ್ಲಿ ಬಂದುಬಿಟ್ಟರೆ ಶರವೇಗದಲ್ಲಿರುವ ವಾಹನ ಸವಾರರ ಗತಿಯೇಯೇನಾಗಬೇಡಾ!? ಆ ಒಂದು ಹಾವು ಹೆದ್ದಾರಿಯಲ್ಲಿ ಅಡ್ಡ ಬಂದಿದ್ದೇ ಚಿಕ್ಕಬಳ್ಳಾಪುರ (chikkaballapur) ಬಳಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಸರಣಿ ಅಪಘಾತಗಳು ಸಂಭವಿಸಿಬಿಟ್ಟಿವೆ. ಹೆದ್ದಾರಿಯಲ್ಲಿ ಹಾವು (lorry driver) ಅಡ್ಡ ಬಂತು ಅಂತಾ ಹಿಂದೆಮುಂದೆ ನೋಡದೇ ಕಂಟೇನರ್ ಲಾರಿ ಚಾಲಕ ಬ್ರೇಕ್ (lorry driver) ಹಾಕಿದ್ದಾನೆ, ಅಷ್ಟೇ! ಮುಂದೆ ಲಾರಿ ಚಾಲಕನ ಅವಾಂತರದಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು (series of accidents) ಸಂಭವಿಸಿಬಿಟ್ಟಿವೆ.

ಜಸ್ಟ್​ ಎರಡು ಕಂಟೈನರ್ ಲಾರಿ, ಒಂದು ಟಾಟಾ ಏಸ್, ಒಂದು ಕಾರು, ಒಂದು ಟಿಪ್ಪರ್ ಮಧ್ಯೆ ಸರಣಿ ಅಪಘಾತಗಳು ತನ್ನಿಂತಾನೇ ಆಗಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರಗೊಂಡಿದೆ. ಟಿಪ್ಪರ್ ಚಾಲಕ ವಾಹನದೊಳಗೆ ಸಿಲುಕಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿದ್ದ ಸಂಚಾರಿ ಠಾಣೆ ಪೊಲೀಸರು ಘಟನೆಯಿಂದ ಬೇಸ್ತುಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  1. ಸ್ಥಳಿಯರಿಂದ ಪೊಲೀಸರ ವಿರುದ್ದ ಆಕ್ರೋಶ! ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್ ಲಾರಿಯೊಂದು ಬರ್ತಿತ್ತು, ಆದ್ರೆ ಅಗಲಗುರ್ಕಿ ಗ್ರಾಮದ ಬಳಿ ಹೆದ್ದಾರಿಯ ನಡುರಸ್ತೆಯಲ್ಲಿ ಹಾವೊಂದು ರಸ್ತೆ ದಾಟುತ್ತಿತ್ತು. ಇದನ್ನು ಗಮನಿಸಿದ ಲಾರಿ ಚಾಲಕ ಸಡನ್ ಆಗಿ ಲಾರಿ ಬ್ರೇಕ್ ಹಾಕಿದ್ದಾನೆ. ಇದ್ರಿಂದ ಹಿಂದೆ ಬರ್ತಿದ್ದ ಕಂಟೈನರ್ ಲಾರಿ. ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಇದ್ರಿಂದ ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ ಕಲ್ಲು ಸಾಗಿಸ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆಗೆ ತಗುಲಿ ರಕ್ಷಣೆಗೆ ಮೊರೆ ಇಟ್ಟಿದ್ದ. ಅಲ್ಲಿ ಪಕ್ಕದಲ್ಲಿ ವಾಹನಗಳ ತಪಾಸಣೆ ನಡೆಸ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿ, ಗ್ಯಾಸ್ ವೆಲ್ಡರ್ ನನ್ನು ಸ್ಥಳಕ್ಕೆ ಕರೆಸಿ ಟಿಪ್ಪರ್ ನ ಡೋರ್ ಹಾಗೂ ಮುಂಭಾಗವನ್ನು ಕತ್ತರಿಸಿ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿರುವ ಕಾರಣ ಪದೆ ಪದೆ ಅಪಘಾತಗಳು ಆಗ್ತಿವೆ ಎಂದು ಪ್ರತ್ಯಕ್ಷದರ್ಶಿಗಳಾದ ಅರುಣ್, ಮುನಿರಾಜು, ಕಿರಣ್ ಮಾಹಿತಿ ನೀಡಿದ್ದಾರೆ.

Also Read: Hubli Land Mafia: ಹುಬ್ಬಳ್ಳಿಯ ಗುಳುಂ ಗ್ಯಾಂಗ್ ಪಾಲಿಕೆಯ ಭೂ ಆಸ್ತಿಯನ್ನೇ ಗುಳುಂ ಮಾಡಿಬಿಟ್ಟಿದೆ, ಸ್ಥಳೀಯರು ಹೇಳೋದೇನು?

Published On - 12:05 pm, Wed, 7 December 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ