Chikkaballapur: ಟೊಮೆಟೋ ತೋಟಗಳಿಗೆ ವೈರಸ್ ಅಟ್ಯಾಕ್! ಇದ್ದಕ್ಕಿದ್ದಂತೆ ತೋಟಗಳು ನಾಶ
ಆ ಎರಡು ಜಿಲ್ಲೆಗಳ ರೈತರು ಗುಣಮಟ್ಟದ ಟೊಮ್ಯಾಟೊ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುತ್ತಿದ್ರು. ಆ ಜಿಲ್ಲೆಗಳ ಟೊಮ್ಯಾಟೊ ಟೆಸ್ಟ್ಗೆ ದೇಶವೇ ಪೀದಾ ಆಗಿತ್ತು. ಆದ್ರೆ, ಬೆಳೆದು ನಿಂತಿರುವ ಟೊಮ್ಯಾಟೊ ತೋಟಗಳು ಈಗ ಅದೊಂದು ವೈರಸ್ಗೆ ಬಲಿಯಾಗುತ್ತಿವೆ. ವೈರಸ್ ತಗುಲಿ 48 ಗಂಟೆಗಳಲ್ಲಿ ತೋಟಗಳಲ್ಲಿರುವ ಕಾಯಿ, ಹಣ್ಣು, ಗಿಡ ಎಲ್ಲವೋ ನಾಶವಾಗುತ್ತಿದೆ. ಅಷ್ಟಕ್ಕೂ ಅದ್ಯಾವ ವೈರಸ್, ಅಲ್ಲಿ ಆಗುತ್ತಿರುವುದು ಏನ್ ಅಂತೀರಾ? ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ: ಸೇಬು ಹಣ್ಣಿನ ಸೈಜ್, ಕಲರ್, ಗುಣ ಮೀರಿಸುತ್ತಿದ್ದ ಕೋಲಾರ ಚಿಕ್ಕಬಳ್ಳಾಪುರ (Chikkaballapur) ಅವಳಿ ಜಿಲ್ಲೆಗಳ ಟೊಮ್ಯಾಟೊ (tomato) ಹಣ್ಣುಗಳು, ಈಗ ಯಾರಿಗೂ ಬೇಡವಾಗಿವೆ. ಹೌದು ಟೊಮ್ಯಾಟೊ ತೋಟಗಳಿಗೆ ಇದ್ದಕ್ಕಿದ್ದಂತೆ ಬಿಳಿ ನೊಣ ಎನ್ನುವ ಮಾರಕ ವೈರಸ್ (virus) ಅಟ್ಯಾಕ್ ಆಗುತ್ತಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತೋಟಗಳು ಒಣಗಿದಂತೆ, ಟೊಮ್ಯಾಟೊ ಕಾಯಿಗಳು ಕಮರುತ್ತಿದ್ದು, ಗಿಡದಲ್ಲಿದ್ದ ಹಣ್ಣುಗಳು ಉದುರುತ್ತಿವೆ. ಇದರಿಂದ ಗುಣಮಟ್ಟದ ಟೊಮ್ಯಾಟೊ ಹಣ್ಣುಗಳು ಕೈ ಗೆ ಸಿಗದೆ ತೋಟದಲ್ಲಿಯೇ ನಾಶವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಟೊಮ್ಯಾಟೊ ಬೆಳೆಗಾರ ರಾಮಾಂಜಿನಿ ‘ಬಿಳಿ ನೋಣ ವೈರಸ್ ಕಾಟದಿಂದ ಬೇಸತ್ತು ಈಗಾಗಲೇ 4 ಎಕೆರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಕಿತ್ತು ಹಾಕಿದ್ದಾನೆ. ಇರುವ ಎರಡು ವರೆ ಎಕರೆ ಟೊಮ್ಯಾಟೊ ತೋಟಕ್ಕೂ ವೈರಸ್ ಅಟ್ಯಾಕ್ ಆಗಿದೆ. ಯಾವುದೇ ಮದ್ದು ಹೊಡೆದ್ರು, ಏನು ಪ್ರಯೋಜನ ಆಗಿಲ್ಲ. ಟೊಮ್ಯಾಟೊಗೆ ತಗುಲಿರುವ ವೈರಸ್. ಕೆಲವೇ ಗಂಟೆಗಳಲ್ಲಿ ತೋಟವನ್ನೆ ನಾಶ ಮಾಡುತ್ತಿದೆ. ಗಾಳಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ವೈರಸ್ ಹರಡಿ ಜಿಲ್ಲೆಯ ಟೊಮ್ಯಾಟೊ ತೋಟಗಳನ್ನೆ ಆವರಿಸಿದ್ದು , ನಿನ್ನೆ(ಜೂ.13) ಚಿಕ್ಕಬಳ್ಳಾಪುರ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಗಾಯತ್ರಿ, ಸಹಾಯಕ ತೋಟಗಾರಿಕೆ ಅಧಿಕಾರಿ ಕಮಲಾ ಅವರು ರಾಮಾಂಜಿನಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:Viral Photos: ಛೀ.. ಇದೇನಿದು ಟೊಮೆಟೊ ಗಿಡದಲ್ಲಿ ಕಾಂಡೋಮ್, ಅಸಲಿ ಕಥೆ ಇಲ್ಲಿದೆ ನೋಡಿ
ಕೊರೊನಾ ವೈರಸ್ ಮನುಷ್ಯರಿಗೆ ತಗುಲಿ ಮನುಷ್ಯ ಸಂಕುಲಕ್ಕೆ ಅಪಾರ ಹಾನಿ ಮಾಡಿದ ಹಾಗೆ, ಬಿಳಿ ನೋಣ ವೈರಸ್ ಟೊಮ್ಯಾಟೊಗೆ ತಗುಲಿ ಟೊಮ್ಯಾಟೊ ಬೆಳೆಯನ್ನೆ ನಾಶ ಮಾಡುತ್ತಿದೆ. ಇದರಿಂದ ಟೊಮ್ಯಾಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ